ಹುಮನಾಬಾದ : ಶ್ರೀರಾಮ ನವಮಿ ಅಂಗವಾಗಿ ತಾಲ್ಲೂಕಿನ ಹುಡಗಿ ಗ್ರಾಮದ ಶ್ರೀ ವಾಲ್ಮೀಕಿ ರಾಮ ಮಂದಿರದ ಹತ್ತಿರದದಲ್ಲಿರುವ ರಾಮನ ವೃತ್ತದಲ್ಲಿ ರಾಮನ ಭಾವಚಿತ್ರಕ್ಕೆ ಊರಿನ ಗ್ರಾಮಸ್ಥರಿಂದ ವಿಶೇಷ ಪೂಜೆ ನೆರವೇರಿಸಲಾಯಿತ್ತು. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲ್ಲೇ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಗಳಲ್ಲಿ ಭಾಗವಹಿಸಿದ ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತಮ್ಮ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಊರಿನ ಗ್ರಾಮಸ್ಥರು ರಾಮ ಮಂದಿರಕ್ಕೆ ತೆರಳಿ ನೈವಿದ್ಯವನ್ನು ಆರ್ಪಿಸಿ ದರ್ಶನ ಪಡೆದು ಪುನೀತರಾದರು. ಭಾನುವಾರ ಸಾಯಂಕಾಲ ತೊಟ್ಟಿಲು ಕಾರ್ಯಕ್ರಮದಲ್ಲಿ ಇಡೀ ರಾತ್ರಿವಿಡಿ ಭಜನೆ ಕಿರ್ತನೆ ಹಾಗೂ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತ್ತು. ಈ ಸಂದರ್ಭದಲ್ಲಿ ಹುಸೇನಪ್ಪ ಮಂಗಲಗಿ. ಮಾರುತಿ ಪದ್ಮ. ವೀರಣ್ಣ ಉದ್ಗೀರ್. ದಯಾನಂದ ಮೇತ್ರಿ. ವಿಜಯಕುಮಾರ್ ಬೋಯಿ. ಶಿವರಾಜ್ ಛತ್ರಿ. ಮಾರುತಿ ಉದ್ಗೀರ್. ಧೂಳಪ್ಪ ಮಿಂಟ್ರಿಮೆನ್. ನಾಗನಾಥ್ ಬೋಯಿ. ಜಗನಾಥ್ ಉದಗೀರ್. ವೀರಣ್ಣ ಪದ್ಮ. ಅನಿಲ್ ಕೂರಾಲಿ. ತುಕರಾಮ್ ಪದ್ಮ. ಈಶ್ವರ್ ಕೌಡಿಯಾಳ. ಶಿವರಾಜ್ ಛತ್ರಿ. ವೀರಭದ್ರ ಬೋಯಿ. ಈಶ್ವರ್ ಮೇತ್ರಿ. ಸುಭಾಷ್ ಮೇತ್ರಿ.ಧನರಾಜ್ ಹಿರಿನಾಗಂವ್. ಜ್ಞಾನೇಶ್ವರ್ ಮಂಗಲಗಿ. ಪ್ರಭಾಕರ್ ಬಿರಾದರ್. ಯುವರಾಜ್ ಬೋಯಿ. ಲಿಂಗಪ್ಪ ಛತ್ರಿ. ಶ್ರೀಮಂತ ಮೇತ್ರಿ. ಸಿದ್ದು ಬುಟ್ಟಿ ಹಾಗೂ ಊರಿನ ಗ್ರಾಮಸ್ಥರು ಇದ್ದರು.