ಶಾರದಾ ಶಾಲೆ ಮಕ್ಕಳಿಂದ ಸಡಗರ ಸಂಭ್ರಮದಿಂದ ಶಿಕ್ಷಕರ ದಿನಾಚರಣೆ

ಚಿಂಚೋಳಿ, ಚಂದಾಪುರ ಪಟ್ಟಣದ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮುಂದಾಳತ್ವದಲ್ಲಿ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಆಡಳಿತ ಅಧಿಕಾರಿ ವಿಶ್ವನಾಥ ದೇಸಾಯಿ ಅವರು ಮಾತನಾಡಿ ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಶಿಸ್ತು ಅತಿ ಮುಖ್ಯ, ವಿದ್ಯಾರ್ಥಿಗಳಲ್ಲಿ ಗುರಿ ಇಟ್ಟುಕೊಳ್ಳಬೇಕು ಯಶಸ್ಸು ಗಳಿಸಬೇಕಾದರೆ ಗುರಿ ಅತ್ಯವಶ್ಯಕವಾಗಿದೆ, ಇಂದಿನ ಆಧುನಿಕ ಭರಾಟೆಯಲ್ಲಿ ಮಕ್ಕಳು ಮೊಬೈಲ್ ಗಳನ್ನು ಬಿಟ್ಟು ಪುಸ್ತಕ ಓದುವುದಕ್ಕೆ ಹೆಚ್ಚಿನ ಸಮಯವನ್ನು ಕೊಡಬೇಕು ಎಂದು ಹೇಳಿದರು.
ಚಂದ್ರಕಲಾ ಸಹ ಶಿಕ್ಷಕಿ ಮಾತನಾಡಿ ನಾವು ಚಿಕ್ಕವರಿದ್ದಾಗ ಗುರುಗಳ ನೋಡಿಯೆ ಇಂದು ನಾವು ಶಿಕ್ಷಕರಾಗಿದ್ದು ನಮ್ಮ ಗುರುಗಳು ಅರ್ಥಗರ್ಭಿತ ಮಾತುಗಳು ಇಂದಿಗೂ ಕೂಡ ನಮ್ಮ ಸ್ಮರಣೆಯಲ್ಲಿದೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಟ್ಟರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ಮುಸ್ಕಾನ 8ನೇ ತರಗತಿಯ ವಿದ್ಯಾರ್ಥಿ ಮಾತನಾಡಿ ಮನೆಯಲ್ಲಿ ತಾಯೇ ಮೊದಲ ಗುರು ಆದರೆ ನಮ್ಮ ಜೀವನವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅಮೂಲ್ಯವಾದದ್ದು. ನಮ್ಮ ಎರಡನೇ ತಾಯಿಯೇ ನಮ್ಮ ಗುರುಗಳು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಗುರುಗಳ ದಾರಿಯಲ್ಲಿ ಹಾಗೂ ಅವರ ಆಚಾರ ವಿಚಾರಗಳನ್ನು ಕಠಿಣ ವಿಷಯಗಳ ಅಭ್ಯಾಸಗಳು ನಾವು ಕಲಿತರೆ ಜೀವನದಲ್ಲಿ ದೊಡ್ಡ ಸ್ಥಾನ ಗಳಿಸಬಹುದು ಎಂದು ಹೇಳಿದರು.
ವಿಶೇಷವಾಗಿ ಶಿಕ್ಷಕರ ದಿನಾಚರಣೆ ಅಂಗವಾಗಿ ಮಕ್ಕಳೆಲ್ಲ ಸೇರಿ ವಿಶೇಷ ಉಡುಗೊರೆಗಳನ್ನು ತಂದು ಶಿಕ್ಷಕರಿಗೆ ವಿವಿಧ ಬಗೆಯ ಆಟಗಳನ್ನು ಆಡಿಸಿ ವಿಜೇತರಾದ ಅಂತ ಶಿಕ್ಷಕರಿಗೆ ಬಹುಮಾನ ವನ್ನ ಮಕ್ಕಳಿಂದ ಕೊಡಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತ ರಾಜೇಂದ್ರ ಪ್ರಸಾದ, ಸಹ ಶಿಕ್ಷಕಿಯರಾದ ರೋಹಿಣಿ, ಕವಿತಾ, ಸಭಾ ವೈಶಾಲಿ, ಮೇಘನಾ, ಇಸ್ಮಾಯಿಲ್, ಬಸವ, ರಿಹಾನ, ಕೃಷ್ಣ, ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!