ಬೀದರ ಜಿಲ್ಲೆಯ ಔರಾದ ತಾಲೂಕಿನ ಕೌಠಾ (ಬಿ) ಗ್ರಾಮ ಪಂಚಾಯತ್ ನಾ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಅನಿಲಕುಮಾರ ಕುಲಕರ್ಣಿ ರವರು ಡಾ ಬಿ.ಆರ್ ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆಯ ಸುಮಾರು 84 ಮನೆಗಳು ಹಾಗೂ PMAY ಆವಾಸ ಯೋಜನೆಯ 83 ಮನೆಗಳು ಮಂಜುರಾದರು ಇಲ್ಲಿಯ ವರೆಗೆ ಗ್ರಾಮ ಸಭೆ ಕರೆಯದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ, ಮನೆಗಳ GPS ಮಾಡಿ ಹಣ ಬಿಡುಗಡೆ ಮಾಡಲು ಸುಮಾರು 4000/ದಿಂದ 5000/- ರೂ. ಗಳನ್ನು ಫಲಾನುಭಿಗಳಲ್ಲಿ ಬೇಡಿಕೆ ಇಡುತ್ತಿದ್ದಾರೆ ಕೆಲವು ಖಾಲಿ ಚಕ್ ತಂದು ಅದರ ಮೇಲೆ ಸಹಿ ಮಾಡುವಂತೆ ಹೇಳುತ್ತಿದ್ದಾರೆ ಅದರ ಬಗ್ಗೆ ಪ್ರಶ್ನಿಸಿದರೆ ನಿಮಗೆ ತಿಳಿಯುವುದಿಲ್ಲ ಸಹಿ ಮಾಡಿ ಎಂದು ಹೇಳುತ್ತಿದ್ದಾರೆ ಪ್ರತಿ ದಿನ ಪಂಚಾಯತಿಗೆ ಬರದಿರುವುದರಿಂದ ಸಾರ್ವಜನಿಕರ ಸಮಸ್ಯೆಗಳು ಹಾಗೇ ಉಳಿಯುತ್ತಿವೆ ಇದರಿಂದ ಪಂಚಾಯತಿನ ಅಭಿವೃದ್ಧಿ ಕುಂಠಿತ ಗೊಂಡಿದೆ ಇವರ ಬಗ್ಗೆ ವಿಚಾರಿಸಿದಾಗ ಹಾರಿಕೆಯ ಉತ್ತರ ಕೊಡುತ್ತಿದ್ದಾರೆ ಆದ್ದರಿಂದ ಪಂಚಾಯತ ಅಭಿವೃದ್ಧಿಯ ದೃಷ್ಟಿಯಿಂದ ಇವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಒಬ್ಬ ದಕ್ಷ ಅಧಿಕಾರಿಯನ್ನು ಕಳುಹಿಸಬೇಕೆಂದು ಕೌಠಾ (ಬಿ) ಗ್ರಾಮ ಪಂಚಾಯತ್ ಅಧ್ಯಕ್ಷೆ ರವಿನಾ ಗೌತಮ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