ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

ಲಕ್ನೋ: ನ್ಯಾಯ ಕೇಳಲು ಠಾಣೆಗೆ ತೆರಳಿದ ವ್ಯಕ್ತಿಯೊಬ್ಬನ ಮೇಲೆ ಪೊಲೀಸ್‌ ಅಧಿಕಾರಿಯೊಬ್ಬ ದರ್ಪ ತೋರಿಸಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ.

 

ವ್ಯಕ್ತಿಯೊಬ್ಬ ಘಟನೆಯೊಂದರ ಸಂಬಂಧ ನ್ಯಾಯ ಕೇಳಲು ಝಾನ್ಸಿಯ ಮೌರಾನಿಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾನೆ. ವ್ಯಕ್ತಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಹಿಂದಿನ ಕಾರಣವನ್ನು ಸಹ ಕೇಳದೆ ಸುಧಾಕರ್ ಕಶ್ಯಪ್ ಎಂದು ಗುರುತಿಸಲಾದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ನಿರಂತರವಾಗಿ ಕಪಾಳ ಮೋಕ್ಷ ಮಾಡುದ್ದಾನೆ.

 

ಈ ಘಟನೆಯನ್ನು ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. 41 ಸೆಕೆಂಡ್‌ಗಳಲ್ಲಿ ವ್ಯಕ್ತಿಯ ಮೇಲೆ 31 ಬಾರಿ ಕಪಾಳಕ್ಕೆ ಬಾರಿಸಿದ್ದಾನೆ.

ನೀವು ನನಗೆ ಯಾಕೆ ಹೊಡೆಯುತ್ತಿದ್ದೀರಿ ಎಂದು ವ್ಯಕ್ತಿ ಪ್ರಶ್ನೆ ಮಾಡಿದ್ದಾನೆ. ಆದರೆ ಪೊಲೀಸ್‌ ಅದನ್ನು ಸಹ ಕೇಳದೆ ಮತ್ತೆ ಮತ್ತೆ ಕಪಾಳಕ್ಕೆ ಬಾರಿಸಿದ್ದಾರೆ. ಘಟನೆಯ ವಿಡಿಯೋ ರೆಕಾರ್ಡ್‌ ಆಗಿದ್ದು, ವ್ಯಕ್ತಿ ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ವಿಡಿಯೋ ವೈರಲ್‌ ಆದ ಬಳಿಕ ಈ ಸಂಬಂಧ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಮೌರಾನಿಪುರ ಪೊಲೀಸ್ ಠಾಣೆಯ ಎಸ್‌ಎಚ್‌ ಅವರನ್ನು ಅಮಾನತು ಮಾಡಲಾಗಿದೆ. ಅವರನ್ನು ಇಲಾಖಾವಾರು ತನಿಖೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ

error: Content is protected !!