ಇಸ್ರೇಲ್ IDF ವರ್ತನೆಗೆ ಮುಜಾಹಿದ್ ಮರ್ಚೆಡ್ ಆಕ್ರೋಷ

ರಾಯಚೂರು: ಶುಕ್ರವಾರ 13 ನೇಯ ಜೂನ್ 2025 ರಂದು ಇಸ್ರೇಲ್ ಡಿಫೆನ್ಸ್ ಫೋರ್ಸಸ್ (IDF) ತಮ್ಮ ಅಧಿಕೃತ X ಖಾತೆಯಲ್ಲಿ ಪ್ರಕಟಿಸಿದ “ಇರಾನ್‌ನ ಮಿಸೈಲ್‌ಗಳ ವ್ಯಾಪ್ತಿ” ಎಂಬ ನಕ್ಷೆಯಲ್ಲಿ ಭಾರತದ ಗಡಿಗಳನ್ನು ಭಯಾನಕವಾಗಿ ವಿಕೃತಗೊಳಿಸಿರುವುದು ತೀವ್ರ ಖಂಡನೀಯ ಎಂದು ದೇವಸೂಗೂರು ಬ್ಲಾಕ್ ಅಲ್ಪ ಸಂಖ್ಯಾತರ ಬ್ಲಾಕ್ ಕಾಂಗ್ರೆಸ್ ಸಮೀತಿಯ ಕಾರ್ಯದರ್ಶಿಯಾದ ಮುಜಾಹಿದ್ ಆಕ್ರೋಶಪಟ್ಟಿದ್ದಾರೆ.
ಈ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಹಾಗೂ ಈಶಾನ್ಯ ಭಾರತವನ್ನು ನೇಪಾಳದ ಭಾಗವಾಗಿ ತೋರಿಸಲಾಗಿದ್ದು, ಇದು ಭಾರತದ ಭೌಗೋಳಿಕ ಅಖಂಡತೆ ಮತ್ತು ರಾಷ್ಟ್ರಗೌರವದ ಮೇಲೆ ನೇರವಾದ ದಾಳಿ ಆಗಿದೆ. ಇಂತಹ ತಪ್ಪು ಯಾವ ದೇಶದಿಂದ ಬಂದರೂ ಅದು ಕ್ಷಮೆಯಿಗೊಳ್ಳುವಂತಹದ್ದಲ್ಲ.

ಇಸ್ರೇಲ್ ಡಿಫೆನ್ಸ್ ಫೋರ್ಸ್ಸ್ IDF ತಾವು ಮಾಡಿರುವ ತಪ್ಪಿಗಾಗಿ ಜೂನ್ 14 ರಂದು ಕ್ಷಮೆ ಕೇಳಿದರೂ ಕೂಡ, ಜೂನ್ 15ರ ಬೆಳಗ್ಗೆಯವರೆಗೆ ಕೂಡ ತಮ್ಮ X ಖಾತೆಯಿಂದ ತಪ್ಪು ನಕ್ಷೆಯನ್ನು ತೆಗೆದುಹಾಕದೇ ಇರುವುದರಿಂದ ಅವರ ನಿಲುವಿನಲ್ಲಿ ಗಂಭೀರತೆಯ ಕೊರತೆ ಹಾಗೂ ಭಾರತೀಯ ಭಾವನೆಗಳನ್ನೊಳಗೊಂಡ ನಿರ್ಲಕ್ಷ್ಯ ಸ್ಪಷ್ಟವಾಗಿ ಕಂಡು ಬರುತ್ತದೆ. ಇದು ಕೇವಲ ಒಂದು ನಕ್ಷೆ ತಪ್ಪು ಅಲ್ಲ, ಇದು ಭಾರತದ ಸಾರ್ವಭೌಮತೆಗೆ ನಿರ್ದಯವಾಗಿಯೇ ತಿರಸ್ಕಾರ ತೋರಿಸುವ ಪ್ರಯತ್ನ.

