ಚರ್ಚ್‌ನಲ್ಲಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಶಿಲ್ಲಾಂಗ್‌ : ಚರ್ಚ್‌ನಲ್ಲಿ ‘ಜೈ ಶ್ರೀ ರಾಮ್’ ಎಂದು

ಘೋಷಣೆ ಕೂಗಿ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಮೇಘಾಲಯ ಪೊಲೀಸರು ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

 

ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಚರ್ಚ್‌ನಲ್ಲಿ ‘ಜೈ ಶ್ರೀ ರಾಮ್’ ಎಂದು ಕೂಗುವ ಮೂಲಕ ಜನರ ಭಾವನೆಗಳಿಗೆ ನೋವುಂಟು ಮಾಡಿರುವ ವ್ಯಕ್ತಿಯನ್ನು ಆಕಾಶ್ ಸಾಗರ್ ಎಂದು ಗುರುತಿಸಲಾಗಿದೆ.

 

ಆಕಾಶ್ ಸಾಗರ್ ಗುರುವಾರ ಮಾವಿನ್ನಾಂಗ್‌ ಗ್ರಾಮದ ಚರ್ಚ್‌ಗೆ ಪ್ರವೇಶಿಸಿ ‘ಜೈ ಶ್ರೀ ರಾಮ್’ ಎಂದು ಕೂಗಿ, ಬಳಿಕ ಅದನ್ನು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

 

ಮೇಘಾಲಯ ಮುಖ್ಯಮಂತ್ರಿ ಕಾಸ್ರಾಡ್ ಕೆ ಸಂಸ್ಮಾ ಅವರು ಈ ಕೃತ್ಯವನ್ನು ಖಂಡಿಸಿದ್ದು, ಜನರ ಶಾಂತಿಯುತ ಸಹಬಾಳ್ವೆಯನ್ನು ಹಾಳುಮಾಡಲು ಉದ್ದೇಶಿಸಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

 

“ಇದು ಉದ್ದೇಶಪೂರ್ವಕ ಕೃತ್ಯ ಎಂದು ತೋರುತ್ತಿದೆ. ಸಾಮಾಜಿಕ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಕೋಮು ಸೌಹಾರ್ದತೆ ಕೆಡಿಸುವವರನ್ನು ಸರ್ಕಾರ ಬಿಡುವುದಿಲ್ಲ. ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಸಿಎಂ ಪಿಟಿಐಗೆ ತಿಳಿಸಿದ್ದಾರೆ.

 

ಪ್ರಕರಣ ಸಂಬಂಧ ಆಕಾಶ್ ಸಾಗರ್ ಎಂಬ ವ್ಯಕ್ತಿಯ ವಿರುದ್ಧ ಪೈನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೂರ್ವ ಖಾಸಿ ಹಿಲ್ಸ್ ಎಸ್ಪಿ ಸಿಲ್ವೆಸ್ಟರ್ ನಾಂಗ್ನಿಂಗರ್ ಹೇಳಿದ್ದಾರೆ.

 

ಪ್ರಕರಣ ಸಂಬಂಧ ಆಕಾಶ್ ಸಾಗರ್ ಎಂಬ ವ್ಯಕ್ತಿಯ ವಿರುದ್ಧ ಪೈನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೂರ್ವ ಖಾಸಿ ಹಿಲ್ಸ್ ಎಸ್ಪಿ ಸಿಲ್ವೆಸ್ಟರ್ ನಾಂಗ್ನಿಂಗರ್ ಹೇಳಿದ್ದಾರೆ.

 

ಆಕಾಶ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತೆ ಏಂಜೆಲಾ ರಂಗಡ್ ಅವರು ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ.

error: Content is protected !!