ಬೆಂಗಳೂರು : 2,000/- ಮುಖಬೆಲೆಯ ₹18 ಲಕ್ಷ ಮೌಲ್ಯದ ನೋಟುಗಳ ವಶ.
ಹಲಸೂರು ಗೇಟ್ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕರಾದ ಪಿರಾದುದಾರರು ದಿನಾಂಕ:17/10/2025 ರಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ದೂರಿನಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿರುವ ₹ 2,000/-ಮುಖಬೆಲೆಯ ನೋಟುಗಳ ಸಿರೀಸ್ ಹಾಗೂ ಕ್ರಮಸಂಖ್ಯೆಗಳನ್ನು ತಿದ್ದಿ, ಆರ್‌ಬಿಐಗೆ ಜಮಾ ಮಾಡಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಹಣವನ್ನು ಪಾವತಿ ಮಾಡಿದ್ದ. ವ್ಯಕ್ತಿಯನ್ನು ಕಬ್ಬನ್‌ಪೇಟೆಯ ಆತನ ವಾಸದ ಮನೆಯಿಂದ ದಿನಾಂಕ:24/10/2025 ರಂದು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ₹ 40,000/- ಹಣವನ್ನು ಬ್ಯಾಂಕ್‌ಗೆ ಪಾವತಿ ಮಾಡಿರುವುದನ್ನು ತನ್ನೊಪ್ಪಿಕೊಂಡಿದ್ದು, ಆ ಹಣವನ್ನು ಕಮಿಷನ್ ಆಸೆಗಾಗಿ ಪರಿಚಯವಿದ್ದ ಇಬ್ಬರು ವ್ಯಕ್ತಿಗಳಿಂದ ಹಣವನ್ನು ಪಡೆದಿರುವುದಾಗಿ ತಿಳಿಸಿರುತ್ತಾನೆ. ಆ ಇಬ್ಬರು ಪರಿಚಯವಿರುವ ವ್ಯಕ್ತಿಗಳನ್ನು ಅದೇ ದಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:25/10/2025 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 06 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಯಿತು.
ಸುದೀರ್ಘವಾಗಿ ತನಿಖೆಯನ್ನು ಮುಂದುವರೆಸಿ, ಮೂವರು ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿ, ಆರೋಪಿಗಳಿಗೆ ಪರಿಚಯವಿರುವ ಮೂವರು ವ್ಯಕ್ತಿಗಳಿಂದ ₹ 8 ಲಕ್ಷ ಹಣವನ್ನು (ಎರಡು ಸಾವಿರ ಮುಖಬೆಲೆ) ಆರ್.ಬಿ.ಐ ನಲ್ಲಿ ಹಣವನ್ನು ಜಮಾಮಾಡಿ, ಅವರುಗಳ ಖಾತೆಗೆ ವರ್ಗಾಯಿಸಲು ಪಡೆದಿರುತ್ತಾರೆ.
* 8 ಲಕ್ಷ ಹಣವನ್ನು ನೀಡಿದ ಮೂವರು ವ್ಯಕ್ತಿಗಳನ್ನು ದಿನಾಂಕ:25/10/2025 ರಂದೇ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದವರನ್ನು ವಿಚಾರಣೆಗೊಳಪಡಿಸಲಾಗಿ, ಆ ಮೂವರು ವ್ಯಕ್ತಿಗಳು ಸಾರ್ವಜನಿಕರಿಗೆ ಪೂಜೆ ಮಾಡಿಸುವ ನೆಪದಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿರುವ ನಿರಂತರ ಕ್ರಮಸಂಖ್ಯೆವುಳ್ಳ 2018ನೇ ಇಸವಿಯಲ್ಲಿ ಮುದ್ರಿತವಾಗಿರುವ ಸಿರೀಸ್ M.N.O,P,G ಹೊರತು ಪಡಿಸಿ, ₹ 2000/- ಮುಖ ಬೆಲೆಯ ನೋಟುಗಳನ್ನು ನೀಡಿದ್ದಲ್ಲಿ ಅವುಗಳನ್ನು ನೂರು ಪಟ್ಟು ಹಣವನ್ನು (ಬಾರಿಷ್) ಹಣದ ಮಳೆ ಸುರಿಸುವುದಾಗಿ ನಂಬಿಸಿ, ಸಾರ್ವಜನಿಕರಲ್ಲಿ ಇನ್ನೂ ಉಳಿಸಿಕೊಂಡಿರುವ ₹ 2000/- ಮುಖ ಬೆಲೆಯ ನೋಟುಗಳನ್ನು ತಮಗೆ ನೀಡುವಂತೆ
ಆಮಿಷವೊಡ್ಡಿರುವುದಾಗಿ ತಷ್ಟೊಪ್ಪಿಕೊಂಡಿರುತ್ತಾರೆ. ಈ ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 9 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು. ಇವರ ಅಮಿಷಕ್ಕೆ ಒಳಗಾದ ಇತರೆ ಮೂವರು ವ್ಯಕ್ತಿಗಳನ್ನು ಆಂಧ್ರಪ್ರದೇಶದ ವಿವಿಧ ಸ್ಥಳಗಳಿಂದ ದಿನಾಂಕ:28/10/2025 ರಂದು ವಶಕ್ಕೆ ಪಡೆದುಕೊಳ್ಳಲಾಯಿತು. ಅವರುಗಳನ್ನು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾರೆ. ಅವರುಗಳಿಂದ ಎರಡು ಸಾವಿರ ಮುಖ ಬೆಲೆಯ ₹ 6 ಲಕ್ಷ ಮೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಯಿತು.
