ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನಕ್ಕೆ ನಿವೇಶನ ನೀಡುವಂತೆ ಮನವಿ

ಕಾಳಗಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯವಿದ್ದು ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಅವಶ್ಯಕತೆ ಇದ್ದು ಅದಕ್ಕಾಗಿ ವಾಲ್ಮೀಕಿ ಸಮಾಜದ ವತಿಯಿಂದ ಸರಕಾರದ ಅನುದಾನದ ಅಡಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳ ಸಮುದಾಯ ಭವನ ನಿರ್ಮಾಣಕ್ಕಾಗಿ ನಿವೇಶನದ ಅವಶ್ಯಕತೆ ಇರುವುದರಿಂದ ಕಾಳಗಿ ತಾಲೂಕಿನ ಸರಕಾರಿ ಖಾಲಿ ಇರುವ ಜಾಗವನ್ನು ವಾಲ್ಮೀಕಿ ಸಮುದಾಯಕ್ಕೆ ಭವನ ನಿರ್ಮಾಣಕ್ಕಾಗಿ ನಿವೇಶನ ನೀಡಬೇಕೆಂದು ವಾಲ್ಮೀಕಿ ಸಮಾಜದ ವತಿಯಿಂದ ತಾಲೂಕು ದಂಡಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ
ಬಸವರಾಜ ಎಮ್. ಮಹರ್ಷಿ ವಾಲ್ಮೀಕಿ ವಿವಿದೋದ್ದೆಶ ಸೇವಾ ಸಂಘ ಉಪಾಧ್ಯಕ್ಷರು, ಜಮಾದಾರ,ಮಲ್ಲಿಕಾರ್ಜುನ ದೊರೆ,ರಮೇಶ ದೊರೆ, ರಾಜಕುಮಾರ ಪಾಟೀಲ, ಸಾಯಿನಾಥ ದೊರೆ, ಬಾಲಾಜಿ ಜಮಾದಾರ, ದೇವಿಂದ್ರ ದೊರೆ, ಬಾಬು ಕೋಡ್ಲಿ, ಶೇಖರ ಕಾದೆಪುರ, ಉಪಸ್ಥಿತರಿದ್ದರು.

ವರದಿ,: ರಾಜೇಂದ್ರ ಪ್ರಸಾದ್

error: Content is protected !!