ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಆಚರಿಸಿದ ಕ್ರಿಸ್ಮಸ್ ಹಬ್ಬದ ನಿಮಿತ್ತ ಅನೇಕರು ಭಾಗಿಯಾಗಿದ್ದರು, ಡಾ.ಶಿವ್ ಕುಮಾರ್ ಶೆಟ್ಕರ್ ನಿರ್ದೇಶಕರು ಬ್ರಿಮ್ಸ್ ಆಸ್ಪತ್ರೆ ಬೀದರ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರಗಿತ್ತು. ವೈದ್ಯರು ಆಸ್ಪತ್ರೆಯ ನರ್ಸ್ ಹಾಗೂ ಸಿಬ್ಬಂದಿವರ್ಗದವರು ಸೇರಿ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಅನೇಕರು ಭಾಗಿಯಾಗಿದ್ದು,
ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ರೈಸ್ತ ಗುರುಗಳು ಪಾಸ್ಟೋರ ನೆಲ್ಸನ್ ಸುಮಿತ್ರಾ ಜಿಲ್ಲಾ ಮೇಲ್ವಿಚಾರಕರು ಅವರು ಸಂದೇಶ ನೀಡಿದರು, ಏಸು ಕ್ರಿಸ್ತ ಭೂಮಿಗೆ ದೇವರಾಗಿ ಬರಲಿಲ್ಲ ಮಾನವ ಲೋಕದಲ್ಲಿ ಮನುಷ್ಯರ ಹಾಗೆ ತಾಯಿ ಗರ್ಭದಲ್ಲಿ ಜನಸಿ ಸಾಮಾನ್ಯರಂತೆ ಜನರ ನಡುವೆ ಜೀವನ ಮಾಡುತ್ತಾ ತಾಳ್ಮೆ ಪ್ರೀತಿ ಸೋಹರ್ಧತ್ಯಯಿಂದ ಬಾಳುವುದು ಕಷ್ಟವಾದರೂ ಸತ್ಯವನ್ನೆ ಹಿಡಿದುಕೊಂಡು ನಡೆದ ಶಾಂತಿಯ ಸಂದೇಶ ನೀಡಿದ ಎಂದು ಹೇಳಿದರು ಮತ್ತು ನಾವು ನೀವು ಅವರ ಹಾಗೆ ಜೀವಸಬೇಕೆನ್ನುವ ಸಂದೇಶ ಸಾರಿದ್ದಾರೆ, ಮಗುವಾಗಿ ಜನಾಸಿ ಲೋಕಕ್ಕೆ ಶಾಂತಿಯ ಸಂದೇಶ ನೀಡಿದರೆ ಅದರ ಕುರಿತು ಈ ತಿಂಗಳು ನಾವು ಏಸು ಕ್ರಿಸ್ತ ಜನ್ಮಚರಣೆಯನ್ನು ಮಾಡುತ್ತೇವೆ ಎಂದು ಪ್ರಚಾರ ಸಾರಿದರು,
ಡಾ.ಶಿವ್ ಕುಮಾರ್ ಶೆಟ್ಕರ್ ನಿರ್ದೇಶಕರು ಬ್ರಿಮ್ಸ್ ಆಸ್ಪತ್ರೆ ಬೀದರ್ ರವರು ಪತ್ರಕರ್ತರಿಗೆ ತಿಳಿಸಿ ಪ್ರತಿವರ್ಷದಂತೆ ಈ ವರ್ಷವು ನಮ್ಮ ಈ ಆಸ್ಪತ್ರೆ ಹಾಲಲ್ಲಿ ಆಚರಣೆ ಮಾಡುತ್ತೇವೆ ತುಂಬಾ ಸಂತೋಷ ಸಂಭ್ರಮದಿಂದ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಾ ಎಲ್ಲರೂ ಸೇರಿ ಆಯೋಜನೆ ಮಾಡಿದ ಪ್ರತಿಯೊಬ್ಬರಿಗೆ ಧನ್ಯವಾದಗಳು ತಿಳಿಸುತ್ತೇನೆ ಮತ್ತು ಇಲ್ಲಿ ಬಂದು ಸಂದೇಶ ನೀಡಿದ ಕ್ರೈಸ್ತ ಗುರುಗಳು ಹಾಗೂ ದೇವರ ಸೇವಕರು ನೆಲ್ಸನ್ ಸುಮಿತ್ರ ಅವರಿಗೂ ಕೂಡ ಧನ್ಯವಾದ ಸಲ್ಲಿಸುತ್ತೇವೆ,
ಮತ್ತು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಏಸು ಕ್ರಿಸ್ತ ಹುಟ್ಟಿದ ಶುಭಾಷಯಗಳು ತಿಳಿಸುತ್ತೇವೆ ಎಂದು ಮಾತನಾಡಿ ಶುಭಕೋರಿದರು ಇದೆ ಸಂಧರ್ಬದಲ್ಲಿ ಒಳ್ಳೆ ರೀತಿಯ ಆಯೋಜನೆ ಮಾಡಿದ ನಮ್ಮ ವೈದ್ಯರು ಆಸ್ಪತ್ರೆಯ ನರ್ಸ್ ತಂಡದ ಸಿಬ್ಬಂದಿಯವರಿಗೂ ಕೂಡ ಕ್ರಿಸ್ಮಸ್ ಹಬ್ಬದ ಶುಭ ಕೋರುತ್ತಾ ಧನ್ಯವಾದಗಳು ತಿಳಿಸಿದರು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯುವುದಕ್ಕೆ ನರ್ಸ್ ಹಾಗೂ ಇಲ್ಲಿನ ಪ್ರತಿಯೊಬ್ಬರು ಕಾರಣವೆಂದು ಹೇಳಿದರು.
ವರದಿ :- ಪ್ರದೀಪ್ ಕುಮಾರ್ ದಾದಾನೂರ್