ಯೋಧರ ರಾಷ್ಟ್ರ ಪ್ರೇಮದಿಂದ ದೇಶ ಸುಭದ್ರ : ಪಟ್ಟದ್ದೇವರು
ಔರಾದ್ : ಗ್ರಾಮ, ಮನೆ, ತಂದೆ-ತಾಯಿ, ಸಹೋದರ, ಸಹೋದರಿಯರು, ಪತ್ನಿ ಗೆಳೆಯರ ಸಂಬAಧಗಳನ್ನು ಕಳಚಿಕೊಂಡು ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ದೇಶದ ಗಡಿ ಕಾಯುವ ಯೋಧರನ್ನು ಗೌರವಿಸಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಹೇಳಿದರು. ತಾಲೂಕಿನ ಜಿರ್ಗಾ (ಬಿ) ಗ್ರಾಮದ ನಿವೃತ್ತ ಯೋಧ ರವೀಂದ್ರ ಕೊಡುಗೆ ಅವರಿಗೆ ಹಮ್ಮಿಕೊಂಡಿರುವ ಸತ್ಕಾರ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಗಿಲ್ ಕದನ ದೇಶದ ಯೋಧರ ಪರಾಕ್ರಮಕ್ಕೆ ಕನ್ನಡಿ. ನೆರೆ ರಾಷ್ಟçಗಳು ಒಂದಿಲ್ಲೊAದು ರೀತಿಯ ಉಪಟಳ ನೀಡುತ್ತಿವೆ. ಭಯೋತ್ಪಾದಕರು ಗಡಿಯೊಳಗೆ ನುಗ್ಗಿಬರಲು ಸತತ ಪ್ರಯತ್ನಿಸುತ್ತಲೇ ಇದ್ದಾರೆ. ಯೋಧರು ಸದಾ ಜಾಗೃತಿಯಿಂದ ಇದ್ದು, ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಬೇಕಾದ ಸಂದರ್ಭ ಬರುತ್ತದೆ. ಯೋಧರ ಶಕ್ತಿ ಮೆಚ್ಚಲೇಬೇಕು ಎಂದರು. ದೇಶ ರಕ್ಷಣೆಯಲ್ಲಿ ಯೋಧರ ಪಾತ್ರದ ಕುರಿತು ಎಷ್ಟು ಹೇಳಿದರೂ ಕಡಿಮೆ. ಆಸೆ, ಆಕಾಂಕ್ಷೆ ಬದಿಗೊತ್ತಿ ಗಡಿ ಕಾಯುವ ಮತ್ತು ಸಂದರ್ಭ ಬಂದರೆ ವೈರಿಗಳನ್ನು ದಿಟ್ಟತನದಿಂದ ಎದುರಿಸಿ ಪ್ರಾಣ ಕೊಡಲು ಹಿಂಜರಿಯುವುದಿಲ್ಲ ಎಂದರು.
ಹೇಡಗಾಪೂರ ಶ್ರೀಗಳಾದ ದಾರುಕಲಿಂಗ ಶಿವಾಚಾರ್ಯ ಮಾತನಾಡಿ, ಸೈನಿಕರು ನಮ್ಮ ದೇಶವನ್ನು ಸಂರಕ್ಷಣೆ ಮಾಡಿದರೇ, ರೈತರು ಅನ್ನ ಕೊಡುತ್ತಾರೆ. ಶಿಕ್ಷಕರು ಅಕ್ಷರಗಳನ್ನು ಕಲಿಸುವ ಮೂಲಕ ಸುಸಂಸ್ಕೃತ ವ್ಯಕ್ತಿಯಾಗಿ ರೂಪಿಸುತ್ತಾರೆ. ಆದ್ದರಿಂದ ರೈತರು, ಯೋಧರು ಮತ್ತು ಶಿಕ್ಷಕರಿಗೆ ಉನ್ನತ ದೃಷ್ಠಿಕೋನದಿಂದ ಕಾಣುತ್ತೇವೆ ಎಂದರು. ಅನುದಿನ ಅನುಸರಿಸುವ ಸಂಸ್ಥೆಯೂ ಊರಿಗೊಂದು ವನ, ಗ್ರಾಮಕ್ಕೊಂದು ಗ್ರಂಥಾಲಯ, ಹಳ್ಳಿಗೊಂದು ಯೋಗ ಮಂದಿರ ಎಂಬ ಸೇವೆ ಸಲ್ಲಿಸುತ್ತಿದೆ. ಪ್ರತಿಯೊಬ್ಬರು ಯೋಧರಿಗೆ ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.
