ದೇವದುರ್ಗ/ಗಬ್ಬೂರು : ಫೆ, 27, ಯಾದಗಿರಿ ರಾಯಚೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಜಿ ಕುಮಾರ್ ನಾಯಕ ಅವರ ಕ್ಷೇತ್ರ ಪರೀಕ್ಷಣೆ ಸಲುವಾಗಿ ಗಬ್ಬೂರು ಗ್ರಾಮದ ಶ್ರೀ ಬೂದಿ ಬಸವೇಶ್ವರ ಸಂಸ್ಥಾನ ಮಠಕ್ಕೆ ಭೇಟಿಗೆ ಆಗಮಿಸಿದ ಸಂದರ್ಭದಲ್ಲಿ ಗಬ್ಬೂರು ಹೋಬಳಿಯ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ತಮ್ಮ ಹಲವು ದಿನದ ಸಮಸ್ಯೆಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಪತ್ರಗಳನ್ನು ಸಲ್ಲಿಸಿ ಪರಿಹರಿಸುವಂತೆ ಒತ್ತಾಯಿಸಿದರು.
ಹೇಮನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನಟ್ಟಿಗಿ ಗ್ರಾಮಕ್ಕೆ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿದ್ದು ಇಲ್ಲಿಯವರೆಗೂ ಸಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕೇವಲ ಕಾಗದ ಪತ್ರಕ್ಕೆ ಸೀಮಿತವಾಗಿದೆ ಕೇಂದ್ರ ಸರ್ಕಾರ ಆದರ್ಶ ಗ್ರಾಮದ ಅಭಿವೃದ್ಧಿಗೆಂದೆ ಸಾಕಷ್ಟು ಅನುದಾನವನ್ನು ಮೀಸಲಿಟ್ಟರೂ ಸಹ ಅಧಿಕಾರಿಗಳ ಇಚ್ಛಾ ಶಕ್ತಿ ಕೊರತೆ ಮತ್ತು ಅಸಾಧ್ಯ ತನದಿಂದ ಇಂದಿಗೂ ಸಹ ಅನುದಾನ ಬಳಕೆ ಆಗದೆ ಕೊಳೆಯುತ್ತಿದೆ ಹೊನ್ನಟಗಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ಶಾಲೆಗಳ ಮೂಲಭೂತ ಸೌಕರ್ಯ ಕೊರತೆ, ರಸ್ತೆ ಚರಂಡಿ ಹೀಗೆ ಇನ್ನಿತರ ಹಲವು ಸಮಸ್ಯೆಗಳಿಂದ ಗ್ರಾಮವು ಕೂಡಿದ್ದು ಎಲ್ಲ ಸಮಸ್ಯೆಗಳ ಪರಿಹಾರ ಮಾಡಬೇಕು, ತಾವು ಈ ದೇಶದ ಮೂಲ ನಿವಾಸಿಗಳು ಸ್ವತಂತ್ರ ಬಂದು 75 ವರ್ಷವಾದರೂ ಇಂದಿಗೂ ಹಳ್ಳಿಗಳ ಅಭಿವೃದ್ಧಿಯಿಲ್ಲ ಇನ್ನೆಷ್ಟು ವರ್ಷಗಳ ಕಾಲ ದಲಿತರ ಬಡವರ ಅಭಿವೃದ್ಧಿ ಅಂತ ಘೋಷಣೆ ಮಾಡುತ್ತೀರಾ ಎಂದು ಎಂ ಆರ್ ಎಚ್ ಎಸ್ ತಾಲೂಕ ಅಧ್ಯಕ್ಷರಾದ ಶಾಂತಕುಮಾರ್ ಹೊನ್ನಟ್ಟಿಗಿ ಅವರು ಪ್ರಶ್ನಿಸಿದರು. ಜೊತೆಗೆ ಸ್ಥಳೀಯ ಗಬ್ಬೂರು ಗ್ರಾಮದ ಜನತಾ ಕಾಲೋನಿಯಲ್ಲಿ ಮಾದಿಗ ಸಮುದಾಯದ ಮೂರರಿಂದ ನಾಲ್ಕು ಸಾವಿರ ಜನಸಂಖ್ಯೆ ಇದ್ದು ಇಲ್ಲಿ ಅನೇಕ ಸಮಸ್ಯೆಗಳ ಸರಮಾಲೆಗಳಿಂದ ಕೂಡಿದ್ದು ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ, ಅಗಸೆಯ ದ್ವಾರ ಬಾಗಿಲು, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ಅಭಿವೃದ್ಧಿಗೆ ಅನುದಾನ ಅಲ್ಲದೆ ಮಾದಿಗ ಕಾಲೋನಿಯಲ್ಲಿರುವ ಕಂದಕದಿಂದ ಅನೇಕ ತೊಂದರೆಯಾಗುತ್ತಿದ್ದೆ ಅದನ್ನು ಮುಚ್ಚಲು ತಮ್ಮ ವಿಶೇಷ ಅನುದಾನದಲ್ಲಿ ಅನುದಾನವನ್ನು ಮಂಜೂರು ಮಾಡಬೇಕು ಎಲ್ಲಾ ಸಮಸ್ಯೆಗಳನ್ನು ಸಂಸದರು ಸ್ವಯಂ ವೀಕ್ಷಿಸಿ ಆದಷ್ಟು ಬೇಗನೆ ಎಲ್ಲಾ ಸಮಸ್ಯೆಗಳಿಗೆ ಅನುದಾನವನ್ನು ಮಂಜೂರು