ಬೆಳಗಾವಿ: ನಗರದ ಹಿರಿಯ ಸಾಹಿತಿ, ಆಧ್ಯಾತ್ಮಿಕ ಚಿಂತಕ ಹಾಗೂ ರಾಷ್ಟ್ರೀಯ ಅಸ್ಮಿತೆಯ ಪಾಲಕರಾದ ಡಾ.ಸಿ.ಕೆ.ಜೊರಾಪುರರಿಗೆ ಮಾಯಾ ನಗರಿ ಮುಂಬೈನಲ್ಲಿ
ಶನಿವಾರ 23ರಂದು ಅಂತರಾಷ್ಟ್ರೀಯ ಮಾನವ ಅಭಿವೃದ್ಧಿ ವಿಶ್ವವಿದ್ಯಾಲಯ, ಇಂಟರ್ನ್ಯಾಷನಲ್ ಅಕ್ರೆಡಿಶನ್ ಆರ್ಗನೈಸೇಷನ್ USA ಅಡಿಯಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈಸೂರು ಅಸೋಸಿಯೇಷನ್ ಬಾಂಬೆ, ಮಾತುಂಗಾದಲ್ಲಿ ರಾಷ್ಟ್ರೀಯ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯತೆ, ಧಾರ್ಮಿಕತೆ, ಸಾಂಸ್ಕೃತಿಕತೆಯನ್ನೊಳಗೊಂಡ ಕೃತಿಗಳನ್ನು ರಚನೆ ಮಾಡುವುದರ ಮೂಲಕ, ಉಪನ್ಯಾಸಗಳನ್ನು ಏರ್ಪಡಿಸುವುದು, ಸ್ವತಃ ಉಪನ್ಯಾಸ ನೀಡುವುದರ ಮೂಲಕ ರಾಷ್ಟ್ರೀಯತ್ವದ ಬಗೆಗೆ ಜಾಗೃತಿ ಮೂಡಿಸುವುದಲ್ಲದೇ ರಾಷ್ಟ್ರೀಯತ್ವವನ್ನು ಮೈಗೂಡಿಸಿಕೊಂಡಿರುವ ಕುಂದಾನಗರಿಯ ಹಿರಿಯ ಸಾಹಿತಿ ಡಾ. ಸಿ.ಕೆ. ಜೋರಾಪೂರ ಅವರಿಗೆ ‘ರಾಷ್ಟ್ರೀಯ ಗೌರವ ಪ್ರಶಸ್ತಿ’ ನೀಡಿ ಗೌರವಿಸಿರುವುದು ಕುಂದಾನಗರಿ ಹಿರಿಯ ಸಾಹಿತಿಗೆ ಸಂದ ಗೌರವ ಎಂದರೆ ತಪ್ಪಾಗಲಾರದು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ದಾದಾಸಾಹೇಬ್ ಫಾಲ್ಕೆಯವರ ಮೊಮ್ಮಗ ಚಂದ್ರಶೇಖರ ಪುಸಾಳ್ಕರ ಪಾಲ್ಕೆ ಹಾಗೂ ಮುಂಬೈ ಹೈಕೋರ್ಟನ ವಕೀಲರಾದ ಜಿ.ಎಂ. ವಾಗೀಶ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಡಾ. ಶಶಿಕಲಾ ಬಿ., ಗುಲ್ಬರ್ಗ ವಿಶ್ವವಿದ್ಯಾಲಯಯದ ಪ್ರಾಚಾರ್ಯ ಡಾ. ಮಂಗಳಾ ಎಸ್. ಪಟೇಲ್ ಮತ್ತು ಆರ್.ಟಿ.ಡಿ. ಬ್ಲಡ್ ಬ್ಯಾಂಕ್ ಅಧಿಕಾರಿ, ಕೆಇಎಂ ಆಸ್ಪತ್ರೆ ಮುಂಬೈನ ಡಾ. ಅನಿಲ ಸ್ಯಾಮ್ಯುಯೆಲ್, ಆರ್ಮಿ ವಿಂಗನ ಚೀಪ್ ಆಫೀಸರ್ ಅಮರೇಶ ಪಾಟೀಲ, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ : ಸದಾನಂದ್ ಎಚ್