ತಾ.ಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಮಾತನಾಡಿ, ಮನೆ, ಬಂಧು ಬಳಗ ಮತ್ತು ಸಂತೋಷಗಳನ್ನು ತ್ಯಾಗ ಮಾಡಿ ಗಡಿಯಲ್ಲಿ ದೇಶ ಕಾಯುವ ಯೋಧರ ತ್ಯಾಗ, ದೇಶಪ್ರೇಮ ಸದಾ ಸ್ಮರಣೀಯ. ಯೋಧರು ನಮಗಾಗಿ ಬಾಹ್ಯ ದುಷ್ಟ ಶಕ್ತಿಗಳಿಂದ ರಾಷ್ಟçವನ್ನು ರಕ್ಷಿಸುತ್ತಾರೆ. ಸೇವೆಯಿಂದ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿದ ರವೀಂದ್ರ ಅವರನ್ನು ಹೃದಯಸ್ಪರ್ಷಿಯಾಗಿ ಬರಮಾಡಿಕೊಂಡು ಗೌರವಿಸಿರುವುದು ಹೆಮ್ಮೆಯ ವಿಷಯ ಎಂದರು.
ಸಿಪಿಐ ರಘವೀರಸಿಂಗ್ ಠಾಕೂರ್ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಮುಖಂಡ ಸಂಗಪ್ಪ ದೇಗಲ್ವಾಡೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದಿ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪಿಕೆಪಿಎಸ್ ಅಧ್ಯಕ್ಷ ಬಸಯ್ಯ ಸ್ವಾಮಿ, ವೀರನಾರಿ ಸುಮನ್ ಜಾಧವ್, ಶ್ರೀಕಾಂತ ಕೊಡುಗೆ, ಸಂಗಮ್ಮ ಕೊಡುಗೆ, ಪತ್ರಕರ್ತ ಶಶಿಕಾಂತ ಬಂಬುಳಗೆ, ನಿವೃತ್ತ ಯೋಧ ಮಹಾದೇವ ಕೋಟೆ, ರಾಜಕುಮಾರ ಪಾಟೀಲ್, ಸದಾನಂದ ಕೋಟೆ, ಚನ್ನಪ್ಪ ಕೋಟೆ, ಪ್ರವೀಣ ಸ್ವಾಮಿ, ಪರಮೇಶ್ವರ ಬಂಬುಳಗೆ, ಸಂಜೀವಕುಮಾರ ಕೋಟೆ, ನಿಲಕಂಠ ಕೊಡಗೆ, ಸಚಿನ ಕೊಡಗೆ, ರಾಜಕುಮಾರ ಕೊಡಗೆ, ವೀರಶೆಟ್ಟಿ ಕೌಡಗಾಂವ, ವಿವೇಕಾನಂದ ಜೋಜನಾ, ಶಿವಕುಮಾರ ಪಾಟೀಲ್, ಅಮರನಾಥ ದೇಗಲವಾಡೆ, ಓಂಕಾರ ಕೋಟೆ, ಬಸವರಾಜ ಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡರು. ನಾಗರಾಜ ಬಂಬುಳಗೆ ನಿರೂಪಿಸಿದರು. ಶಿವಾನಂದ ಕೋಟೆ ಸ್ವಾಗತಿಸಿದರು. ಶಿವರಾಜ ಝಪಾಟೆ ವಂದಿಸಿದರು.
