ರಾಯಚೂರು : ಕಲಾ ಸಂಕುಲ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದ ಆವರಣದಲ್ಲಿ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸಂಕುಲ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಮಾರುತಿ ಬಡಿಗೇರ್ ಪತ್ರಿಕೆಗೆ ತಿಳಿಸಿದ್ದಾರೆ.
ಕಳೆದ ಮೂರು ಚಿತ್ರ ಕಲಾ ಪ್ರದರ್ಶನಗಳು ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವ ಉದ್ಯಾನವನ ಮುಖ್ಯ ರಸ್ತೆಯ ಫುಟ್ಪಾತ್ ಮೇಲೆ ಚಿತ್ರ ಸಂತೆ ಮಾಡಿದ್ದೇವೆ.. ಆದರೆ ಈಗ ಅತಿ ಬಿಸಿಲು ಇರುವುದರಿಂದ ರಂಗ ಮಂದಿರ ಆವರಣದ ಒಳಗಡೆ ನಾಲ್ಕನೆಯ ರಾಜ್ಯ ಮಟ್ಟದ ಚಿತ್ರ ಕಲಾ ಪ್ರದರ್ಶನ ಒಂದು ದಿನ ನಡೆಯುವುದು .ಆಸಕ್ತರು ಅಮರೇಗೌಡ ಮೊಬೈಲ್ 83102 35776 ಇವರನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಬೇಕು . ಈ ತಿಂಗಳು 25 ರ ಒಳಗಡೆ ಹೆಸರುಗಳನ್ನು ತಿಳಿಸಬೇಕು . ಮಾರ್ಚ್ 16ರಂದು ರವಿವಾರ ನಡೆಯಲಿರುವ ಈ ಚಿತ್ರಕಲಾ ಪ್ರದರ್ಶನವನ್ನು ಸಚಿವರು ಶಾಸಕರು ಪ್ರತಿಭಾನ್ವಿತ ಕಲಾವಿದರು ಉದ್ಘಾಟನೆಯನ್ನು ಮಾಡಲಿದ್ದಾರೆ. ಚಿತ್ರಕಲಾ ಪ್ರದರ್ಶನದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಕಲಾವಿದರಿಗೆ ನೆನಪಿನ ಕಾಣಿಕೆ ಸರ್ಟಿಫಿಕೇಟ್ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಮೂಲಕ ಸಂಪರ್ಕಿಸಿರಿ ಎಂದು ಚಿತ್ರ ಕಲಾವಿದರಲ್ಲಿ ಮಾರುತಿ ಬಡಿಗೇರ್ ಮನವಿ. ಮಾಡಿಕೊಂಡಿದ್ದಾರೆ.