ಕಾಳಗಿ ತಾಲೂಕಿನ ಕುಡಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 118ನೇ ಡಾ ಬಾಬು ಜಗಜೀವನ ರಾಮ ಜಯಂತಿ

ಸ್ವಾತಂತ್ರ್ಯ ಹೋರಾಟಗಾರರು ಶೋಷಿತ ದಲಿತ ವರ್ಗಗಳ ಪರವಾಗಿ ಗಟ್ಟಿ ಧ್ವನಿಯಾಗಿ ಸಾಮಾಜಿಕ ಚಳವಳಿಯನ್ನು ಮಾಡಿದರು.
ಅವರು ಬಾಬೂಜಿ ಎಂದು ಖ್ಯಾತರಾಗಿದ್ದರು.
ಅವರು 5 ಏಪ್ರಿಲ್ 1908 ರಂದು ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದವರು
ಅವರ ತಂದೆ ಸೋಭಿರಾಮ್ ತಾಯಿ ವಸಂತಿದೇವಿ ಅವರ ಸಂಗಾತಿಯ ಹೆಸರು ಇಂದ್ರಾಯಣಿದೇವಿ ಮಕ್ಕಳು ಸುರೇಶ್ ಕುಮಾರ್ ಮತ್ತು ಮೀರಾಕುಮಾರಿ
ನೆಹರು ಮಂತ್ರಿಮಂಡಲದಲ್ಲಿ ಕಾರ್ಮಿಕ ಸಚ್ಚಿವರಾಗಿ ದೇಶದ ಕಾರ್ಮಿಕ ವರ್ಗಕ್ಕೆ ಪಿ ಎಪ್ ಇಎಸ್ಐ ಜಾರಿಗೊಳಿಸಿದ ಮಹಾನ್ ನಾಯಕರಾಗಿದ್ದರು.
ಮುರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದರು.
ಅಸ್ಪೃಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು.
ಅವರು 1935 ರಲ್ಲಿ ” ಆಲ್ ಇಂಡಿಯನ್ ಡಿಪ್ರೆಸ್ಟ ಕ್ಲಾಸಸ್ ಲಿಗ್ ಸ್ಥಾಪಿಸಿದರು.
ಅವರು 6 ಜುಲೈ 1986 ರಲ್ಲಿ 78 ನೇ ವಯಸ್ಸ ರಂದು ನಿಧನರಾದರು ಹಾಗೂ ಅವರ ಜನ್ಮದಿನವನ್ನು ಸಮಾನತೆ ದಿನ ಅಥವಾ ಸಮತಾ ದಿವಸ ಎಂದು ಆಚ್ಚರಿಸುತ್ತೇವೆ.
ಈ ಸಂಧರ್ಭ ದಲ್ಲಿ ಮುಖ್ಯ ಗುರುಗಳು ಶ್ರೀಮಂತ ಗಂಜಿ SDMC ಅಧ್ಯಕ್ಷರು ರಮೇಶ್ ದೇವನಕಾರ ಶಿಕ್ಷಕರ ಪ್ರಭಕರ್ ಭಂಡಾರಿ ಶಂಕರ ಗಂಜಿ ಅಡುಗೆ ಸಿಬ್ಬಂದಿ ಯವರು ಹಾಗೂ ಮುದ್ದು ಮಕ್ಕಳು ಇದ್ದರು.

ವರದಿ :ರಮೇಶ್ ಕುಡಹಳ್ಳಿ

error: Content is protected !!