ಎತ್ತುಗಳನ್ನು ಶೃಂಗರಿಸಿಕೊಂಡು ಹೋಲಕ್ಕೆ ತೆರಳಿದ ರೈತರು
ಇನ್ನೊಂದು ಕಡೆ ಭೂಮಿತಾಯಿಯ ಪೂಜೆಯಲ್ಲಿ ತೊಡಗಿರುವ
ಮಹಿಳೆಯರು
ಮತ್ತೊಂದು ಕಡೆ ಕುಟುಂಬಸ್ಥರು ಸ್ನೇಹಿತರು ಸೇರಿ ಜಮೀನಿನಲ್ಲಿ ರೈತರು ಊಟ ಮಾಡುತ್ತಿದ್ದಾರೆ
ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು ತಿಳಿಸಿದರು
ಎಸ್ ಈ ದೃಶ್ಯಗಳು ಕಂಡ ಬಂದಿದ್ದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಹೌದು ಉತ್ತರ ಕರ್ನಾಟಕದ ರೈತಾಪಿ ಕುಟುಂಬದ ಕೃಷಿಕರಿಗೆ ಬಹು ದೊಡ್ಡ ಹಬ್ಬ ಎಂದರೆ ಎಳ್ಳು ಅಮಾವಾಸ್ಯೆ ಎಲ್ಲೆಲ್ಲಿಯೂ ಸಮೃದ್ಧಿಯು ವೃದ್ಧಿಸಲಿ ಎಂದು ಅನ್ನ ನೀಡುವ ಭೂಮಾತಗೆ ಪೂಜೆ ಸಲ್ಲಿಸಿ ನೈವೇದ್ಯ ರೂಪದಲ್ಲಿ ಚರಗ ಚೆಲ್ಲುವ ಹಬ್ಬ ಆಧುನಿಕತೆಯ ಭರಾಟೆಯಲ್ಲಿಯು ಗ್ರಾಮೀಣ ಸೊಗಡಿನ ಹಬ್ಬ ಗಳೆಂದರೆ ಅನ್ನದಾತರು ಮರತಿಲ್ಲ ಪ್ರತಿವರ್ಷಕ್ಕೆ ಒಮ್ಮೆ ಬರುವ ಎಳ್ಳು ಅಮಾವಾಸ್ಯೆ ದಿನ ದೆಂದು ಚರಗ ಚೆಲ್ಲುವ ಹಬ್ಬಕ್ಕೆ ಮಹಿಳೆಯರು ತಮ್ಮ ಹೋಲದಲ್ಲಿ ಮೈದುಂಬಿದ ಬೆಳೆಗಳಿಗೆ ಮತ್ತು ಬನ್ನಿ ಮರಕ್ಕೆ ಪಾಂಡವರಿಗೆ ಪೂಜೆ ಸಲ್ಲಿಸುತ್ತಾರೆ ಬೆಳಿಗ್ಗೆ ಕುಟುಂಬಸ್ಥರು ಸ್ನೇಹಿತರೊಂದಿಗೆ ಚಕ್ಕಡಿಯಲ್ಲಿ ಟ್ಯಾಕ್ಟರ್ ಯಲ್ಲಿ ಹೊಲಗಳಿಗೆ ತೆರಳಿ ಭೂಮಾತೆಗೆ ಸೀರೆ ಅರ್ಪಿಸಿ ತಾವು ತಂದಿದ್ದ ವಿವಿಧ ಸಿಹಿ ಪದಾರ್ಥದ ಬಾನದ ನೈವೇದ್ಯವನ್ನ ಬೆಳೆಗಳಿಗೆ ಚರಗ ಚಲ್ಲುವ ಮೂಲಕ ಚರಗದ ಎಳ್ಳು ಅಮಾವಾಸ್ಯೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ
ಬಂದು ಬಳಗದವರು ಒಟ್ಟಿಗೆ ಸೇರಿ ಉತ್ತರ ಕರ್ನಾಟಕದ ವಿಶಿಷ್ಟ ಮತ್ತು ಸ್ವಾದಿಷ್ಟ ಬಾರಿ ಭೋಜನ ಸವಿದು ಸಂಭ್ರಮಿಸಿದರು
