ಮುಂಬೈ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನ ಹೊಂದಿದ ಸುದ್ದಿಯನ್ನು ಓದುವ ಭರದಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಿ ನ್ಯೂಸ್ ಆ್ಯಂಕರ್ ಒಬ್ಬರು ಎಡವಟ್ಟು ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಆಜ್ ತಕ್’ ಸುದ್ದಿವಾಹಿನಿಯ ಮಹಿಳಾ ನ್ಯೂಸ್ ಆ್ಯಂಕರ್ ಗುರುವಾರ ರಾತ್ರಿ (ಡಿ.26 ರಂದು) ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಧಿವಶರಾದ ಸುದ್ದಿಯನ್ನು ಬ್ರೇಕ್ ಮಾಡುವ ಭರದಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿದ್ದಾರೆ.
ನೆಟ್ಟಿಗರು ಈ ಕೆಲ ಸೆಕೆಂಡ್ಗಳ ವಿಡಿಯೋವನ್ನು ಟ್ರೋಲ್ ಮಾಡಿದ್ದಾರೆ.