ಮಾಡಿ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಬೇಕು ಎಂದು ದಲಿತ ಸಂಘಟನೆ ಮುಖಂಡರಾದ ಬಸವರಾಜ್ ಸೂರಿ, ಬಸವರಾಜ್ ಜಗ್ಲಿ, ರಾಜಪ್ಪ ಸಿಂಗ್ರಿ, ರಾಜಾಹುಲಿ ಸಿಂಗ್ರಿ ಅವರು ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಗ್ರಾಮಕ್ಕೆ ಆಗಮಿಸಿದ ಸಂಸದರಿಗೆ ವಿಶೇಷವಾಗಿ ಜಿಲ್ಲಾ ದಲಿತ ಮುಖಂಡರಾದ ಎಮ್ ಆರ್ ಬೇರಿ,ಶಿವರಾಯ ಅಕ್ಕರಕಿ ಅವರು ಗಬ್ಬೂರು ಹೋಬಳಿಯು ದೇವದುರ್ಗ ತಾಲೂಕಿನಲ್ಲಿಯೇ ಅತಿ ಹೆಚ್ಚು ಕಂದಾಯ ಸಂದಾಯ ಮಾಡುವ ಹೋಬಳಿಯಾಗಿದ್ದು ಸುಮಾರು 40 ರಿಂದ 45 ಹಳ್ಳಿಗಳಿಂದ ಕೂಡಿದ್ದು ದಿನನಿತ್ಯ 10 ರಿಂದ 15 ಸಾವಿರ ಜನರು ತಮ್ಮ ವ್ಯವಹಾರಕ್ಕೆ ಗ್ರಾಮಕ್ಕೆ ಭೇಟಿ ನೀಡುತ್ತಾರೆ ಇಂಥ ಬಹುದೊಡ್ಡ ಗ್ರಾಮಕ್ಕೆ ದುರದಷ್ಟ ವಷಾತ್ ತಾಲೂಕಿನ ರಾಜಕೀಯ ಮುಖಂಡರ ಇಚ್ಛಾ ಶಕ್ತಿ ಕೊರತೆಯಿಂದ ತಾಲೂಕು ಸ್ಥಾನ ತಪ್ಪಿದ್ದು ನಮ್ಮ ದುರ್ದೈವ ಅಲ್ಲದೆ ಗಬ್ಬೂರು ಗ್ರಾಮಕ್ಕೆ ನಿತ್ಯ ಐದು ನೂರರಿಂದ ಆರುನೂರು ವಿದ್ಯಾರ್ಥಿಗಳು ದಿನಾಲು 40 ರಿಂದ 45 ಕಿ.ಮೀ ಪ್ರಯಾಣ ಮಾಡಿ ದೂರದ ರಾಯಚೂರು ದೇವದುರ್ಗ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಇದರಿಂದ ಪಾಲಕರಿಗೆ ಆಗುವ ವಿದ್ಯಾರ್ಥಿನಿಯರಿಗೆ ಬಹಳ ಅನಾನುಕೂಲವಾಗುತ್ತಿದ್ದು ಶಿಕ್ಷಣದಲ್ಲಿ ಈ ಮೊದಲೇ ಮುಂದುವರೆದ ತಾಲೂಕು ಆಗಿದ್ದು ಈ ಕೂಡಲೇ ತಾವುಗಳು ಕಾಳಜಿ ವಹಿಸಿ ಗಬ್ಬೂರು ಗ್ರಾಮಕ್ಕೆ ಸರಕಾರಿ ಪದವಿ ಕಾಲೇಜು ಹಾಗೂ ಹಾಸ್ಟೆಲ್ ಮಂಜೂರಾತಿ ಮಾಡಬೇಕು ಇದರಿಂದ ಸಾವಿರಾರು ವಿದ್ಯಾರ್ಥಿನಿಯರಿಗೆ ಅನುಕೂಲವಾಗುತ್ತದೆ ಇದರ ಜೊತೆಗೆ ಈಗಾಗಲೇ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದ ಗಬ್ಬೂರು ಆರೋಗ್ಯ ಕೇಂದ್ರಕ್ಕೆ ನುರಿತ ವೈದ್ಯರನ್ನು ನೇಮಿಸಬೇಕು ಮತ್ತು ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಸಮಸ್ಯೆಗಳನ್ನು ಮನವರಕೆ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸದಾಶಿವಯ್ಯ ಸ್ವಾಮಿ ಮಠ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಸಿದ್ದಯ್ಯ ತಾತ ಗುರುವಿನ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ರಾಮಣ್ಣ ಇರುಬಿಗೇರ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಆದನಗೌಡ ಬಂಕಲ್ ದೊಡ್ಡಿ, ಬಸವರಾಜ ಸಾವು ಬೆಳಗುಂದಿ, ಮೆಹಬೂಬ್ ಪಾಷಾ ನಾಯಕ್, ಎಜಾಜ್ ಪಟೇಲ್ ಖಾಜಿ, ಬೂದೆಯ್ಯಸ್ವಾಮಿ ಸಾಲಿ, ಕರ್ಣ ಮಂದಕ್ಕಲ್, ಮಾರ್ತಾಂಡ,ಮುತ್ತುರಾಜ್ ಜಾಕೋಬ್, ವಿವಿಧ ಕಾಂಗ್ರೆಸ್ ಮುಖಂಡರು ದಲಿತ ಪರ ಸಂಘಟನೆ ಮುಖಂಡರು ಸರೋಜನಿಕರು ಭಾಗಿಯಾಗಿದ್ದರು.