ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

 

ಗದಗ: ನೀರಿನ ಟ್ಯಾಂಕರ್ ಮಗುವಿನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮಗು ಸಾವನ್ನಪ್ಪಿರುವ ಘಟನೆ ಗದಗ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಬಳಿ ನಡೆದಿದೆ.

 

ರೀದಾ ಸೊರಟೂರು ಅನ್ನುವ 2 ವರ್ಷದ ಕಂದಮ್ಮ ಅಪಘಾತದಲ್ಲಿ ಉಸಿರು ಚೆಲ್ಲಿದೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

 

ಮಗುವನ್ನು ಅವರ ಸಂಬಂಧಿ ಸ್ಕೂಟಿಯಲ್ಲಿ ಮುಂದಗಡೆ (ಕಾಲಿನ ಬಳಿ) ಕೂರಿಸಿಕೊಂಡು ಹೋಗುತ್ತಿರುವಾಗ ಎದುರಿಗೆ ಟ್ರ್ಯಾಕ್ಟರ್ ಬಂದಿದೆ. ಇದರಿಂದ ರಸ್ತೆ ಪಕ್ಕಕ್ಕೆ ಚಾಲಕಿ ಬೈಕ್ ನಿಲ್ಲಿಸಿದ್ದಾಳೆ. ತಕ್ಷಣ ಆಯ ತಪ್ಪಿ ಮಗುವು ಬೈಕ್‌ನಿಂದ ರಸ್ತೆಗೆ ಉರುಳಿ ಬಿದ್ದಿದೆ. ಕ್ಷಣಮಾತ್ರದಲ್ಲೇ ಯಮಸ್ವರೂಪಿಯಾಗಿ ಬಂದ ನೀರಿನ ಟ್ಯಾಂಕರ್ ನ ಹಿಂಬದಿ ಚಕ್ರಕ್ಕೆ ಮಗುವಿನ ತಲೆಬುರುಡೆ ಸಿಕ್ಕು ಅಪ್ಪಚ್ಚಿಯಾಗಿ ಸ್ಥಳದಲ್ಲೇ ಮಗು ಸಾವನ್ನಪ್ಪಿದೆ.‌

ಕಣ್ಣೆದುರಿಗೆ ತನ್ನ ಕಂದಮ್ಮ ಬಲಿಯಾದ ದೃಶ್ಯ ನೋಡಿದ ಬೈಕ್‌ ಚಲಾಯಿಸುತ್ತಿದ್ದ ಮಗುವಿನ ಸಂಬಂಧಿ ಮಗುವನ್ನ ಎತ್ತಿಕೊಂಡು ಗೋಳಾಟ ನಡೆಸಿದ್ದಾಳೆ. ನಂತರ ಸ್ಥಳಿಯರು‌ ಜಮಾಯಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

 

ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ

error: Content is protected !!