ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಿಪಿಐ ಅಯ್ ಆರ್ ಪಟ್ಟಣಶೆಟ್ಟಿ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಾಲೂಕ ಪಂಚಾಯತ್ ಎದುರಿಗೆ ರಾಮದುರ್ಗ ಸಿಪಿಐ ಅಯ್ ಪಟ್ಟಣಶೆಟ್ಟಿ ತಮ್ಮ ಸಿಬ್ಬಂದಿ ಜೊತೆಗೆ ಬೈಕ್ ಸವಾರರಿಗೆ  ಚಾಟಿ ಬಿಸಿದ್ದಾರೆ.

 

ದಿನೇ ದಿನೆ ಬೈಕ್ ಸವಾರರು ಹೇಲ್ಮೆಂಟ್ ಇಲ್ಲದೆ ಬೈಕ್ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತದಲ್ಲಿ ಸಾವಿಗೆ ಇಡಾಗಿದ್ದಾರೆ.

ಸಾರ್ವಜನಿಕರು ಕಡ್ಡಾಯವಾಗಿ ಹೇಲ್ಮೆಂಟ್ ಧರಿಸಬೇಕು. ಆದ್ರೆ ಕೆಲ ದ್ವಿಚಕ್ರ ವಾಹನ ಸವಾರರು ಹೇಲ್ಮೆಂಟ್ ಧರಿಸದೆ ಸಂಚರಿಸುತ್ತಿದ್ದಾರೆ. ಅಂತಹವರಿಗೆ ಪೊಲೀಸ್ ಇಲಾಖೆ ದಂಡ ಹಾಕುತ್ತಿದೆ,

ಹೇಲ್ಮೆಂಟ್ ಧರಿಸದೆ ಓಡಾಡುತ್ತಿದ್ದ ಸವಾರರನ್ನು ತಡೆದ ಪೊಲೀಸರು ದಂಡ ಹಾಕಿ ಬಿಸಿ ಮುಟ್ಟಿಸಿದ್ದಾರೆ.

ಅಪಘಾತ ಪ್ರಕರಣ ಕ್ರಮೇಣ ಹೆಚ್ಚಳವಾಗುತ್ತಿದ್ದರೂ ಜನ ಅದರ ಭಯವಿಲ್ಲದೇ ಹೇಲ್ಮೆಂಟ್ ಧರಿಸದೇ ಸಂಚರಿಸುವ ಬೈಕ ಸವಾರನ್ನು ತಡೆದು ದಂಡ ಹಾಕಲು ಶುರು ಮಾಡಿದರು. ಹೇಲ್ಮೆಂಟ್ ಹಾಕದ ಬೈಕ್ ಸವಾರರ ಬೈಕಿನ ಕೀ ಕಸಿದುಕೊಂಡು ಮೊದಲ ಹಂತವಾಗಿ 100 ರೂ. ಹಾಕಲಾರಂಭಿಸಿದರು ನಂತರ 500 ರೂ. ದಂಡ ಹಾಕಿದರು.

ಈ ಕುರಿತು ಸಿಪಿಐ ಅಯ್ ಆರ್ ಪಟ್ಟಣಶಟ್ಟಿ ರಾಮದುರ್ಗ ಪೊಲೀಸ್ ಠಾಣೆಯ ಎದುರು ಸುಮಾರು ಒಟ್ಟು 170 ಬೈಕ್ ಸವಾರರಿಗೆ ಒಟ್ಟುಗುಡಸಿ ಪ್ರತಿಕ್ರಿಯಿಸಿ ದಿನೇ ದಿನೇ ಅಪಘಾತ ಪ್ರಕರಣ ಹೆಚ್ಚಳವಾಗಿದ್ದು, ಜನರಿಂದ ಜಾಣ ಮರೆವು ಇದೆ. ಕಡ್ಡಾವಾಗಿ ಹೇಲ್ಮೆಂಟ್ ಬಗ್ಗೆ ಜಾಗೃತಿ ಮೂಡಿಸಿದರೂ ಜನ, ಹೇಲ್ಮೆಂಟ್ ಧರಿಸದೇ ಸಂಚರಿಸುತ್ತಿದ್ದು ಇವರಿಗೆ ಜಾಗೃತಿಗೆ ದಂಡ ಹಾಕಲಾಗುತ್ತಿದೆ. ಇನ್ಮುಂದೆ ಟಫ್ ರೂಲ್ಸ್ ಜಾರಿಯಲ್ಲಿರುತ್ತದೆ. ಕೇವಲ ಒಂದು ಗಂಟೆಯಲ್ಲಿ ಅಂದಾಜು 170ಬೈಕ್ ಸವಾರರಿಗೆ ದಂಡ ಹಾಕಿರುವುದಾಗಿ ತಿಳಿಸಿದರು.

ವರದಿ-Md ಸೋಹಿಲ್ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