ಗುಡಸ : 2025ನೇ ಸಾಲಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ನಿಮಿತ್ಯ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸ್ಪೋರ್ಟ್ಸ್ ಕ್ಲಬ್ ಗುಡಸ ವತಿಯಿಂದ ತೃತೀಯ ಬಾರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು ಹುಕ್ಕೇರಿ ತಾಲೂಕಿನ ದಲಿತ ಮುಖಂಡರು ಹಾಗೂ ಮಾಜಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿ.ಬೆಂಗಳೂರು.ಇದರ ಸದಸ್ಯರಾದ ಸುರೇಶ ತಳವಾರ ಇವರು ರಬ್ಬೀನ್ ಕತ್ತರಿಸುವದರ ಮುಖಾಂತರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆಯನ್ನು ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ ಎಂದು ಹೇಳಿದರು ಮತ್ತು ಯಾರು ವೈ ಮನಸ್ಸು ಮಾಡಿಕೊಳ್ಳದೆ ಆಟವನ್ನು ಆಡಬೇಕೆಂದು ತಿಳಿ ಹೇಳಿದರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಆದರ್ಶವನ್ನು ಪಾಲಿಸುತ್ತಾ ಶಿಕ್ಷಣಕ್ಕೆ ಎಲ್ಲರೂ ಹೆಚ್ಚಿನ ಒತ್ತನ್ನು ಕೂಡ ಮತ್ತು ನಾವೆಲ್ಲರೂ ಆರ್ಥಿಕತೆಯಲ್ಲಿ ಮುಂದೆ ಬಂದರೆ ಮಾತ್ರ ನಮ್ಮ ಸಮಾಜ ಸದೃಢರಾಗಲು ಸಾಧ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತೇದಾರರಾದ ಯಲ್ಲಪ್ಪ ಡಪ್ಪರಿ.ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಕಾಂಬಳೆ ಮತ್ತು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಪ್ಪಣ್ಣ ಬಸಪ್ಪ ಖಾತೆದಾರ.. ಸದಸ್ಯರಾದ ಕುಮಾರ ಪಾತ್ರೊಟ ಮತ್ತು ಅರುಣ್ ನೇರ್ಲಿ ಮತ್ತು ಮುಖಂಡರಾದ ಮುತ್ತು ಕಾಂಬ್ಳೆ ಮಂಜುನಾಥ್ ಕಾಮತ. ಶಂಕರ ಶಮರಂತ ವಿಠಲ ಬಂಗಾರಿ ,ಮಹೇಶ್ ಬಂಗಾರಿ, ಈರಗೌಡ ಅಮ್ಮನಗಿ, ಆನಂದ ಕಾಂಬ್ಳೆ, ಸದಾನಂದ H, ಪ್ರಮೋದ್ ಕೆಂಪರಾಯಗೂಲ್ ವಿಶಾಲ್ ಮಾರುತಿ ಕಾಂಬ್ಳೆ ಶಿವು ಮಾಲಕರಿ.ಟೀಮ್ ಓನರ್ಗಳಾದ ಶಶಿಕಾಂತ ಹೆಗ್ಗಪ್ಪಗೋಲ್ ಬಸವರಾಜ್ ಶಮರಂತ ಮತ್ತು ಕೃಷ್ಣ ಖಾತೆದಾರ್,ವಿಜಯ ನಡುಗೇರಿ ಮತ್ತು ಅವಿನಾಶ್ ಕೋರೆ ರಾಹುಲ್ ಖಾತೆದಾರ್ ಮುಂತಾದವರು ಉಪಸ್ಥಿತರಿದ್ದರು.
ವರದಿ/ಸದಾನಂದ ಎಚ್