ಹೆಬ್ಬಗೋಡಿ : ಪೊಲೀಸ್ ಠಾಣೆ ವ್ಯಾಪ್ತಿಯ ಮರಗೊಂಡನಹಳ್ಳಿ ಮುಖ್ಯ ರಸ್ತೆಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ಪಿರ್ಯಾದುದಾರು. ದಿನಾಂಕ:16/10/2025 ರಂದು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರ ತಂಗಿಯು ಮೃತಪಟ್ಟಿದ್ದು. ಮೃತೆಯು ಈ ಹಿಂದೆ ಮೊದಲನೇ ಮದುವೆಯಾಗಿ ಅವರಿಗೆ 15 ವರ್ಷದ ಮಗಳಿರುತ್ತಾಳೆ. ಮೊದಲನೆಯ ಗಂಡನು ಮದುವೆ ಆಗಿ ಒಂದು ವರ್ಷದಲ್ಲೇ ಅನಾರೋಗ್ಯ ಪೀಡಿತನಾಗಿ ಮೃತಹೊಂದಿರುತ್ತಾನೆ. ಈಗ್ಗೆ ಸುಮಾರು 9 ತಿಂಗಳ ಹಿಂದೆ ಮೃತೆಯು ಹೂವಿನಹಡಗಲಿ ತಾಲ್ಲೂಕಿನಲ್ಲಿರುವ ಓರ್ವ ವ್ಯಕ್ತಿಯನ್ನು ಇಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿರುತ್ತಾಳೆ,
20:15/10/2025 0 ಸಂಜೆ ಪಿರ್ಯಾದುದಾರರು ತಮ್ಮ ಮನೆಯಲ್ಲಿ ಕೆಲಸವನ್ನು ಮಾಡಿಕೊಂಡಿರುವಾಗ, ಮೃತೆಯ ಮಗಳು ಪಿರ್ಯಾದುದಾರರಿಗೆ ಕರೆ ಮಾಡಿ, ತನ್ನ ಅಮ್ಮ ಬಾತ್ ರೂಂನಲ್ಲಿ ಅಸ್ವಸ್ಥಳಾಗಿ ಬಿದ್ದಿರುತ್ತಾರೆಂದು ತಿಳಿಸಿರುತ್ತಾಳೆ. ನಂತರ ಪಿರ್ಯಾದುದಾರರು ಮನೆ ಬಳಿ ಬಂದಾಗ ಮೃತೆಯ ಮಗಳು ಮತ್ತು ಅಲ್ಲಿಯ ಸಾರ್ವಜನಿಕರು ಸೇರಿಕೊಂಡು ಅಸ್ವಸ್ಥಳಾಗಿ ಬಿದ್ದಿದ್ದವಳನ್ನು ಹೊಸೂರು ರಸ್ತೆಯಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದು, ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ನಂತರ ಪಿರ್ಯಾದುದಾರರು ಆಸ್ಪತ್ರೆಯ ಬಳಿಯಿದ್ದ ಗಂಡನನ್ನು ವಿಚಾರ ಮಾಡಲಾಗಿ, ಗಂಡನು ತಾನು ಮನೆಯಲ್ಲಿ ಇದ್ದಾಗ ತನ್ನ ಹೆಂಡತಿ ಸ್ನಾನ ಮಾಡಲು ನೀರಿನ ಬಕೀಟ್‌ನಲ್ಲಿ ಹೀಟರ್ ಹಾಕಿದ್ದಳು. ಬಹುಶಃ ಕರೆಂಟ್ ಶಾಕ್‌ನಿಂದ ಮೃತಪಟ್ಟಿರಬಹುದೆಂದು ತಿಳಿಸಿರುತ್ತಾನೆ. ನಂತರ ಪಿರ್ಯಾದುದಾರರು ಮೃತೆಯ ಮಗಳನ್ನು ಸಹ ವಿಚಾರ ಮಾಡಿದಾಗ, ಮಗಳು ತಿಳಿಸಿದ್ದೆನೆಂದರೇ, ಇತ್ತಿಚಿಗೆ ತನ್ನ ಅಪ್ಪನು, ತನ್ನ ತಾಯಿ ಬೇರೆ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಗಲಾಟೆ ಮಾಡುತ್ತಿದ್ದರು. ನಿನ್ನೆ ದಿನ ನಾನು ಬೆಳಿಗ್ಗೆ ಶಾಲೆಗೆ ಹೋಗಿ ಸಂಜೆ 5:00 ಗಂಟೆಗೆ ಮನೆಗೆ ಬಂದಾಗ ಮನೆಯ ಗೇಟ್ ಹಾಗೂ ಮನೆಯ ಮುಂಬಾಗಿಲು ತೆರೆದಿದ್ದು, ಮನೆಯ ಒಳಗಿನ ಬಾತ್ ರೂಮ್ನನ ಚಿಲಕವನ್ನು ಹೊರಗಡೆಯಿಂದ ಹಾಕಿದ್ದು, ಬಾತ್ ರೂಮ್ನನ ಬಾಗಿಲು ತೆಗೆದಾಗ ಅಮ್ಮ ಬಾತ್‌ರೂಮ್‌ನಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದರು ಎಂದು ಪಿರ್ಯಾದುದಾರರಿಗೆ ತಿಳಿಸಿರುತ್ತಾಳೆ.
