ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ತಾಲೂಕಾ ಘಟಕ ರಾಮದುರ್ಗ ಹಾಗೂ ಸಮುದಾಯ ಘಟಕ ರಾಮದುರ್ಗ ಇವರ 50 ನೇ ವರ್ಷಚಾರಣೆ ಸಹಯೋಗದಲ್ಲಿ, ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪುಸ್ತಕಗಳ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮಕೆ ಸಸಿಗೆ ನೀರು ಉಣಿಸುವ ಮೂಲಕ ಪಟ್ಟಣ ಸರ್ಕಾರಿ ನೌಕರರ ಭವನದಲ್ಲಿ ಚಾಲನೆ ನೀಡಲಾಯಿತು
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕವಿಗೋಷ್ಠಿ ಕಾರ್ಯಕ್ರಮ ಹಾಗೂ ಹಿರಿಯ ಸಾಹಿತಿ R. S ಪಾಟೀಲ ಬರೆದಿರುವ 10 ಪುಸ್ತಕಗಳ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಬಿ ಯು ಭೈರಕದಾರ ಅಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಮದುರ್ಗ ರವರು ವಹಿಸಿದ್ದರು.
ಭಕ್ತ ಕನಕದಾಸರರ ಜಯಂತಿ ನಿಮಿತ್ಯ ಪೂಜೆ ಹಾಗೂ ಪುಷ್ಪ ಅರ್ಪಣೆ ಮಾಡಲಾಯಿತು.
ಪ್ರಸ್ಥಾವಿಕವಾಗಿ ರಾಜಶೇಖರ ಶಲವಡಿ ಸಮುದಾಯ ಸದಸ್ಯರು ಮಾತನಾಡಿದರು ಸಮುದಾಯ ಕಾರ್ಯ ವೈಖರಿಗಳ.ಬಗ್ಗೆ ಹೇಳಿದರು. ಪ್ರೊ ಸಕ್ರಿ ಸರ್ ಸಾಹಿತ್ಯ ಲೋಕಕ್ಕೆ ರಾಮದುರ್ಗ ಸಾಹಿತಿಗಳು ಕೊಡುಗೆ ಮತ್ತು ಎಲ್ಲ ಸಾಹಿತ್ಯದ ವಿಧಗಳಲ್ಲಿ ನಮ್ಮವರು ಸಾಧನೆ ಮಾಡಿದ್ದಾರೆ. ಎಂದು ಹೇಳುತ್ತಾ ಪ್ರಸ್ತುತ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದರು.
ತಾಲೂಕಿನ ಪ್ರಸಿದ್ಧ ಸಾಹಿತಿಗಳಾದ ಆರ್ ಎಸ ಪಾಟೀಲ್ ರವರು ರಚಿಸಿದ 10 ಕೃತಿಗಳ ಬಿಡುಗಡೆ ಮಾಡಲಾಯಿತು.
ನಾಟಕ:-
1ಬಂಗಲೆ ಅರ್ಥಾತ್ ಶಾತ ಮೂರ್ಖರು
2) ವೀರ ವೀರಾಗಿ
3)ಕಾಮಕ್ಕೆ ಪ್ರೇಮದ ಅರಿವಿಲ್ಲ
ಕಾದಂಬರಿ :-
4)ಆತ್ಮದ್ರೋಹಿ
5) ಯತೀಶ್ರೇಷ್ಟ
ನಗೆ ಬರಹ :-
6) ನಗುತಿಲಿರಿ
ಕಥಾ ಸಂಕಲನ:-
7) ಕಥಾವಲ್ಲರಿ
ಕವನ ಸಂಕಲನ:-
8) ಬಾ ನನ್ನ ಕಂದ
ಸಾಧಕರ ಪುಸ್ತಕ:-
9) ಬದುಕು ಬದಲಿಸಬಲ್ಲವರು
10) ಶರಣ ಸಂಸ್ಕೃತಿ ಮಹೋತ್ಸವ ದರ್ಶನ
ಪುಸ್ತಕ ಪರಿಚಯ:- ಕೃತಿಗಳ ಪರಿಚಯವನ್ನು ಆಯಾ ಪಿ ಮುಳ್ಳೂರ ಗೌರವ ಅಧ್ಯಕ್ಷರು ಮಾಡಿದರು
ಸಾಹಿತಿ ಪರಿಚಯ:- ಶ್ರೀಮತಿ ವಿಜಯಲಕ್ಷ್ಮಿ ಈಟಿ ಗುರುಮಾತೆಯರು ಮಾಡಿದರು.
ಈ ಕಾರ್ಯ ಕ್ರಮದಲ್ಲಿ 15 ಜನ ತಮ್ಮ ಕವನ ವಾಚನ ಮಾಡಿದರು
ಅಧ್ಯಕ್ಷರಾದ ಬಿ ಯು ಭೈರಕದಾರ ಅಧ್ಯಕ್ಷಿಯ ಭಾಷಣ ಮಾಡಿದರು
ಆರ್ ಎಮ್ ಮೂಲಿಮನಿ ಸಮುದಾಯ ಅಧ್ಯಕ್ಷರು ಸ್ವಾಗತಿಸಿದರು, ಶ್ರೀಮತಿ ಎಸ್ ಎಸ್ ಸಜ್ಜನ ಗುರುಮಾತೆಯರು ನಿರೂಪಿಸಿದರು ರಿಯಾಜ್ ಜೂಲಿಕಟ್ಟಿ ಶಿಕ್ಷಕರು ವಂದಿಸಿದರು.
ಕಾರ್ಯಕ್ರಮದಲ್ಲಿ ಬಿ ಯು ಭೈರಕದಾರ ಅಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಮದುರ್ಗ, ಆಯ ಪಿ ಮುಳ್ಳುರ ಗೌರವ ಅಧ್ಯಕ್ಷರು ಕೇ ಕ ಸಾ ವೇ ರಾಮದುರ್ಗ, ಪ್ರೊ ಎಸ್ ಎಮ್ ಸಕ್ರಿ, ಪ್ರೊ ಪಿ ಎಲ್ ಮಿಸಾಳೆ, ಆರ್ ಎಮ್ ಮೂಲಿಮನಿ , ಎ ಐ ಅತ್ತಾರ, ಹಾಗೂ ಸಿರಿಗನ್ನಡ ವೇದಿಕೆ ಅಧ್ಯಕ್ಷರು ಸುರೇಶ ದೇಸಾಯಿ ಹಾಗೂ ಸಮುದಾಯ ಘಟಕದ ಎಲ್ಲ ಪದಾಧಿಕಾರಿಗಳು. ಸಾಹಿತಿಗಳು. ಬಿ ಆರ್ ಪಿ ಮತ್ತು ಸಿ ಆರ್ ಪಿ ರವರು.ಶಿಕ್ಷಕರು. ಗಣ್ಯರು ಮಕ್ಕಳು ಉಪಸ್ಥಿತರಿದ್ದರು.
ವರದಿ : Md ಸೋಹಿಲ್ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ
