ಪ್ರತಿಭೆಗೆ ತಕ್ಕ ಪ್ರೇರಣೆಯನ್ನು ನಾವೆಲ್ಲರೂ ನೀಡೋಣ – ರಾಥೋಡ

ದಿವ್ಯಾಂಗ ಮಕ್ಕಳಿಗೆ ವೈದಿಕೀಯ ತಪಾಸಣಾ ಶಿಬಿರ

ಪ್ರತಿ ಮಗುವಿನಲ್ಲಿ ಒಂದು ಅದ್ಭುತವಾದ ಶಕ್ತಿಯನ್ನು ಅಡಗಿರುತ್ತದೆ,ಅದರಲ್ಲಿ ವಿಶೇಷವಾಗಿ ವಿಕಲಚೇತನ ಮಕ್ಕಳಿಗೆ ಅದ್ಭುತವಾದ ಪ್ರತಿಭೆಯ ಶಕ್ತಿಗಳು ಅಡಗಿರುತ್ತದೆ, ಪ್ರತಿಭೆಗೆ ತಕ್ಕಂತೆ ಸಮರ್ಪಕವಾದ ಸಹಕಾರವನ್ನು ನೀಡುವುದರ ಮೂಲಕ, ಸಂದರ್ಭಕ್ಕೆ ಅನುಗುಣವಾಗಿ ಅವಕಾಶಗಳನ್ನು ಕಲ್ಪಿಸುವುದರ ಮೂಲಕ ದಿವ್ಯಂಗ ಮಕ್ಕಳಿಗೆ ಪ್ರತಿಭೆಗೆ ತಕ್ಕಂತೆ ಪ್ರೇರಣೆಯನ್ನು ನೀಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪ್ರಕಾಶ ರಾಥೋಡ
ಕ್ಷೇತ್ರ ಸಂಪನ್ಮೂಲ ಕೇಂದ್ರ ಔರಾದನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಮನ್ವಯ ಶಿಕ್ಷಣ ವಿಭಾಗದಿಂದ ಆಯೋಜಿಸಿದ 2025 26 ನೇ ಸಾಲಿನ 01ರಿಂದ 12ನೇ ತರಗತಿಯ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸನಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ದಿವ್ಯಾಂಗ ಮಕ್ಕಳಿಗಾಗಿ ಸರಕಾರದ ವಿವಿಧ ಯೋಜನೆಗಳಿವೆ, ಆ ಯೋಜನೆಗಳನ್ನ ಮರ್ಪಕವಾಗಿ ಪಾಲಕರು ಉಪಯೋಗಿಸಿಕೊಳ್ಳಬೇಕು , ಈ ಸಿಬಿರವು ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಅಲಿಂಕೋ ಸಂಸ್ಥೆಯ ಸಯುಕ್ತಾಕ್ಷರದಲ್ಲಿ ಆಯೋಜನೆಗೊಂಡಿದ್ದು ಫಲಾನುಭವಿಗಳಿಗೆ ಸರ್ಕಾರ ಮತ್ತು ಅಲಿಂಕೋ ಸಂಸ್ಥೆ ಸೇರಿ ಸಾಧನ ಸಲಕರಣೆ ವಿತರಿಸುತ್ತಾರೆ ಎಂದು ಸಮನ್ವಯ ಸಂಪನ್ಮೂಲ ವ್ಯಕ್ತಿಗಳಾದ ಡಾ ಶಾಲಿವಾನ ಉದಗಿರೆ ಪ್ರಸ್ತಾವಿಕ ಮಾತನಾಡಿದರು.

ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿರುವ 110 ವಿವಿಧ ನ್ಯೂನತೆ ಉಳ್ಳ ವಿಕಲಚೇತನ ಮಕ್ಕಳು ವೈದ್ಯಕೀಯ ತಪಾಸಣಾ ಶಿಬಿರದ ಉಪಯೋಗ ಪಡೆದುಕೊಂಡರು,

ವಿಶೇಷವಾಗಿ ಬೆಂಗಳೂರಿನ ಅಲಿಂಕೋ ಸಂಸ್ಥೆಯ ವಿವಿಧ ನ್ಯೂನತೆಯ ತಜ್ಞರು ತಪಾಸಣೆ ನಡೆಸಿದ್ದರು.

ಅಲಿಂಕೋ ಸಂಸ್ಥೆಯ ಡಾ ಚಿರಂಜೀವಿ, ಡಾ ಗೌರವಕುಮಾರ ರಾಣಾ, ಡಾ ಮೋಹಿತ ಯಾದವ,
ಸ್ಥಳೀಯ ಸರ್ಕಾರಿ ವೈದ್ಯರುಗಳಾದ ಡಾ ಸಿದ್ದಾರ್ಥ್ ಮೇಳಕುಂದೆ, ಡಾ ಅನಿಲಕುಮಾರ ಎಕಲೂರೆ, ಡಾ ರಾಜಕುಮಾರ ಬುಕ್ಕಾ ಶಿಬಿರದಲ್ಲಿ ಭಾಗವಹಿಸಿ ಮಕ್ಕಳ ತಪಾಸನೆಯನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ರಮೇಶ ಡೋಂಬಾಳೆ, ನಾಗನಾಥ ಮಾದೇವಾಡ, ಜಗದೇವಿ ವಲ್ಲಾಪುರೆ, ಪ್ರಕಾಶ ಬರೆದಾಪುರೆ, ಎಂಡಿ ನೈಮೋದ್ದೀನ ಲಿಂಬಾಪುರೆ, ಪ್ರವೀಣ ಕೋಳೆಕರ, ವೆಂಕಟ ಮತ್ತು ಅನೇಕ ಪಾಲಕರು ಭಾಗವಹಿಸಿದ್ದರು.

ವರದಿ : ರಾಚಯ್ಯ ಸ್ವಾಮಿ

error: Content is protected !!