ವಡಗೇರಾದಲ್ಲಿ ತಾಲೂಕ ಕಚೇರಿಗಳು ಶಾಲಾ ಕಾಲೇಜು ಮಂಜೂರಿಗೆ ಸಿಎಂಗೆ: ಮಾಳಿಂಗರಾಯ ಮನವಿ

ವಡಗೆರಾ : ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ಕೇಂದ್ರದಲ್ಲಿ ಸರಕಾರಿ ಕಚೇರಿಗಳ ಮಂಜೂರು ಹಾಗೂ ತಾಲೂಕು ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಯುವ ಮುಖಂಡ ಮಾಳಿಂಗರಾಯ ಕಂದಳ್ಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ತಾಲೂಕ ಕೇಂದ್ರದಲ್ಲಿ ಸರಕಾರಿ ಇಲಾಖೆಯ ಕಚೇರಿಗಳನ್ನು ಆರಂಭಿಸುವುದರ ಜೊತೆಗೆ ನೂತನ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಈಗಾಗಲೇ ತಾಲೂಕು ಕೇಂದ್ರವಾಗಿ ಹಲವು ವರ್ಷಗಳೇ ಕಳೆದರೂ ಇಲ್ಲಿಯವರೆಗೆ ತಾಲೂಕಿಗೆ ಸಂಬಂಧಿಸಿದ ಕಚೇರಿಗಳನ್ನು ಆರಂಭಿಸಿಲ್ಲ ಇದರಿಂದ ತಾಲೂಕಿನ ಕೊನೆ ಭಾಗದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಆ ಕಾರಣ ಕೂಡಲೇ ತಾಲ್ಲೂಕಿಗೆ ಸಂಬಂಧಿಸಿದ ಕಚೇರಿಗಳು ಹಾಗೂ ವಿಧಾನಸೌಧ ನಿರ್ಮಾಣಕ್ಕೆ ಸರಕಾರ ಮುಂದಾಗ ಬೇಕಿದೆ ಮತ್ತು ವಡಗೇರಾ ಪಟ್ಟಣದಲ್ಲಿ ಕುಡಿಯುವಣ ನೀರಿನ ಸಮಸ್ಯೆ ಇದ್ದು ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ವಡಗೇರಾ ಗ್ರಾಮ ಪಂಚಾಯಿತಿ ಕೇಂದ್ರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ತಾಲೂಕಿನಲ್ಲಿ ಪದವಿ ಪೂರ್ವ ಪದವಿ ಮಹಾವಿದ್ಯಾಲಯ ವಸತಿ ನಿಲಯಗಳ ಮಂಜೂರ ಸರಕಾರಿ ಉರ್ದು ಪ್ರೌಢಶಾಲೆಗಳು ಮತ್ತು ರೈತರ ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣದಲ್ಲಿ ಉಪನೊಂದಣೆ ಕಚೇರಿ.ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ .ಅಗ್ನಿಶಾಮಕ ದಳ ಕಚೇರಿ. ತಾಲೂಕು ಆಸ್ಪತ್ರೆ. ಮಿನಿ ವಿಧಾನಸೌಧ ಹಾಗೂ ತಾಲೂಕಿಗೆ ಸಂಬಂಧಿಸಿದ ಇನ್ನಿತರ ತಾಲೂಕು ಕಚೇರಿಗಳು ಆರಂಭಿಸಬೇಕು ಮತ್ತು ಹಿಂದುಳಿದ ತಾಲೂಕಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳುವಂತೆ ಸಿಎಂಗೆ ಕಾಂಗ್ರೆಸ್ ಯುವ ಮುಖಂಡ ಮಾಳಿಂಗರಾಯ ಕಂದಳ್ಳಿ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು ತಾಲೂಕಿಗೆ ಅಗತ್ಯವಿರುವ ತಾಲೂಕು ಕಚೇರಿಗಳು ಹಾಗೂ ಮೂಲಭೂತ ಸೌಲಭ್ಯಗಳು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

error: Content is protected !!