ಪತ್ರಿಕಾ ಮಧ್ಯಮ ಸತ್ಯದ ಜೊತೆ ನಿಲ್ಲುವ ಪ್ರತಿಕವಾಗಿದೆ- ಅನೀಲಕುಮಾರ ಸಿಂಧೆ

ಚಿಟಗುಪ್ಪಾ : ಕನ್ನಡ ಸಾಹಿತ್ಯ ಪರಿಷತ್ತು, ಚಿಟಗುಪ್ಪಾ ಹಾಗೂ ಜ್ಞಾನಗಂಗಾ ವಿಜ್ಞಾನ ಪದವಿ ಪೂರ್ವ ಕಾಲೇಜು, ಚಿಟಗುಪ್ಪಾದ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕೋದ್ಯಮ : ಡಿ.ವಿ.ಜಿ ಸಾಹಿತ್ಯ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಹುಮನಾಬಾದ ಪತ್ರಕರ್ತ ಸಂಘದ ಅಧ್ಯಕ್ಷರಾದ ದುರ್ಯೋಧನ ಹೂಗಾರ್ ಉದ್ಘಾಟಿಸಿ ಪತ್ರಕರ್ತರು ನಿಸ್ವಾರ್ಥ, ಸೇವಾ ಮನೋಭಾವದಿಂದ ಸಮಾಜದಲ್ಲಾಗುವ ಅನ್ಯಾಯವನ್ನು ಬಿತ್ತರಿಸುವ ಕಾರ್ಯ ಮಾಡುತ್ತಾರೆ. ಅವರಿಗೆ ಎದುರಾಗುವ ಸಮಸ್ಯೆಗಳು ಲೆಕ್ಕಿಸದೆ ವರದಿ ಮಾಡುವ ಕಾರ್ಯಮಾಡುತ್ತಾರೆ ನುಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿಟಗುಪ್ಪಾ ತಾಲೂಕಿನ ದಂಡಾಧಿಕಾರಿಗಳಾದ ಮಂಜುನಾಥ್ ಪಂಚಾಳ ಮಾತನಾಡುತ್ತಾ ಪತ್ರಕರ್ತರು ಎಂತಹ ವಿಷಮ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಸತ್ಯಾ- ಸತ್ಯೆಗಳು ಬಿಚ್ಚಿಡುತ್ತಾರೆ, ಅನ್ಯಾಯದ ವಿರುದ್ಧ ಧ್ವನಿಯಾಗಿ ಸರ್ಕಾರದ ಮುಂದೆ, ಸಮಾಜದ ಮುಂದೆ ಬಿಚ್ಚಿಡುವ ಕೆಲಸ ಪತ್ರಿಕಾ ಮಾಧ್ಯಮದವರು ಮಾಡುತ್ತಾರೆ ಎಂದು ನುಡಿದರು. ಪರಿಸರ ಪ್ರೇಮಿ ಶೈಲೇಂದ್ರ ಕೌಡಿ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಪರಿಸರವು ತುಂಬಾ ಹಾಳಾಗಿದೆ ಅದನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪತ್ರಕರ್ತರು ಸಂವಿಧಾನದಲ್ಲಿನ ಪ್ರಜಾಪ್ರಭುತ್ವದಲ್ಲಿನ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾಗಿದೆ ಎಂದರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು ಅನೀಲಕುಮಾರ ಸಿಂಧೆ ಕಾರ್ಯಕ್ರಮದ ಅಧ್ಯಕ್ಷತೆಯನು ವಹಿಸಿ ಸತ್ಯ ಮತ್ತು ನ್ಯಾಯದ ಪರವಾಗಿ ಮಾತನಾಡುತ್ತಾರೆ. ಪತ್ರಕರ್ತರು ಸಾರ್ವಜನಿಕರನ್ನು ಜಾಗೃತಿಗೊಳಿಸುವ, ಮಾಹಿತಿ ನೀಡುವ, ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದಾರೆ ಸತ್ಯಗಳನ್ನು ಪ್ರೋತ್ಸಾಹಿಸುವುದು ಪತ್ರಕರ್ತರಿಗೆ ಭದ್ರತೆ ನೀಡುವುದು ಅವರನ್ನು ಪ್ರೊತ್ಸಾಹಿಸುವ, ಪ್ರೇರೇಪಿಸುವುದು ಸರಕಾರದ ಕೆಲಸವಾಗ ಬೇಕು ಹಾಗೂ ಪತ್ರಿಕೋದ್ಯಮವು ದೇಶದ ನಾಲ್ಕನೇ ಕಂಬವೆಂದು ಪರಿಗಣಿಸಲಾಗುತ್ತದೆ. ಎಂದು ಮಾತನಾಡಿದರು. ಕಾರ್ಯಕ್ರಮದಲಿ ವಿಶೇಷ ಉಪನ್ಯಾಸ ಶಾಂತಕುಮಾರ್ ಪಾಟೀಲ್ ಡಿವಿಜಿಯವರ ಸಾಹಿತ್ಯ ಹಾಗೂ ಬದುಕು ಬರಹವನ್ನು ಕುರಿತು ಮಾತನಾಡಿದರು ಈ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಗುರುಲಿಂಗ ಶಿವಾಚಾರ್ಯರು ವಹಿಸಿ ಪತ್ರಕರ್ತರ ಬಗ್ಗೆ ಸಮಾಜ ಹಾಗೂ ಸರ್ಕಾರ ಗೌರವಯುತವಾಗಿ ಕಾಣಬೇಕಾಗಿದೆ.ಅಲ್ಲದೆ ಪತ್ರಕರ್ತರಿಗೆ ಎಲ್ಲಾ ವ್ಯವಸ್ಥೆಗಳು ಸಿಗುವಂತಾಗಬೇಕೆಂದು ನುಡಿದರು. ಪ್ರಾಸ್ತಾವಿಕವಾಗಿ ಸುರೇಶ ಕುಂಬಾರ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಮತಿ ಲಕ್ಷ್ಮಿ ಬಿರಾದಾರ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ಚಿಟಗುಪ್ಪ, ಹುಸಾಮೋದಿನ್ ಬಾಬಾ ಮುಖ್ಯ ಅಧಿಕಾರಿಗಳು ಪುರಸಭೆ, ಸಂಜುಕುಮಾರ ಜುನ್ನಾ, ರಾಜಪ್ಪಾ ಜಮಾದಾರ, ಪ್ರೇಮಿಳಾ ರೆಡ್ಡಿಯವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹುಮನಾಬಾದ ತಾಲೂಕಿನ ಹಾಗೂ ಚಿಟಗುಪ್ಪಾತಾಲೂಕಿನ ಪತ್ರಕರ್ತರು ಹಾಜರಿದ್ದರು. ಹುಮಬಾದ ಮತ್ತು ಚಿಟಗುಪ್ಪಾದ ಎಲ್ಲಾ ಪತ್ರಕರ್ತರಿಗೆ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಚಿಟಗುಪ್ಪಾ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಈರಮ್ಮ ಜಮಗಿ ನಿರ್ವಹಿಸಿದರು. ಲಕ್ಷ್ಮೀಕಾಂತ ವಂದಿಸಿದರು.

error: Content is protected !!