ಹುಕ್ಕೇರಿ.ಜಾಬಾಪೂರ ಗ್ರಾಮದಲ್ಲಿ ಬಸ್ ನಿಲ್ದಾಣ ಇದ್ದರೂ ಕೂಡ ಬಸ್ ನಿಲ್ಲಿಸದಿರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇಂದು ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಿದರು.
ಜಾಬಾಪೂರಕ್ಕೆ ಬಸ್ ನಿಲ್ಲಿಸಬೇಕೆಂದು ಹಲವು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೆ ಬಂದಿದ್ದಾರೆ. ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿ ಎರಡು ವರ್ಷಗಳಾದರೂ ಇದುವರೆಗೆ ಒಂದು ಬಸ್ಸೂ ನಿಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು.
ಇಂದು ರೊಚ್ಚಿಗೆದ್ದ ಗ್ರಾಮಸ್ಥರು ಸುಮಾರು ಒಂದು ಗಂಟೆ ಕಾಲ ವಾಹನ ಸಂಚಾರ ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದರು.
ಸ್ಥಳಕ್ಕೆ ಗೋಕಾಕ್ ಡಿವೈಎಸ್ಪಿ ಹಾಗೂ ಹುಕ್ಕೇರಿ ಬಸ್ ಡಿಪೋ ಮ್ಯಾನೇಜರ್ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಗ್ರಾಮಸ್ಥರ ಬೇಡಿಕೆ:
“ತಕ್ಷಣವೇ ಬಸ್ ನಿಲ್ದಾಣದ ಹತ್ತಿರ ಬಸ್ ನಿಲ್ಲಿಸುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮತ್ತಷ್ಟು ತೀವ್ರ ಹೋರಾಟ ನಡೆಸಲು ಸಿದ್ದರಾಗುತ್ತೇವೆ,” ಎಂದು ಗ್ರಾಮಸ್ಥರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಚಂದು ಮುತ್ನಾಳೆ. ಸಂತೋಷ ಕಾಂಬಳೆ. ರಾಹುಲ ಪಾಟೀಲ.ಈರಪ್ಪಾ ತಳವಾರ. ನ್ಯಾಮದೇವ ತಳವಾರ. ವಸಂತ ತಳವಾರ. ಮಹಾಂತೇಶ ಘಸ್ತಿ. ಲಕ್ಷ್ಮಣ್ ಭಂಡಾರಿ.ಲಗಮಪ್ಪಾ ಘಸ್ತಿ.ಸುಬಾಸ. ಸುಬ್ರಾವ. ಲೋಹಿತ್. ರಾಮಜೀ. ಮುಂತಾದ ಗ್ರಾಮಸ್ಥರು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.