ಇದರ ಪೋಷಕ ಕಾರಣವೆಂದರೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ತಾತ್ಸಾರ ಮತ್ತು ನಿರ್ಧಾರಶಕ್ತಿಯ ಕೊರತೆ. ದೇಶದ ಗಡಿಗಳನ್ನು ಅಕ್ಷರಶಃ ಬೇರೆ ದೇಶದ ಭಾಗವೆಂದು ತೋರಿಸಿದ ಸಂದರ್ಭದಲ್ಲಿ ಕೂಡ ಈ ಸರ್ಕಾರದಿಂದ ಯಾವುದೇ ಕಠಿಣ ರಾಜತಾಂತ್ರಿಕ ಕ್ರಮಗಳು ಕೈಗೊಳ್ಳಲಾಗಿಲ್ಲ. ಕೇಂದ್ರ ಸರ್ಕಾರ “ಖಂಡನೆ” ಎಂಬ ಶಬ್ದದೊಳಗೆ ಸೀಮಿತವಾಗಿದ್ದು, ದೇಶದ ಅಖಂಡತೆಗೆ ತಕ್ಕ ಮಟ್ಟದ ತ್ವರಿತ ಪ್ರತಿಕ್ರಿಯೆ ನೀಡಲು ವಿಫಲವಾಗಿದೆ. ಈ ಸ್ಥಿತಿಯಲ್ಲೂ “ವಿಶ್ವಗುರು” ಎನ್ನುವ ಬಡಾಯಿಕೆಯ ಹಿಂದೆ ರಾಜತಾಂತ್ರಿಕ ಬಡತನವಿದೆ ಎಂಬುದನ್ನು ಈ ಘಟನೆ ಮರೆಮಾಡಲಾರದು.

ಇದೊಂದು ರಾಷ್ಟ್ರದ ಗೌರವ ಮತ್ತು ಅಸ್ತಿತ್ವದ ಪ್ರಶ್ನೆಯಾಗಿದೆ. ಇಸ್ರೇಲ್ ಸರ್ಕಾರ ಮತ್ತು ಇಸ್ರೇಲ್ ಡಿಫೆನ್ಸ್ ಫೋರ್ಸ್ಸ್ IDF ತಕ್ಷಣ ತಪ್ಪು ನಕ್ಷೆಯನ್ನು ತೆಗೆದುಹಾಕಿ, ಸರಿಯಾದ ನಕ್ಷೆಯನ್ನು ಮರುಪ್ರಕಟಿಸಬೇಕು. ಜೊತೆಗೆ, ಭಾರತದ ಭೌಗೋಳಿಕ ಅಖಂಡತೆಗೆ ಗೌರವ ಸಲ್ಲಿಸುವಂತಹ ಸ್ಪಷ್ಟ ಹೇಳಿಕೆಯನ್ನು ಪ್ರಕಟಿಸಬೇಕು. ಭಾರತ ಸರ್ಕಾರ ಕೂಡ ಇದನ್ನು ತಾತ್ಕಾಲಿಕ ಶಬ್ದಗಳಿಂದ ಮೀರಿಸಿ, ಗಂಭೀರ ರಾಜತಾಂತ್ರಿಕ ಪ್ರತಿಕ್ರಿಯೆಯನ್ನು ನೀಡಿ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯಿಂದ ನಡೆಯಬೇಕು.

ಇದನ್ನು ನಾವು ಭಾರತೀಯರು ತೀವ್ರ ಖಂಡಿಸುತ್ತೇವೆ ನಾವು ಭಾರತೀಯರು, ನಮ್ಮ ರಾಷ್ಟ್ರದ ಭೌಗೋಳಿಕ ಮತ್ತು ಮಾನಸಿಕ ಅಸ್ತಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಈ ಕೃತ್ಯವನ್ನು ಖಂಡಿಸುತ್ತೇವೆ. ಇದು ರಾಷ್ಟ್ರದ ಗೌರವವನ್ನು ಹಿಂಬಾಲಿಸುವ ಹೊಣೆ ಹೊತ್ತ ನಿಜವಾದ ಪ್ರಜೆಗಳ ಧ್ವನಿಯಾಗಿದೆ ಎಂದು ದೇವಸೂಗೂರು ಅಲ್ಪ ಸಂಖ್ಯಾತರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾದ ಮುಜಾಹಿದ್ ಮರ್ಚೆಡ್ ಆಕ್ರೋಷಪಟ್ಟಿದ್ದಾರೆ.

error: Content is protected !!