ಯೋಧನಿಗೆ ತವರಲ್ಲಿ ಭವ್ಯ ಸ್ವಾಗತ
ದೇಶದ ವಿವಿಧೆಡೆ 21 ವರ್ಷಗಳ ಕಾಲ ಸಿಆರ್‌ಪಿಎಫ್ ಯೋಧನಾಗಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಹುಟ್ಟೂರಿಗೆ ಮರಳಿದ ಜೀರ್ಗಾ(ಬಿ) ಗ್ರಾಮದ ಯೋಧ ರವೀಂದ್ರ ಕೊಡುಗೆ ಅವರನ್ನು ಗ್ರಾಮಸ್ಥರು ಭಾನುವಾರ ಅದ್ದೂರಿಯಾಗಿ ಸ್ವಾಗತಿಸಿದರು. ಧರಿ ಹನುಮಾನ ದೇವಸ್ಥಾನದಿಂದ ತೆರದ ವಾಹನದಲ್ಲಿ ಯೋಧ ರವೀಂದ್ರ ಅವರನ್ನು ಪತ್ನಿ ಅಶ್ವಿನಿ ಜತೆ ಸಂತಪೂರ ಮಾರ್ಗವಾಗಿ ಜೀರ್ಗಾ(ಬಿ) ಗ್ರಾಮದವರೆಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿದರು. ಗ್ರಾಮದ ಯುವಕರು ಕೈಯಲ್ಲಿ ರಾಷ್ಟç ಧ್ವಜವನ್ನು ಹಿಡಿದು, ಜಯಘೋಷಗಳ ಮೂಲಕ ಬೈಕ್ ರ‍್ಯಾಲಿ ನಡೆಸಿದರು. ಬಳಿಕ ನಿವೃತ್ತ ಯೋಧ ಹುಟ್ಟುರೊಳಗೆ ಕಾಲಿಡುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ, ಪುಷ್ಪಗಳನ್ನು ಚೆಲ್ಲಿ ವೇದಿಕೆ ಕರೆತಂದರು. ಈ ವೇಳೆ ಯೋಧ ತನ್ನ ಹೆತ್ತವರಿಗೆ ಸೆಲ್ಯೂಟ್ ಹೊಡೆದು, ತಲೆ ಮೇಲಿನ ಕ್ಯಾಪ್‌ನ್ನು ತೊಡಿಸಿ ಗೌರವ ಸಲ್ಲಿಸಿರುವುದು ನೆರೆದವರನ್ನು ಭಾವುಕರನ್ನಾಗಿಸಿತು. ಯೋಧನ ಆಗಮನದಿಂದ ಗ್ರಾಮದಲ್ಲಿ ಸಂಭ್ರಮದ ವಾತವರಣ ನಿರ್ಮಾಣವಾಗಿತ್ತು. ಈ ವೇಳೆ ಇತ್ತಿಚೇಗೆ ಭಾರತೀಯ ಸೇನೆಯಿಂದ ನಿವೃತ್ತಿಯಾದ ಮಹಾದೇವ ಕೋಟೆ ಅವರನ್ನು ಸಹ ಗ್ರಾಮಸ್ಥರು ಸತ್ಕರಿಸಿದರು.
ಜಿಲ್ಲೆಯ ಯೋಧರಿಗೆ ಸತ್ಕಾರ
ನಿವೃತ್ತ ಯೋಧ ರವೀಂದ್ರ ಕೊಡುಗೆ ಅವರಿಗೆ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದಲ್ಲಿ ಜಿಲ್ಲೆಯ ನಿವೃತ್ತ ಯೋಧರು ಮತ್ತು ಕರ್ತವ್ಯ ನಿರತ ಸೈನಿಕರು ಸತ್ಕರಿಸುವ ಮೂಲಕ ಗ್ರಾಮಸ್ಥರು ಗಮನ ಸೆಳೆದರು. ಅಲ್ಲದೇ ಗ್ರಾಮದಲ್ಲಿ ಸರಕಾರಿ ಹುದ್ದೆಯಿಂದ ನಿವೃತ್ತರಾದ ಗ್ರಾಮದ ಹಿರಿಯ ಜೀವಿಗಳನ್ನು ಗೌರವಿಸುವ ಮೂಲಕ ಗ್ರಾಮದ ಯುವಕರು ಭೇಷ್ ಎನಿಸಿಕೊಂಡರು.
ವರದಿ : ರಾಚಯ್ಯ ಸ್ವಾಮಿ