ಈ ಕುರಿತು ಪಿರ್ಯಾದುದಾರು ತನ್ನ ತಂಗಿಯನ್ನು, ಆತನ ಪತಿಯೇ ಕೊಲೆ ಮಾಡಿರಬಹುದೆಂದು ಸಂಶಯಗೊಂಡು ದೂರನ್ನು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುತ್ತಾರೆ. ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಪಿರ್ಯಾದುದಾರರು ಮತ್ತು ಸಾಕ್ಷಿದಾರರಿಂದ ಮಾಹಿತಿಯನ್ನು ಕಲೆಹಾಕಿ ದಿನಾಂಕ:16/10/2025 ರಂದು ಹೊಸೂರು ಮುಖ್ಯ ರಸ್ತೆಯಲ್ಲಿರುವ ಆಸ್ಪತ್ರೆಯೊಂದರ ಬಳಿ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ನಂತರ ಆರೋಪಿಯನ್ನು ವಿಚಾರಣೆ ಮಾಡಿ, ಆರೋಪಿ ಹಾಗೂ ಸೋಕೊ (ಎಸ್.ಓ.ಸಿ.ಓ) ತಂಡದೊಂದಿಗೆ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ, ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಆರೋಪಿಯು ಆತನ ಹೆಂಡತಿಯು ಅಕ್ರಮ ಸಂಬಂಧವನ್ನು ಇಟ್ಟುಕೊಂಡಿರುವ ಸಂಶಯದಿಂದ ತಾನೆ ಸ್ವತಃ ತನ್ನ ಕೈಯಿಂದ ಹಲ್ಲೆ ಮಾಡಿ, ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿರುವುದಾಗಿ ತಪ್ರೊಪ್ಪಿಕೊಂಡಿದ್ದು, ಕೊಲೆ ಮರೆಮಾಚಲು ಮೃತಳ ದೇಹವನ್ನು ಬಾತ್ ರೂಮ್‌ನಲ್ಲಿ ಇರಿಸಿ, ವಾಟರ್‌ಹೀಟರ್ ಸ್ವಿಚ್ ಆನ್ ಮಾಡಿ ಎಲೆಕ್ಟಿಕ್ ಶಾಕ್ ಹೊಡೆದಿರುವುದಾಗಿ ಬಿಂಬಿಸುವ ಸಲುವಾಗಿ ಈ ರೀತಿ ಮಾಡಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾನೆ.
ದಿನಾಂಕ:17/10/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಎಂ.ನಾರಾಯಣ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ಕೆ.ಎಂ ಸತೀಶ ರವರ ಉಸ್ತುವಾರಿಯಲ್ಲಿ, ಹೆಬ್ಬಗೊಡಿ ಪೊಲಿಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ -ಸೋಮಶೇಖರ್ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್ ಬೆಂಗಳೂರು