ಇನ್ನೂ ಎಳ್ಳು ಅಮಾವಾಸ್ಯೆಯಲ್ಲಿ ಉತ್ತರ ಕರ್ನಾಟಕದ ಅಡುಗೆಯ ವಿವಿಧ ಸಿಹಿ ಪದಾರ್ಥಗಳು ಸೇರಿದಂತೆ ಬಗೆ ಬಗೆಯ ಚರಗದ ಹಬ್ಬಕ್ಕಾಗಿಯೇ ವಿಶೇಷ ಸಜ್ಜೆಗಡು ಬಜಿ ಮಿರ್ಚಿ ಪುಂಡಿ ಪಲ್ಯೆ ಮಡಿಕಿ ಕಾಳು ಪಲ್ಯೆ ಹೆಸರು ಕಾಳು ಪಲ್ಯೆ ಬದನೆಕಾಯಿ ಪಲ್ಯೆ ಹುರಣದ ಹೋಳಿಗೆ ಶೇಂಗಾ ಹೋಳಿಗೆ ಎಳ್ಳು ಹೋಳಿಗೆ ಕರಿಗಡಬು ಕಡಕ್ ಜೋಳದ ರೋಟ್ಟಿ ಕಡಕ್ ಸಜ್ಜೆ ರೊಟ್ಟಿ ಕರದಿರುವ ಕಡಕ್ ಜೋಳದ ರೊಟ್ಟಿ ಶೀಂಗಾ ಹಿಂಡಿ ಕಡಲೆ ಹಿಂಡಿ ಗುರಳ್ಳು ಹಿಂಡಿ ಮೊಸರು ವಿವಿಧ ಚಟ್ನಿ ಚಿತ್ರಅನ್ನ ಬಿಳೆಅನ್ನ ಸಾಂಬಾರು ಮತ್ತು ಮಜ್ಜಿಗೆ ಸಾಂಬಾರು ಹಪ್ಪಳ ಸೊಂಡಿಗೆ ಹಿಗೆ ಬಾಯಿಲ್ಲಿ ನೀರುಳ್ಳಿಸುವ ಬಾರಿ ಭೋಜನವನ್ನು ಮನೆಯವರು ಸಂಬಂಧಿಗಳು ಬಿಗರು ಬಿಜ್ಜರು ಆತ್ಮೀಯ ಸ್ನೇಹಿತರೊಂದಿಗೆ ಸೇರಿಕೊಂಡು ಹೋಲದಲ್ಲಿ ಇರುವ ಬನ್ನಿ ಮರದ ನೆರಳಲ್ಲಿ ಕುಳಿತು ಬಗೆಬಗೆಯ ಸಿಹಿ ಭೋಜನ ಸವಿದು ತೃಪ್ತಿ ಪಡುತ್ತಾರೆ ಇನ್ನು ಈ ಹಬ್ಬ ಸುಖ ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿ ಆಚರಿಸಲಾಗುತ್ತೆ ನೇಗಿಲಯೋಗಿಗಳು ಅಂತು ಖುಷಿ ಖುಷಿಯಿಂದ ಭೂಮಾತೆಗೆ ಪೂಜಿಸಿ ಸಂಭ್ರಮ ಪಡುತ್ತಾರೆ
ಆಧುನಿಕತೆಯ ಬರಟೆಯಿಂದ ಹಬ್ಬ ಹರಿದಿನಗಳು ಕಡಿಮೆ ಆಗುತ್ತಿರುವ ದಿನಗಳಲ್ಲಿ ವಿಶಿಷ್ಟದಿಂದ ಚರಗ ಚೆಲುವ ಎಳ್ಳು ಅಮಾವಾಸ್ಯೆ ಕೃಷಿಕರ ಹಬ್ಬ ಎಲ್ಲರನ್ನು ಹಿಡಿದಿಟ್ಟಿದೆ
ಆದರು ಏನೇ ಇರಲಿ ವರ್ಷಕ್ಕೊಮ್ಮೆ ಎಲ್ಲವನ್ನು ಮರೆತು ಹಿಗೆ ಮನೆಯವರು ಬಂಧು ಬಾಂಧವರು ಬಿಗರು ಬಿಜ್ಜರು ಆತ್ಮೀಯ ಸ್ನೇಹಿತರು ಮತ್ತು ಗೆಳೆಯರೊಂದಿಗೆ ಹೊಲದಲ್ಲಿ ಕುಳಿತು ರುಚಿ ರುಚಿ ಭೋಜನ ಸವಿದು ಖುಷಿಯಿಂದ ಹೋಲದಿಂದ ಕಡೆಲೆ ಕಾಯಿ ತಿನ್ನುತ್ತಾ ಕುಟುಂಬ ಸಮೇತವಾಗಿ ವಾಪಾಸ್ ಮನೆಗೆ ಬರುತ್ತಾರೆ ಎಂದು ಯಂಕಪ್ಪ ಕೋಳೂರು ಇವರು ತಿಳಿಸಿದರು
ಈ ಸಂದರ್ಭದಲ್ಲಿ ರೈತರಾದ ಮಾಂತೇಶ ಕೋಳೂರ.ಶರಬಣ್ಣ ಕೋಳೂರ. ಬಸವರಾಜ ಕೋಳೂರ. ಮಂಜುನಾಥ್ ಲಲಿತಾ ಕೋಳೂರ. ಸರಸ್ಸತಿ ಕೋಳೂರ. ಸವಿತಾ ಕೋಳೂರ.ಬಸವರಾಜ.ಜೋತೆವ್ವ. ಮಣಿವ್ವ. ತ್ರುತಿ. ತಿಲಕ್.ಸಂಬಂಧಿಕರು ಸ್ನೇಹಿತರು ಇತರರು. ಪಾಲ್ಗೊಂಡಿದ್ದರು.