ಜೇವರ್ಗಿ : ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಶ್ರೀ ಅಮರಪ್ಪ ದೊಡ್ಡಪ್ಪ ನಿಷ್ಠಿ ದೇಶಮುಖ್ ಪ್ರೌಢಶಾಲೆಯ ಮಕ್ಕಳು ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಬಾಲಕ ಮತ್ತು ಬಾಲಕಿಯರು ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದು ಹಾಗೂ ಬಾಲಕಿಯರ ತಂಡ ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಆಯ್ಕೆಯಾದ ಮಕ್ಕಳಿಗೆ ಶಾಲೆ ಅಧ್ಯಕ್ಷರಾದ ಅಣ್ಣರಾವ್ ನಿಷ್ಠಿ ದೇಶಮುಖ್ ಶಾಲೆಯ ಮುಖ್ಯ ಗುರುಗಳಾದ ಬಿ.ಜಿ.ಮಲ್ಲಾಡ ದೈಹಿಕ ಶಿಕ್ಷಕರಾದ ಗುರುಮೂರ್ತಿ ಹಿರೇಮಠ ಹಾಗೂ ಶಾಲೆಯ ಸಹ ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಮುದ್ದು ಮಕ್ಕಳಿಗೆ ಅಭಿನಂದನೆಗಳು ಸಲ್ಲಿಸಿದರು.
ವರದಿ : ವಿರೇಶ್ ಮಠ