ಜೊಲ್ಲೆ ಗ್ರೂಪ್ ನ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ-ಸ್ಟೇಟ್)ಶಾಖೆ ಉದ್ಘಾಟನೆ

ನಿಪ್ಪಾಣಿ : ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಜೊಲ್ಲೆ ಗ್ರೂಪ್ ನ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ-ಸ್ಟೇಟ್)ಶಾಖೆ- ನಿಪ್ಪಾಣಿ 1 ನೇ ಶಾಖೆಯ Extention Counter ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಕನ್ನೇರಿ ಮಠದ ಪ.ಪೂಜ್ಯ.ಜಗದ್ಗುರು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹಾಗೂ ನಿಪ್ಪಾಣಿಯ ಪ.ಪೂ. ಶ್ರೀ ಪ್ರಾಣಲಿಂಗ ಸ್ವಾಮೀಜಿಗಳ ಅವರ ಅಮೃತ
ಹಸ್ತದಿಂದ ಹಾಗೂ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿದರು.ಜನರಿಗೆ ಅನುಕೂಲ್ ವಾಗುವ ರೀತಿಯಿಂದ ಶಾಖೆ ಗಳನ್ನು ಬೆಳೆಸಿ ಜನರ ಏಳಿಗಾಗಿ ಸದಾ ದುಡಿಯುತಿರುವತ್ತಿದೆ ಮತ್ತು ಇದರ ಸದುಪಯೋಗ ವನ್ನು ಜನರು ಪಡೆದುಕೊಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ಸಿ.ಸಿ.ಬ್ಯಾಂಕ ಅಧ್ಯಕ್ಷರಾದ ಶ್ರೀ ಅಪ್ಪಾಸಾಹೇಬ ಕುಲಗುಡೆ, ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷರಾದ ಆನಂದ ಪಾಟೀಲ,ನಿರ್ದೇಶಕ ಮಂಡಳಿ ಸದಸ್ಯರು, ಹಿರಣ್ಯಕೇಶಿ ಹಾಗೂ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರು,ಉಪಾಧ್ಯಕ್ಷರು,ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ :ಸದಾನಂದ ಎಂ

error: Content is protected !!