ಚಿತ್ತಾಪುರ; ಪುರಸಭೆಯಿಂದ ಕಾಗಿಣಾ ನದಿಯಿಂದ ಸರಬರಾಜು ಆಗುವ ನೀರನ್ನು ಸೋಸಿ ಕಾಯಿಸಿ ಆರಿಸಿ ಕುಡಿಯಲು ಬಳಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರು ಕೋರಿದ್ದಾರೆ.
ಪುರಸಭೆಯ ವ್ಯಾಪ್ತಿಯಲ್ಲಿ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಕಾಗಿಣಾ ನದಿಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹೆಚ್ಚು ಮಣ್ಣು ಮಿಶ್ರಿತ ನೀರು ಶುದ್ಧೀಕರಣ ಘಟಕಕ್ಕೆ ಬರುತ್ತಿದೆ. ಸೂಕ್ತವಾಗಿ ಶುದ್ಧೀಕರಣ ಮಾಡಿದರೂ ಕೂಡಾ ನೀರಿನಲ್ಲಿ ಮಣ್ಣು ಮಿಶ್ರಿತವಾಗುತ್ತಿದೆ. ಕಾರಣ ನದಿಯಲ್ಲಿ ಕಲುಷಿತ ನೀರು ನಿಯಂತ್ರಣಕ್ಕೆ ಬರುವವರೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ
ವರದಿ ಮೊಹಮ್ಮದ್ ಅಲಿ ಚಿತ್ತಾಪುರ
