ಹೋಳಿ ಹಬ್ಬದ & ರಂಜಾನ್ ಎರಡೂ ಹಬ್ಬಗಳ ಶಾಂತಿ ಸಭೆ

ಘಟಪ್ರಭಾ : ಹಿಂದೂ – ಮುಸ್ಲಿಂ ಸಮುದಾಯದ ಪ್ರತಿ ಯೊಬ್ಬರೂ ಹೋಳಿ ಮತ್ತು ರಂಜಾನ್ ಎರಡೂ ಹಬ್ಬಗಳನ್ನು ಎಲ್ಲರೂ ಕೊಡಿ ಶಾಂತಿ ಸೌಹಾದರ್ತಯಿಂದ ಆಚರಿಸಬೇಕೆಂದು ಘಟಪ್ರಭಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಚ್.ಡಿ.ಮುಲ್ಲಾ ಹೇಳಿದರು.
ಅವರು ಪೋಲಿಸ ಠಾಣೆಯ ಸಮುದಾಯ ಭವನದಲ್ಲಿ ಸಂಜೆ ಮಂಗಳವಾರದಂದು ಹೋಳಿ ಹಬ್ಬ ಹಾಗೂ ರಂಜಾನ ಹಬ್ಬದ ನಿಮಿತ್ತ ಸಿಪಿಐ ಅವರ ನೇತೃತ್ವದಲ್ಲಿ ಶಾಂತಿ ಪಾಲನಾ ಸಭೆಯಲ್ಲಿ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಕರವೇ ರಾಜ್ಯಾಧ್ಯಕ್ಷ ಡಾ.ಕೆಂಪಣ್ಣಾ ಚೌಕಶಿ, ಕುಮಾರ ಹುಕ್ಕೇರಿ, ವೀರಣ್ಣಾ ಸಂಗಮನ್ನವರ, ಮಲ್ಲಿಕಾರ್ಜುನ ಅರಭಾಂವಿ, ಕಾಶಪ್ಪ ನಿಂಗನ್ನವರ, ಮಲ್ಲು ಕೋಳಿ, ಸುರೇಶ ಪೂಜೇರಿ, ಮುಸ್ಲಿಂ ಸಮುದಾಯದ ಶೌಕತ ಕಬ್ಬೂರ, ಹಜರತಸಾಬ ಕಬ್ಬೂರ, ಕುತಬುದ್ದಿನ ಕಡಲಗಿ, ಹುಸೇನ ಬುದಿಹಾಳ, ಮಾಜಿ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ್ ಬಟಕುರ್ಕಿ, ದಿಲಾವರ ನಧಾಪ, ಮದಾರ ನಾಲಬಂದ, ಸಿಬ್ಬಂದಿಗಳಾದ ರಾಜು ದೋಮಾಳೆ, ಬಿ.ಎಸ್.ನಾಯಿಕ ಸೇರಿದಂತೆ ಶಿಂದಿಕುರಬೇಟ, ಅರಭಾಂವಿ, ತುಕ್ಕಾನಟ್ಟಿ ಪಾಮಲದಿನ್ನಿ, ಹಿರಿಯರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!