ಲಕ್ಷ್ಮೀನಾರಾಯಣ ಹೊಳ್ಳ ಮತ್ತು ದಿ. ನಿರ್ಮಲ ಹೊಳ್ಳ ದಂಪತಿಯ ಮಗಳಾಗಿ ಕುಂದಾಪುರದಲ್ಲಿ ಜನಿಸಿದ ಇವರಿಗೆ 2022ರ ಜುಲೈರಂದು ತಮಿಳುನಾಡಿನ ಜೇಮ್ಸ್ ಪಾರ್ಕ್ ಪಂಚತಾರ ಹೋಟೆಲ್‌ನಲ್ಲಿ ಇಂಟರ್‌ನ್ಯಾಶನಲ್ ಯುನಿವರ್ಸಿಟಿ(ಜರ್ಮನಿ)ಯವರು ಏರ್ಪಡಿಸಿದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಪ್ರಸ್ತುತ ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕಾಲೇಜು ರಂಗದಿಂದಲೂ ರೂಪದರ್ಶಿಯಾಗಬೇಕೇಂಬ ಮಹದಾಸೆಯಿತ್ತು ಆದ್ದರಿಂದ ಬೆಂಗಳೂರಿಗೆ ತೆರಳಿ ರೂಪದರ್ಶಿಯಾಗಿ ಹೊರಹೊಮ್ಮಿ 2019ರಲ್ಲಿ ಮಿಸ್ ಕರ್ನಾಟಕ ಮತ್ತು ದುಬೈನಲ್ಲಿ ನಡೆದ ಮಿಸ್ ಇಂಡಿಯಾ ರನ್ನರ್ ಪ್ರಶಸ್ತಿ ಮುಡಿಗೇರಿಸಿಕೊಂಡು 2020ರಲ್ಲಿ ಮಿಸ್ ಬೆಂಗಳೂರು, ಮಿಸ್ ಕ್ಲೀನ್ ಪ್ರಶಸ್ತಿಗೆ ಭಾಜನರಾದರು.
2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಮಿಸ್ ಯುನಿವರ್ಸ್ ಆಗಿ ಹೊರಹೊಮ್ಮಿದರು.
2023 ಸಪ್ಟೆಂಬರ್ ನಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಹಾಗೂ 2023ರಲ್ಲಿ ಇಂಡಿಯಾ ಟೆಲಿವಿಷನ್ ಅವಾರ್ಡ್ ಅನ್ನು ಬಾಲಿವುಡ್ ನಟಿ ಮಂದಾಕಿನಿಯವರು ಮುಂಬೈನಲ್ಲಿ ನೀಡಿದರು.
ಇವರು ರೂಪದರ್ಶಿಯಾಗಿ ತಾಜ್ ಮಿಸ್ ಯೂನಿವರ್ಸ್, ಮಿಸ್ ಇಂಡಿಯಾ, ಮಿಸ್ ಕರ್ನಾಟಕ, ಮಿಸ್ ಬೆಂಗಳೂರು, ಮಿಸ್ ಕ್ಲೀನ್ ಹಾಗೂ ಸಿನಿಮಾ ತಾರೆಯಾಗಿ ಜೊತೆಗೆ ಸಮಾಜ ಸೇವೆ ಮಾಡುವುದನ್ನು ಗಮನಿಸಿದ ಜರ್ಮನ್ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
25ಕ್ಕೂ ಹೆಚ್ಚು ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ.
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿರುತ್ತಾರೆ.
ಒಟ್ಟು 107 ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಇವರ ಮುಡಿಸೇರಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಗರಿಗಳು ನಿಮ್ಮ ಮುಡಿಸೇರಲಿ, ಹಲವಾರು ಪ್ರಶಸ್ತಿಗಳು ನಿಮ್ಮ ಮಡಿಲು ತುಂಬಲಿ, ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು jk ಕನ್ನಡ news ಶುಭಹಾರೈಸುತ್ತದೆ.