ಪ್ರತಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿವಿಧ ಬೇಡಿಕೆ ಯೊಂದಿಗೆ ರಾಜ್ಯದ ಕಲ್ಯಾಣಕ್ಕಾಗಿ ಬಜೆಟ್ ಮಂಡಿಸಲು SDPI ಆಗ್ರಹ

 

ಬರುವ ಮಾರ್ಚ್ 07 ರಂದು ರಾಜ್ಯ ಸರ್ಕಾರ 2025-26 ರ ಬಜೆಟ್ ಮಂಡಿಸುತ್ತಿದ್ದು ಈ ಬಾರಿ ಕರ್ನಾಟಕದ ರಾಜ್ಯದ ಕಲ್ಯಾಣಕ್ಕಾಗಿ ಜನತಾ ಬಜೆಟ್ ಮಂಡಿಸ ಬೇಕೆಂಬ ಆಗ್ರಹ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ್ದಾಗಿದೆ. ಹಾಗಾಗಿ ನಾವು ಕರ್ನಾಟಕದ 7ಕೋಟಿ ಜನರ ಅಗತ್ಯತೆ ಮತ್ತು ಪರಿಸ್ಥಿತಿಯನ್ನು ಅವಲೋಕನ ಮಾಡಿ ಬಜೆಟ್ ಬೇಡಿಕೆಗಳ ಪುಸ್ತಕವನ್ನು ಪ್ರಕಟಗೊಳಿಸಿದ್ದು, ಜನತಾ ಬಜೆಟ್ ಪುಸ್ತಕವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಅಲ್ಪಸಂಖ್ಯಾತ ಕಲ್ಯಾಣ, ವಸತಿ ಮತ್ತು ವಖ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್, ಪೌರಾಡಳಿತ ಖಾತೆ ಸಚಿವರಾದಂತಹ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯರೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರು ಆದ ಅಬ್ದುಲ್ ಜಬ್ಬಾರ್ ರವರಿಗೆ ಸಲ್ಲಿಸಿ, ಘನ ಸರ್ಕಾರ ಇದರಲ್ಲಿರುವ ಎಲ್ಲಾ ಆಗ್ರಹಗಳನ್ನು ಬಜೆಟ್ ನಲ್ಲಿ ಅಳವಡಿಸಲು ತಿಳಿಸಿ, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 10,000 ಕೋಟಿ ಬಜೆಟ್ ಒದಗಿಸಲು ಮನವಿ ಮಾಡಿದರು.

ಪ್ರತಿಯೊಂದು ಜಿಲ್ಲೆಯಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಆಗ್ರಹಿಸಲಾಯಿತು. ಕಳೆದ ಬಾರಿಗಿಂತ ಸಮಾಜ ಕಲ್ಯಾಣ ಇಲಾಖೆಗೆ ಶೇಕಡ 30ರಷ್ಟು ಹೆಚ್ಚು ಬಜೆಟ್ ಒದಗಿಸುವಂತೆ ಆಗ್ರಹಿಸಲಾಯಿತು.

ಪಕ್ಷದ ನಿಯೋಗದಲ್ಲಿ ರಾಜ್ಯಾಧ್ಯಕ್ಷರಾದಂತಹ ಅಬ್ದುಲ್ ಮಜೀದ್, ರಾಜ್ಯ ಉಪಾಧ್ಯಕ್ಷರಾದಂತಹ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಯಿದ್ ಪಾಷಾ,

ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಹಾಜರಿದ್ದರು.

error: Content is protected !!