ಬೀದರ : ಜಿಲ್ಲೆಯಲ್ಲಿ ಗಣೇಶ ಉತ್ಸವ ನಿಮಿತ್ಯ ಕೆಲವು ಗಣೇಶ ಮಂಡಳಿಯವರು ಮೂರ್ತಿಗಳ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ನಡೆಯಲಿದ್ದು, ಪ್ರದೀಪ ಗುಂಟಿ (ಐ.ಪಿ.ಎಸ್) ಪೊಲೀಸ್ ಅಧೀಕ್ಷಕರು, ಬೀದರ ಜಿಲ್ಲೆ ರವರು ಜಿಲ್ಲೆಯ ಎಲ್ಲಾ ಗಣೇಶ ಮಂಡಳಿ ರವರಿಗೆ
ಬೀದರ ಜಿಲ್ಲೆಯ ಕೆಲವು ಗಣೇಶ ಮಂಡಿಳಿ ರವರು ಅತಿಹೆಚ್ಚು ವೆಚ್ಚದಲ್ಲಿ ಕರ್ಕಶ ಶಬ್ದ ಮಾಡುವ ಸೌಂಡ್ ಸಿಸ್ಟಮ್ ಗಳು ಹೊರ ರಾಜ್ಯಗಳಿಂದ ಬುಕ್ ಮಾಡಿ ತರುತ್ತಿರುವುದರ ಬಗ್ಗೆ ಮಾಹಿತಿ ಇದೆ.
ಹೊರ ರಾಜ್ಯಗಳಿಂದ ಬುಕ್ ಮಾಡಿ ತುರವ ಕರ್ಕಶ ಶಬ್ದ ಮಾಡುವ ಸೌಂಡ್ ಸಿಸ್ಟಮ್ ಗಳನ್ನು ಜಿಲ್ಲೆಯ ಹೊರ ವಲಯದಲ್ಲೇ ನಿಲ್ಲಿಸಲಾಗುವುದು.
ಗಣೇಶ ಮಂಡಳಿ ರವರು ಹಣ ಖರ್ಚು ಮಾಡಿ ನಷ್ಟ ಮಾಡಿಕೊಳ್ಳಬೇಡಿ.
ಗಣೇಶ ಹಬ್ಬವು ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡಲು ಬೀದರ ಜಿಲ್ಲೆಯ ಸಾರ್ವಜನಿಕರಲ್ಲಿ ಜಿಲ್ಲಾ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ ವಿನಂತಿಸಿದ್ದಾರೆ.