• ನಿಮ್ಮಲ್ಲಿ ಪರಿಮಿಷನ್ ಇಲ್ವoತೆ ಅಂತ ಪತ್ರಕರ್ತರು ನಮ್ಮನ್ನೇ ಕೇಳ್ತಾರೆ ರೊಕ್ಕಾ ಕೊಟ್ಟೂರ್ ಏನ್ ಬೇಕ್ ಬರೀತಾ ಕೂಡ್ತಾರೆ ಅಂತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸೋಕೆ ಆಗದೆ ಅವರ ವಿರುದ್ದ ಅಸಮಾಧಾನ ಹೊರಹಾಕಿದ ಯತ್ನಾಳ್,
• ಖರ್ಗೆಗೆ ಸ್ಟೇ ವಾಪಾಸ್ ತಗೋಳಿಕೆ ಹೇಳಿ ಫ್ಯಾಕ್ಟರಿ ಪ್ರಾರಂಭ ದಲ್ಲಿ ಮದ್ಯಸ್ಥಿಕೆ ವಹಿಸಿ ನಿಮಗೂ ಕಮಿಷನ್ ಕೊಡ್ತೀನಿ ಎಂದು ಪತ್ರಕರ್ತರ ಕುರಿತು ಹಗುರವಾಗಿ ಮಾತನಾಡಿದ್ದಾರೆ, ಮಿಸ್ಟರ್ ಯತ್ನಾಳ್ ನಿಮ್ಮ ಬಗ್ಗೆ ಬರೆಯೋದೆ ತಪ್ಪಾ..? ಕಾನೂನಾತ್ಮಕವಾಗಿ ಸರಿ ಇದ್ದರೆ ಕಾನೂನು ಹೋರಾಟ ಮಾಡಿ ಫ್ಯಾಕ್ಟರಿ ಪ್ರಾರಂಭಿಸಿ ಕೊಳ್ಳಿ ನಿಮ್ಮ ಫ್ಯಾಕ್ಟರಿ ಬಂದ್ ಆಗಿರೋದಕ್ಕೆ ಪತ್ರಕರ್ತರೆ ಹೊಣೆ ಎಂಬಂತೆ ನಿಮ್ಮ ಈ ಉದ್ದಟ್ಟತನದ ವರ್ತನೆ ಸರಿಯೇ..?
ಹೌದು ಸಿದ್ದಸಿರಿ ಕಾರ್ಖಾನೆ ಪುನಃ ಪ್ರಾರಂಭಕ್ಕಾಗಿ ನಡೆಯುತ್ತಿರುವ ಧರಣಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಪತ್ರಿಕಾ ಮಾಧ್ಯಮಗಳು ಮಧ್ಯಸ್ಥಿಕೆ ವಹಿಸಿದರೆ ಅದಕ್ಕೆ ಒಳ್ಳೆಯ ಕಮಿಷನ್ ನೀಡುತ್ತೇನೆಂದು ಹೇಳಿದರು.
ಅವರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿದ್ದಸಿರಿ ಕಾರ್ಖಾನೆ ಬಂದ್ ಆಗಿದ್ದ ಹಿನ್ನಲೆ ರೈತರು ಧರಣಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡುವ ಭರದಲ್ಲಿ
ಮಾಧ್ಯಮಗಳು ಖರ್ಗೆ ಮತ್ತು ಖಂಡ್ರೆ ಅವರ ಮಧ್ಯಸ್ಥಿಕೆ ವಹಿಸಿ, ಸುಪ್ರೀಂ ಕೋರ್ಟ್ ಗೆ ಹಾಕಿದ್ದ ಕೇಸನ್ನು ಹಿಂದಕ್ಕೆ ಪಡೆಯುವಂತೆ ಮಾಡಬೇಕು. ಮಾಡಲು ಯಶಸ್ವಿ ಆದರೆ ನಿಮಗೆ ತಕ್ಕ ಕಮಿಷನ್ ಕೊಡಲಾಗುತ್ತದೆ ಎಂದು ಮಧ್ಯಾಮಗಳ ಬಗ್ಗೆ ಹಗುರವಾಗಿ, ಮತ್ತು ಖರೀದಿಸುವ ದರ್ಪ ಮೆರೆದ ಬಿಜೆಪಿ ಶಾಸಕ ಬಸವರಾಜ ಪಾಟೀಲ ಯತ್ನಾಳ್.
ಪತ್ರಿಕಾ ಮಾಧ್ಯಮದವರು ಯಾರು ಏನನ್ನು ಹೇಳುತ್ತಾರೆ ಅದನ್ನು ಪ್ರಕಟಿಸುವುದು, ಪತ್ರಿಕಾ ರಂಗದ ಧರ್ಮವಾಗಿದೆ ಮತ್ತು ಕರ್ತವ್ಯ.
ಮಾಧ್ಯದವರು ಕಮಿಷನ್ ಕೊಟ್ಟರೆ ಸುಳ್ಳು ಸುದ್ದಿ ಪ್ರಕಟಿಸಿ, ಆಗಲಾರದ ಕೆಲಸಗಳನ್ನು ಮಾಧ್ಯಮದವರು ಮಾಡುತ್ತೀರಾ, ನಿಮಗೆ ಮರಿಯಾದೆ ಏನು ಇಲ್ಲ. ಹೀಗಾಗಿ ಕಾರ್ಖಾನೆ ಪ್ರಾರಂಭಕ್ಕೆ ಮಧ್ಯಸ್ಥಿಕೆ ವಹಿಸಿ ಎಂದು ಬಹಿರಂಗವಾಗಿ ರೈತರ ಮತ್ತು ಸಾರ್ವಜನಿಕರ ಮಧ್ಯೆ ಹೇಳಿ, ಇತಿಹಾಸ ಉಳ್ಳಂತಹ ಪತ್ರಿಕಾ ರಂಗಕ್ಕೆ ಅವಮಾನಿಸಿ, ಯತ್ನಾಳ್ ಅವರು ಮಾಧ್ಯಮವರ ಮೇಲೆ ದುಡ್ಡಿನ ದರ್ಪ ತೋರಿದ್ದು ಜರುಗಿತು.
ಈ ಸಂಧರ್ಭದಲ್ಲಿ ಮಾಜಿ ಸಚಿವ ರಮೇಶ ಜಾರಕಿ ಹೊಳ್ಳಿ, ಅರವಿಂದ ನಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಶಿವಶರಣಪ್ಪ ಜಾಪಟ್ಟಿ, ನಂದಿಕುಮಾರ ಪಾಟೀಲ್, ಗೌರಿಶಂಕರ ಉಪ್ಪಿನ್, ವೀರಣ್ಣ ಗಂಗಾಣಿ ಸೇರಿ ಮುಂತಾದವರು ಉಪಸ್ಥಿತರಿದ್ದರು.