ಜೀತ ಕಾರ್ಮಿಕ ಪದ್ಧತಿ ನಿಷೇಧ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ

ವಿಜಯಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ವಕೀಲರ ಸಂಘ ವಿಜಯಪುರ ಹಾಗೂ ಕಾರ್ಮಿಕ ಇಲಾಖೆ ವಿಜಯಪುರ ಇವರ ಸಯುಕ್ತಶ್ರಯದಲ್ಲಿ ಜೀತ ಕಾರ್ಮಿಕ ಪದ್ಧತಿ ನಿಷೇಧ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ಜರುಗಿತು ಕಾರ್ಯಕ್ರಮದ ಉದ್ಘಾಟಕರಾಗಿ ಗೌರವಾನ್ವಿತ ಶಿವಾಜಿ ಅನಂತ್ ನಲವಡೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ಅಧ್ಯಕ್ಷತೆ ಆಫರ್ ಜಿಲ್ಲಾಧಿಕಾರಿಗಳು ಸೋಮಲಿಂಗ ಗೆಣ್ಣೂರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಅರವಿಂದ್ ಸಾಯಬಣ್ಣ ಹಾಗರಗಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ಅತಿಥಿಗಳಾಗಿ ಡಿಜಿ ಬಿರಾದರ್ ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ ವಿಜಯಪುರ ಸಂಪನ್ಮೂಲ ವ್ಯಕ್ತಿಗಳು ಮಿಸ್ಟರ್ ಕ್ರಿಸ್ತೋ ಫರ್ ಸ್ಟ್ಯಾನಿ ಅಡ್ವಕೇಟ್ ಮುಕ್ತಿ ಮೆಂಬರ್ ಬೆಂಗಳೂರು ಹಾಗೂ ವೇಣುಗೋಪಾಲ್ ಕೆ ಲೀಡ್ ಗೋರ್ಮೆಂಟ್ ರಿಲೇಶನ್ಸ್ ಐಜಿಎಂ ಬೆಂಗಳೂರು ಆರ್ ಎಸ್ ಬಿದರಿ ಮುಖ್ಯ ಕಾನೂನು ಅಭಿ ರಕ್ಷಕರು ಕಾನೂನು ನೆರವು ಅಭಿರಕ್ಷಕರ ಕಚೇರಿ ಜಿ ಕಾಸೇ ಪ್ರಾ ವಿಜಯಪುರ ಹಾಗೂ ಕಾರ್ಮಿಕ ಅಧಿಕಾರಿಗಳಾದ ಉಮಾಶ್ರೀ ಎಸ್ ಕೋಳಿ ಮತ್ತು ಜಗದೇವಿ ಸಜ್ಜನ್ ಕಾರ್ಮಿಕ ನಿರೀಕ್ಷಕರು ವಿಜಯಪುರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು,

ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಆಗಮಿಸಿದ ಮಾತನಾಡಿದ ಶಿವಾಜಿ ಅನಂತ್ ನಲವಡೆ ಕಾರ್ಮಿಕರು ಪ್ರತಿಯೊಂದು ಕೆಲಸಕ್ಕೂ ಮುಖ್ಯವಾಗಿ ಬೇಕಾಗುವಂತದ್ದು ಕಾರಣ ಪ್ರತಿಯೊಬ್ಬರೂ ಕಾರ್ಮಿಕರಿಗೆ ಅನುಕೂಲಕರವಾಗುವಂತೆ ಹಾಗೂ ಕಾರ್ಮಿಕರು ಯಾವುದೇ ಜೀತ ಪದ್ಧತಿಗೆ ಒಳಗಾಗದಂತೆ ಆ ರೀತಿ ಕಾರ್ಮಿಕರಲ್ಲಿ ಕಂಡುಬಂದಲ್ಲಿ ಅಂಥವರ ರಕ್ಷಣೆ ಮಾಡಬೇಕು ಎಂದು ಹೇಳಿದರು ಇದೇ ಸಮಯದಲ್ಲಿ ಮಾತನಾಡಿದ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಸಾಯ್ಬಣ್ಣ ಹಾಗರಗಿ ಮಾತನಾಡಿ ಕೆಲ ದಿನಗಳ ಹಿಂದೆ ಅಷ್ಟೇ ವಿಜಯಪುರ ನಗರದ ವಿವಿಧ ಕಡೆಗಳಲ್ಲಿ ಜೀತ ಪದ್ಧತಿ ಕಂಡುಬಂದಿದ್ದು ಅಂತವರ ವಿರುದ್ಧ ಕಠಿಣ ಕ್ರಮ ಕಾರ್ಮಿಕರ ಕಾನೂನು ಗಟ್ಟಿಗೊಳಿಸಬೇಕು ಹಾಗೂ ಕಾರ್ಮಿಕರ ಮೇಲೆ ಆಗುವಂತ ಶೋಷಣೆಗೆ ಪ್ರತಿಯೊಬ್ಬ ಅಧಿಕಾರಿಗಳು ಸ್ಪಂದಿಸಿ ಕಾರ್ಮಿಕರ ಜೀತ ಮುಕ್ತರಾಗಿ ಜೀವಿಸಲು ಅನುವು ಮಾಡಿಕೊಡಬೇಕು ಆ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ ಯಾವುದೇ ಕಾನೂನು ಸಲಹೆಗಳು ಬೇಕಾದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ತಮ್ಮೆಲ್ಲರ ಜೊತೆಗೆ ಇದ್ದೇ ಇರುತ್ತೆ ಎಂದು ಹೇಳಿದರು ಈ ವೇಳೆ ಮಾತನಾಡಿದ ಅಫರ್ ಜಿಲ್ಲಾಧಿಕಾರಿಗಳು ಸೋಮಲಿಂಗ್ ಗೆಣ್ಣೂರ ಮಾತನಾಡಿ ಕೆಲ ದಿನಗಳ ಹಿಂದೆ ಅಷ್ಟೇ, ವಿಜಯಪುರ ನಗರದಲ್ಲಿ ಇಟ್ಟಿಗೆ ತಯಾರಿಸುವ ಪಟ್ಟಿಯಲ್ಲಿ ನಾಲ್ಕು ಜನ ಕಾರ್ಮಿಕರಿಗೆ ಹಿಗ್ಗಾಮುಗ್ಗ ಹೊಡೆದು ಮತ್ತು ಕಾರ್ಮಿಕರಿಗೆ ಮಾನಸಿಕ ದೈಹಿಕವಾಗಿ ಹಿಂಸೆ ನೀಡಿದ ಇಟ್ಟಂಗಿ ಭಟ್ಟಿಯ ಮಾಲೀಕನ ದಬ್ಬಾಳಿಕೆ ಬಗ್ಗೆ ಖಂಡಿಸಿದರು ಮತ್ತು ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಎಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸಿ ಕಾರ್ಮಿಕರ ರಕ್ಷಣೆ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಜೀತ ಪದ್ಧತಿಯನ್ನು ನಿರ್ಮೂಲಗಳಸಬೇಕೆಂದು ಹೇಳಿದರು. ವರದಿ ಪ್ರಕಾಶ. ರಜಪೂತ

ವರದಿ : ಅಜೀಜ ಪಠಾಣ.

error: Content is protected !!