ಕಾರು ಮತ್ತು ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ ₹ 14 ಲಕ್ಷ ಮೌಲ್ಯದ 13 ಕಾರುಗಳು ಮತ್ತು 2 ದ್ವಿ-ಚಕ್ರ ವಾಹನಗಳ ವಶ

ಬಸವೇಶ್ವರನಗರ : ಪೊಲೀಸ್ ಠಾಣಾ ಸರಹದ್ದಿನ ಮಂಜುನಾಥ್ ನಗರದಲ್ಲಿ ವಾಸವಿರುವ ಪಿರ್ಯಾದುದಾರರು. ದಿನಾಂಕ:17/10/2025 ರಂದು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:14/10/2025 ರಂದು ಮದ್ಯಾಹ್ನ ಮನೆಯ ಹತ್ತಿರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಕಾಫಿ ಅಂಗಡಿಯ ಎದರುಗಡೆ ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿ ಹೋಗಿರುತ್ತಾರೆ. ನಂತರ ದಿನಾಂಕ:16/10/2025 ರಂದು ಬೆಳಗಿನ ಜಾವ ಬಂದು ನೋಡಲಾಗಿ, ಕಾರು ಇರುವುದಿಲ್ಲ. ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ. ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀಧಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:17/10/2025 ರಂದು ಮಹದೇಶ್ವರನಗರದ ನಾಗರಹೊಳೆ ಸರ್ಕಲ್ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಕಾರನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಾರುಗಳು ಮತ್ತು ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.

ದಿನಾಂಕ:18/10/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದುಕೊಂಡ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಕಳವು ಮಾಡಿದ ಕಾರುಗಳನ್ನು ಚಿತ್ರದುರ್ಗ, ತುಮಕೂರು, ತಿಪಟೂರು, ಹಾಸನ ಮತ್ತು ತುರುವೆಕೆರೆಗಳಲ್ಲಿ ಮಾರಾಟ ಮಾಡಿರುವುದಾಗಿ ಹಾಗೂ 2 ದ್ವಿ-ಚಕ್ರ ವಾಹನಗಳನ್ನು ಕಮಲಾನಗರದ ಮೋರಿಯ ಬಳಿ ನಿಲ್ಲಿಸಿರುವುದಾಗಿ ತಿಳಿಸಿರುತ್ತಾನೆ.

ತನಿಖೆಯನ್ನು ಮುಂದುವರೆಸಿ, ದಿನಾಂಕ:19/10/2025 ರಿಂದ 24/10/2025 ರ ಅವಧಿಯಲ್ಲಿ ಚಿತ್ರದುರ್ಗ, ತುಮಕೂರು, ತಿಪಟೂರು, ಹಾಸನ ಮತ್ತು ತುರುವೆಕೆರೆಗಳಲ್ಲಿ ಮಾರಾಟ ಮಾಡಿದ್ದ ಒಟ್ಟು 13 ಕಾರುಗಳನ್ನು ಹಾಗೂ ಕಮಲಾನಗರದ ಮೋರಿಯ ಬಳಿ ನಿಲ್ಲಿಸಿದ್ದ 2 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ * 14,00,000/- (ಹದಿನಾಲ್ಕು ಲಕ್ಷ ರೂಪಾಯಿ),

ಪ್ರಕರಣದ ಆರೋಪಿಯ ಬಂಧನದಿಂದ 1) ಬಸವೇಶ್ವರನಗರ ಪೊಲೀಸ್ ಠಾಣೆಯ-04 ನಾಲ್ಕು-ಚಕ್ರದ ವಾಹನ ಕಳವು ಪ್ರಕರಣಗಳು ಮತ್ತು 01 ದ್ವಿ-ಚಕ್ರ ವಾಹನ ಕಳವು ಪ್ರಕರಣ, 2) ಬ್ಯಾಟರಾಯನಪುರ ಪೊಲೀಸ್ ಠಾಣೆಯ-01 ನಾಲ್ಕು-ಚಕ್ರದ ವಾಹನ ಕಳವು ಪ್ರಕರಣ, 3) ನಂದಿನಿಲೇಔಟ್ ಪೊಲೀಸ್ ಠಾಣೆಯ-01 ನಾಲ್ಕು-ಚಕ್ರದ ವಾಹನ ಕಳವು ಪ್ರಕರಣ. 4) ಮಲ್ಲೇಶ್ವರಂ ಪೊಲೀಸ್ ಠಾಣೆಯ-01 ನಾಲ್ಕು-ಚಕ್ರದ ವಾಹನ ಕಳವು ಪ್ರಕರಣ, 5) ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ-01 ನಾಲ್ಕು-ಚಕ್ರದ ವಾಹನ ಕಳವು ಪ್ರಕರಣ, 6) ಗಿರಿನಗರ ಪೊಲೀಸ್ ಠಾಣೆಯ-01 ನಾಲ್ಕು-ಚಕ್ರದ ವಾಹನ ಕಳವು ಪ್ರಕರಣ, 7) ರಾಜಗೋಪಾಲನಗರ ಪೊಲೀಸ್ ಠಾಣೆಯ-01 ನಾಲ್ಕು-ಚಕ್ರದ ವಾಹನ ಕಳವು ಪ್ರಕರಣ, 8) ಮಹಾಲಕ್ಷ್ಮೀಪುರಂ ಪೊಲೀಸ್ ಠಾಣೆಯ-01 ನಾಲ್ಕು-ಚಕ್ರದ ವಾಹನ ಕಳವು ಪ್ರಕರಣ 9) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ-01 ನಾಲ್ಕು-ಚಕ್ರದ ವಾಹನ ಕಳವು ಪ್ರಕರಣ ಮತ್ತು 01 ದ್ವಿ-ಚಕ್ರ ನಾಲ್ಕು-ಚಕ್ರದ ವಾಹನ ಕಳವು ಪ್ರಕರಣ 10) ಮಾದನಾಯನಕನಹಳ್ಳಿ ಪೊಲೀಸ್ ಠಾಣೆಯ-01 ನಾಲ್ಕು-ಚಕ್ರದ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 13 ನಾಲ್ಕು-ಚಕ್ರದ ಮತ್ತು 02 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.

ದಿನಾಂಕ:25/10/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ ಗಿರೀಶ್ ಎಸ್ ಐ.ಪಿ.ಎಸ್ ರವರ ನೇತೃತ್ವದಲ್ಲಿ, ಚಂದನ್ ಕುಮಾರ್ ಎನ್ ಸಹಾಯಕ ಪೊಲೀಸ್ ಆಯುಕ್ತರು, ವಿಜಯನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಬಸವೇಶ್ವರನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

error: Content is protected !!