ಯಳಂದೂರಿನ ಅನುಪಮ ಟ್ರಸ್ಟ್, ಸೃಷ್ಠಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜ್ಯ ಯುವಬರಹಗಾರರ ಒಕ್ಕೂಟದಿಂದ ಶಿಕ್ಷಕಿ ಡಾ. ಅನಿತಾ.ಕೆ. ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಸಾಧನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರು. ಶಿಕ್ಷಕಿಯಾಗಿ, ಸಾಹಿತಿಗಳಾಗಿ ಗುರುತಿಸಿಕೊಂಡಿದ್ದಾರೆ. ಸಧ್ಯ ಇವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕುರುಬರಹಳ್ಳಿಯ ಜಿ.ಎಚ್.ಪಿ.ಎಸ್ ಶಾಲೆಯ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಂಪಿ ವಿಶ್ವವಿದ್ಯಾಲಯದಿಂದ ಪಿ.ಎಚ್. ಡಿ ಮಾಡಿದ್ದಾರೆ.