ಈದ್ ಮಿಲಾದ್ ಹಾಗೂ ಗೌರಿ ಗಣೇಶ್ ಹಬ್ಬದ ಕುರಿತು ಅಮೀನಗಡ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

ಇಂದು ನಡೆದ ಅಮೀನಗಡ ಪಟ್ಟಣದಲ್ಲಿ ಗಜಾನನ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆಯನ್ನು ಕರೆಯಲಾಗಿತ್ತು ಈ ಸಭೆಯಲ್ಲಿ ಅಮೀನಗಡ ಪಟ್ಟಣದ ಮತ್ತು ಸುಳೇಬಾವಿ ಹಾಗೂ ರಕ್ಕಸಗಿಯ ಗ್ರಾಮದ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮಾತನಾಡಿದಂತಹ ಬಿಜೆಪಿಯ ಯುವ ಮುಖಂಡರಾದ ಯಮನೂರ್ ಕತ್ತಿಯವರು ಗಜಾನನ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಹಿಂದೂ ಹಾಗೂ ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಆಚರಿಸುತ್ತೇವೆ ಹಿಂದುಗಳ ಹಬ್ಬವನ್ನು ಮುಸ್ಲಿಮರು ಹಾಗೂ ಮುಸ್ಲಿಮರ ಹಬ್ಬವನ್ನು ಹಿಂದುಗಳು ಆಚರಿಸುವುದು ಅಮೀನಗಡ ವಿಶೇಷ ಭಾವೈಕ್ಯತೆ ಗೆ ಸಾಕ್ಷಿಯಾಗಿದ್ದೆ ಎಂದು ತಿಳಿಸಿದರು

ಹಾಗೂ ಇದೇ ಸಂದರ್ಭದಲ್ಲಿ ಮಾತನಾಡಿದ ಅಮೀನಗಡದ ಪಿಎಸ್ಐ ಯಾದಂತಹ ಜ್ಯೋತಿ ವಾಲಿಕಾರ್ ಹಾಗೂ ಹುನಗುಂದ್ ಸಿಪಿಐ ಎಸ್ ಎ ಸೌದಿ ಮಾತನಾಡಿ ಎಲ್ಲರೂ ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲಿಸಬೇಕು ಹಾಗೂ ಯಾವುದೇ ತರಹ ಅವಘಡ ಆಗದಂತೆ ಹಿರಿಯರು ಹಾಗೂ ಯುವಕರು ನೋಡಿಕೊಳ್ಳಬೇಕೆಂದು ವಿನಂತಿಸಿಕೊಂಡರು ಈ ಸಂದರ್ಭದಲ್ಲಿ ಮಾತನಾಡಿದಂತಹ ಡಿಎಸ್ಪಿ ಇವರಾದಂತಹ ವಿಶ್ವನಾಥ್ ರಾವ್ ಕುಲಕರ್ಣಿ ಊರಲ್ಲಿ ಎಷ್ಟು ಗಣೇಶ ಪ್ರತಿಷ್ಠಾಪಿಸಿದ್ದರು ಎಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಕೊಟ್ಟು ಪಟ್ಟಣ ಪಂಚಾಯತ್ ಹಾಗೂ ಹೆಸ್ಕಾಂನಿಂದ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು ಹಾಗೂ ಹಿಂದೂ ಮುಸ್ಲಿಂ ಬಾಂಧವರು ಭಾವಿಕತೆಯಿಂದ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಅನ್ನು ಆಚರಿಸಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಊರಿನ ಅನೇಕ ಮುಖಂಡರು ಭಾಗಿಯಾಗಿದ್ದರು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಅಬೂಬಕರ್ ಎಲ್ ಬೇಪಾರಿ ಕಾಂಗ್ರೆಸ್ ಮುಖಂಡರಾದ ಸಿದ್ದು ಬದ್ಧರ್ ಶೆಟ್ಟಿ ಮನೋಹರ್ ರಕ್ಕಸಗಿ ನಾಗೇಶ್ ಗಂಜಿಹಾಳ್ ಮುಸ್ತಾಕ್ ಖಾದ್ರಿ ಕಾಸಿಂಸಾಬ್ ಮುದ್ದೇಬಿಹಾಳ ಹಾಗೂ ಅನೇಕರು ಉಪಸ್ತರಿದ್ದರು.

 

ವರದಿ : ಎಸ್.ಬಿ ಅಮೀನಗಡ