ಚಿತ್ತಾಪುರ; ಖರ್ಗೆಯವರ ಬಗ್ಗೆ ಮಾತಾಡುವ ಎನ್.ರವಿಕುಮಾರ ರಾಜ್ಯದ ಯಾವುದಾದರೂ ಕ್ಷೇತ್ರದಲ್ಲಿ ಒಂದು ಬಾರಿಯಾದ್ರೂ ಗೆದ್ದು ತೋರಿಸಲಿ, ಬರೀ ಬಿಜೆಪಿ ನಾಯಕರ ವಿಶ್ವಾಸ ಗಳಿಸಲು ಖರ್ಗೆ ಕುಟುಂಬದ ಬಗ್ಗೆ ಮಾತಾಡೋದು ಬಿಟ್ಟು ಕೋಲಿ ಸಮಾಜಕ್ಕೆ ನ್ಯಾಯ ಕಲ್ಪಿಸುವ ಕೆಲಸ ಮಾಡಿ ಎಂದು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಕಲಬುರಗಿ ಜಿಲ್ಲಾ ಸದಸ್ಯ ಶರಣು ಡೋಣಗಾಂವ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರೇ, ಖರ್ಗೆ ಯವರ ಬಗ್ಗೆ ಟೀಕೆ ಮಾಡುವುದು ಬಿಡಿ. ಕೋಲಿ ಸಮಾಜಕ್ಕೆ ನಿಮ್ಮ ಕೊಡುಗೆ ಆದರೂ ಏನು ಹೇಳಿ, ಚುನಾವಣೆ ಬಂದಾಗ ಮಾತ್ರ ಕೋಲಿ ಸಮಾಜದ ಹೆಸರ ಮೇಲೆ ಕಲಬುರಗಿಗೆ ಬರುತ್ತಾರೆ, ಚುನಾವಣೆ ಮುಗಿದ ಮೇಲೆ ಈ ಕಡೆ ತಲೆನೂ ಹಾಕಲ್ಲ ಎಂದರು.
ಪ್ರಧಾನ ಮಂತ್ರಿಗಳು ಕಲಬುರಗಿಗೆ ಬಂದಾಗ ಕೋಲಿ ಕಬ್ಬಲಿಗ ಜನಾಂಗಕ್ಕೆ ಮೈ ಕೋಲಿ ಸಮಾಜ ಕೋ ಯಾದ್ ರಕುಂಗಾ ಅಂತ ಹೇಳಿ ಹೋದರು. ನೀವು ನಮ್ಮ ಸಮಾಜದ ಎಸ್ ಟಿ ಹೋರಾಟದ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ಎಂದಾದರೂ ಒಮ್ಮೆಯಾದರೂ ಮಾತನಾಡಿದ್ದೀರಾ? ಎಸ್ ಟಿ ಬಗ್ಗೆ ಸಮಾಜದ ಹಿರಿಯರ ಜೊತೆ ಸಂಘ ಸಂಸ್ಥೆ ಮುಖಂಡರ ಜೊತೆಗೆ ಸಮಾಲೋಚನೆ ಮಾಡಿದ್ದೀರಾ? ಸಮಾಜಕ್ಕೆ ಅನ್ಯಾಯವಾದಾಗ ಅಥವಾ ಸಮಾಜದ ಹೋರಾಟಗಳಲ್ಲಿ ಎಂದಾದರೂ ಪಾಲ್ಗೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಬಗ್ಗೆ ಮಾತಾಡಿದರೆ ನೀವು ದೊಡ್ಡವರು ಆಗಲ್ಲ. ಇಂಥ ಅನವಶ್ಯಕ ವೈಯಕ್ತಿಕ ಟೀಕೆ ಬಿಡಿ. ಅದರ ಬದಲು ನಿಮಗೆ ಅವಕಾಶ ಕೊಟ್ಟ, ಅಧಿಕಾರ ಕೊಟ್ಟ ಈ ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟರೆ ಜನಗಳು ಸದಾ ನೆನಪಿಡುತ್ತಾರೆ ಎಂದು ತಿಳಿಸಿದ್ದಾರೆ.
ಖರ್ಗೆಯವರ ಬಗ್ಗೆ ಮಾತಾಡುವ ಮುನ್ನ ಅವರಂತೆ ಒಂದಾದ್ರೂ ಜನಪರ ಕಾರ್ಯ ಮಾಡಿ, ಅಧಿವೇಶನದಲ್ಲಿ ಸಮಾಜದ ಪರ ಧ್ವನಿ ಎತ್ತಿ ಸಮಾಜಕ್ಕೆ ನ್ಯಾಯ ಕಲ್ಪಿಸುವ ಕೆಲಸ ಮಾಡಿ ಎಂದು ತಿಳಿಸಿದ್ದಾರೆ.
ಖರ್ಗೆಯವರ ಬಗ್ಗೆ ಮಾತಾಡುವ ಮುನ್ನ ಅವರಂತೆ ಒಂದಾದ್ರೂ ಜನಪರ ಕಾರ್ಯ ಮಾಡಿ, ಅಧಿವೇಶನದಲ್ಲಿ ಸಮಾಜದ ಪರ ಧ್ವನಿ ಎತ್ತಿ ಸಮಾಜಕ್ಕೆ ನ್ಯಾಯ ಕಲ್ಪಿಸುವ ಕೆಲಸ ಮಾಡಿ ಎಂದು ತಿಳಿಸಿದ್ದಾರೆ.
