ಚಿಂಚೋಳಿ ತಾಲೂಕಿನ ಸುಮಾರು 30 ರಿಂದ 35 ಗ್ರಾಮಗಳು ಸೇಡಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ, ಯಾವ ಯಾಕಾಪೂರ ಮತ್ತು ರಾಮತೀರ್ಥ ಗ್ರಾಮಗಳು ಅಭಿವೃದ್ಧಿ ಕೆಲಸಗಳಲ್ಲಿ ಮರಿಚಿಕೆಯಾಗಿದೆ. ಶರಣಪ್ರಕಾಶ್ ಪಾಟೀಲ್ ಸಚಿವರು ಹಾಗೂ ಸಂಸದರಾದ ರಾಧಾಕೃಷ್ಣ ಪ್ರತಿನಿಧಿಸುವ ಕ್ಷೇತ್ರಗಳ ಗ್ರಾಮಗಳಾಗಿವೆ, ಗ್ರಾಮಗಳ ಜನರು ಮುಗ್ಧರು ಇವರಿಗೆ ರಾಜಕೀಯ ಗೊತ್ತಿಲ್ಲ ಮತದಾನ ಮಾಡುವುದು ಮಾತ್ರ ಗೊತ್ತಿದೆ. ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗೆ ಗ್ರಾಮಗಳ ಜನರು ಅತಿಹೆಚ್ಚಿನ ಮತಗಳು ಕಾಂಗ್ರೆಸ್ ಪಕ್ಷದ ಪರವಾಗಿ ಚಲಾಯಿಸುತ್ತಾರೆ ಸಚಿವರನ್ನು ನಂಬಿದ ಜನರು ಹತಾಶಯದಿಂದ ಗ್ರಾಮದ ಅಭಿವೃದ್ಧಿ ಶೂನ್ಯದತ್ತ ಸಾಗುವುದನ್ನು ಕಣ್ಣು ಬಿಟ್ಟು ನೋಡುವಂತಾಗಿದೆ ಸುಲೇಪೇಟ್ ದಿಂದ ಗರಗಪಳ್ಳಿ ರಸ್ತೆ ಪೂರ್ತಿ ಹಾಳಾಗಿ ಹೋಗಿದ್ದು ದುರಸ್ತಿ ಕೆಲಸವೂ ಆಗಿಲ್ಲ, ರಾಮತೀರ್ಥ ಬೆಡಪಳ್ಳಿ ಕೂಡುವ ರಸ್ತೆ ಅದೆಷ್ಟೋ ಕಾಲದಿಂದ ನಡೆದಿಲ್ಲ. ರೈತರು ಅವರ ಜಮೀನುಗಳಿಗೆ ಹೋಗಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಸುಲುಪೇಟ ದಿಂದ ಯಾಕಪುರ ಗ್ರಾಮದ ರಸ್ತೆ ಪೂರ್ತಿ ಒಡೆದು ಹಾಳಾಗಿದೆ ದ್ವಿಚಕ್ರ ವಾಹನಸವರರು ಅಪಘಾತಕ್ಕೆ ಇಡು ಆಗುತ್ತಿದ್ದಾರೆ. ಯಾಕಪುರದಿಂದ ಬೇಡಪಳ್ಳಿಗೆ ಕೂಡ ರಸ್ತೆ ನಿರ್ಮಾಣಕ್ಕೆ 2 ಕೋಟಿಗಳ ಅನುದಾನ ಅವಶ್ಯಕತೆ ಇದೆ ಎಂದು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಗ್ರಾಮಗಳು ಸಚಿವರಿಗೆ ನೆನಪು ಇಲ್ಲ ಅಂತ ಕಾಣುತ್ತಿದೆ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡದಿದ್ದಲ್ಲಿ ಮುಂಬರುವ ಚುನಾವಣೆಗಳಲ್ಲಿ ಜನರು ತಕ್ಕ ಪಾಠ ಕಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಮಾಜ ಜಾಗರಣ ಮಂಚ್ ಸಂಚಾಲಕರಾದ ರಮೇಶ ಯಾಕಾಪೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ರಾಜೇಂದ್ರ ಪ್ರಸಾದ್