ಇವರೆಲ್ಲರಿಗೂ ನೋಟಿನ ಮೇಲಿರುವ ಕ್ರಮ ಸಂಖ್ಯೆ, ಸಿರೀಸ್ ಮತ್ತು ಮುದ್ರಿತ ವರ್ಷವನ್ನು ಇವರುಗಳ ಬೇಡಿಕೆಯಂತೆ ತಿದ್ದುಪಡಿ ಪಡಿಸುತ್ತಿದ್ದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ನೀಡಿದ್ದು, ಆ ವ್ಯಕ್ತಿಯನ್ನು ಅದೇ ದಿನ ಯಶವಂತ ಪುರದಲ್ಲಿ ವಾಸವಿರುವ ಆತನ ವಾಸದ ಮನೆಯಿಂದ ವಶಕ್ಕೆ ಪಡೆದುಕೊಳ್ಳಲಾಯಿತು. ಆತನ ವಶದಿಂದ ಎರಡು ಸಾವಿರ ಮುಖ ಬೆಲೆಯ ₹ 6 ಲಕ್ಷ ಮೌಲ್ಯದ ನೋಟುಗಳು ಹಾಗೂ ನೋಟಿನ ಕ್ರಮ ಸಂಖ್ಯೆ, ಸಿರೀಸ್ ಮತ್ತು ಮುದ್ರಿತ ವರ್ಷವನ್ನು ತಿದ್ದಲು ಉಪಯೋಗಿಸಿದ ಪರಿಕರಗಳನ್ನು ವಶಪಡಿಸಿಕೊಳ್ಳಲಾಯಿತು.
ಒಟ್ಟಾರೆ ಈ ಪ್ರಕರಣದಲ್ಲಿ ಎರಡು ಸಾವಿರ ಮುಖ ಬೆಲೆಯ * 18,00,000/-(ಹದಿನೆಂಟು ಲಕ್ಷ
ರೂಪಾಯಿ) ವಶಪಡಿಸಿಕೊಳ್ಳಲಾಗಿದೆ.
ದಿನಾಂಕ:03/11/2025 ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು 10 ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಎಲ್ಲಾ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿತಳು ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯಮುಂದುವರೆದಿದೆ.
ಠಾಣೆಯ ಈ ಕಾರ್ಯಾಚರಣೆಯನ್ನು ಡಿ.ಸಿ.ಪಿ ಕೇಂದ್ರ ವಿಭಾಗ ರವರಾದ ಅಕ್ಷಯ್.ಎಂ.ಹಾಕೆ, ಐ.ಪಿ.ಎಸ್ ಮತ್ತು ಎ.ಸಿ.ಪಿ ಹಲಸೂರುಗೇಟ್ ಉಪ ವಿಭಾಗ ರವರಾದ ಶಿವಾನಂದ ಚಲವಾದಿ ರವರ ಮಾರ್ಗದರ್ಶನದಲ್ಲಿ ಹಲಸೂರುಗೇಟ್ ಪೊಲೀಸ್ ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವಥನಾರಾಯಣಸ್ವಾಮಿ, ಬಿ.ಎನ್ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್ ಬೆಂಗಳೂರು
