ಔರಾದ್ : ಸಮಾಜದಲ್ಲಿ ಬೇರೂರಿದ ಅನಿಷ್ಟ ಪದ್ಧತಿಗಳು ಜನರಾಡುವ ಭಾಷೆಯಲ್ಲೇ ತ್ರಿಪದಿಗಳು ರಚಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಶ್ರೇಷ್ಠ ಸಮಾಜ ಸುಧಾರಕ ಸರ್ವಜ್ಞ ಆಗಿದ್ದರು ಎಂದು ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಹೇಳಿದರು.
ಗುರುವಾರ ಗೋರೊಬಾ ಕಾಕಾ ಸ್ವ ಸಹಾಯ ಸಂಘ ಹಾಗೂ ತಾಲೂಕು ಕುಂಬಾರ ಸಮಾಜ ವತಿಯಿಂದ ಪಟ್ಟಣದಲ್ಲಿ ಆಯೋಜಿಸಿದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ತ್ರಿಪದಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರರಾಗಿ 16ನೇ ಶತಮಾನದಲ್ಲಿ ವಿಶ್ವ ಮಾನವ ಸಂದೇಶವನ್ನು ಸಾರಿದ ಸಂತರಗಿದ್ದರು. ಅವರು ಯಾವುದೇ ಒಂದು ಜಾತಿಗೆ ಸೀಮಿತರಾಗದೆ ಸಮಾಜದಲ್ಲಿ ಎಲ್ಲ ವರ್ಗದ ಹಾಗೂ ಎಲ್ಲ ರಂಗಗಳಲ್ಲಿರುವ ಅಂಧಕಾರವನ್ನು ತೊಡೆದು ಹಾಕಲು ಶ್ರಮಿಸಿದ ಮಹಾನ್ ಚೇತನರಾಗಿದ್ದರು. ಅವರ ಆದರ್ಶಗಳು ಎಲ್ಲ ಕಾಲಕ್ಕೂ ಅನ್ವಯವಾಗಲಿದೆ ಎಂದರು.
ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ನಾಗಪ್ಪ ಕುಂಬಾರ ಮಾತನಾಡಿ, ಕುಂಬಾರ ಸಮುದಾಯದ ಜನರು ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಬೇಕು. ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ಪಡೆದು ಉನ್ನತ ಶಿಕ್ಷಣ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಣೇಶ ಕುಂಬಾರ ಚಟ್ನಾಳ, ನರಸಿಂಗ ಹಂದಿಕೇರಾ, ಈರಪ್ಪ ಕುಂಬಾರ, ಬಸವರಾಜ ಕುಂಬಾರ, ಗುಂಡಪ್ಪ ಕುಂಬಾರ, ನರಸಿಂಗ ಕುಂಬಾರ ಸೇರಿದಂತೆ ಇನ್ನಿತರರಿದ್ದರು.