ಭೂಪಾಲ್: ಹನ್ನೆರಡು ಕೋಟಿ ರೂ ಮೌಲ್ಯದ ಐಫೋನ್ ಹೊತ್ತೊಯ್ಯುತ್ತಿದ್ದ ಟ್ರಕ್ಕನ್ನು ಕದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ, ತನಿಖೆಗಾಗಿ ೮ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ.
ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡಿದಿದ್ದು ಐಫೊನಗಳನ್ನು ಹೊತ್ತಿಕೊಂಡ ಟ್ರಕ್ ಹರ್ಯಾಣದಿಂದ ಮಧ್ಯ ಪ್ರದೇಶದ ಮೂಲಕ ತಮಿಳುನಾಡಿಗೆ ಹೊರಟಿತ್ತು ಅಗಸ್ಟ್ ೧೫ ರ ರಾತ್ರಿ ಟ್ರಕ್ ಜೊತೆ ಇದ್ದವ ಚಾಲಕನಿಗೆ ಚಹಾದಲ್ಲಿ ಡ್ರಗ್ಸ್ ಹಾಕಿದ್ದರಿಂದ ಪ್ರಜ್ಞೆಯನ್ನು ಕಳೆದುಕೊಂಡನಂತೆ, ಕಣ್ಣು ತಗೆದಾಗ ಸುಮಾರು ನಾಲ್ಕು ಸಾವಿಯ ಮೌಲ್ಯಯುತ ಮೋಬೈಲಗಳನ್ನು ಎಗರಿಸಿದ್ದು ಕಂಡು ಬಂತು ಎಂದು ಲಖನಂದನ್ ಠಾಣಾ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ವ್ಯಾಪ್ತಿ ಆದಾರದ ಮೇಲೆ ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ಜಿಲ್ಲಾ ಎಸ್.ಪಿ ವಿಕಾಸ ಕುಮಾರ ಪ್ರಕರಣದ ತನಿಖೆಗಾಗಿ ೮ ತಂಡ ರಚಿಸಿದ್ದಾರೆ, ಮೇಲ್ನೊಟಕ್ಕೆ ಇದು ಸೆಕ್ಯೂರಿಟ ಕೈವಾಡ ಕಂಡು ಬರುತ್ತಿದೆ, ಕಾರಣ ಆತ ಘಟನೆ ಆದಾಗಿನಿಂದ ನಾಪತ್ತೆ ಆಗಿದ್ದಾನೆ. ಸೆಕ್ಯೂರಿಟಿ ವಾರಿಸ್ ಇವನ ಬಗ್ಗೆ ವಿಚಾರಣೆ ಮಾಡದೇ ಕೆಲಸಕ್ಕೆ ನೇಮಿಸಿಕೊಂಡೊದ್ದು ಬೆಳಕಿಗೆ ಬಂದಿದೆ. ಮೋಬೈಲ ಲೂಟಿಕೋರರು ಮೇವಾತ್ ಪ್ರದೇಶದವರು ಇರಬಹುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ವರದಿ : ಸದಾನಂದ