ಕಾಳಗಿ: ತಾಲೂಕಿನ ಕೋಡ್ಲಿ ಗ್ರಾಮದ ಹೊರ ವ ಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸೋಮವಾರ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಭೇಟಿ ನೀಡಿದರು.ವಿವಿಧ ತರಗತಿಗಳಿಗೆ ತೆರಳಿ ವಿದ್ಯಾರ್ಥಿನಿಯರೊಂದಿಗೆ ಊಟೋಚಾರ, ಅಭ್ಯಾಸದ ಬಗ್ಗೆ ಚರ್ಚೆಸಿದರು. ಕಳೆದ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು ಈ ಬಾರಿ ಉತ್ತಮ ಫಲಿತಾಂಶ ತರಲು ಶಿಕ್ಷಕರು ಅವಿರತವಾಗಿ ಶ್ರಮಿಸಬೇಕು ಮತ್ತು ಮಕ್ಕಳಿಗೆ ಅಭ್ಯಾಸಕ್ಕೆ ಪೂರಕವಾದ ಎಲ್ಲಾ ವ್ಯವಸ್ಥೆ ಕೈಗಳುವಂತೆ ಕಿವಿಮಾತು ಹೇಳಿದರು.ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಮೊದಲು ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಆ ದಿಶೆಯಲ್ಲಿ ಅವಿರತ ಪ್ರಯತ್ನ ಮುಖ್ಯ. ಆರೋಗ್ಯದ ಕಡೆ ಕೂಡ ಗಮನ ಹರಿಸಬೇಕೆಂದು ಎಸ್ ಎಲ್ ಸಿ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.ನಂತರ ಶಾಲಾ ಮುಂಭಾಗದಲ್ಲಿ ಸಸಿ ನೆಟ್ಟರು. ಕಾಳಗಿ ತಹಸಿಲ್ದಾರ್ ಪೃಥ್ವಿರಾಜ್ ಪಾಟೀಲ್, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ, ಉಪ ತಹಸೀಲ್ದಾರ್ ರವಿಕುಮಾರ್, ಕಂದಾಯ ನಿರೀಕ್ಷಕರು ಬಸವಣ್ಣಪ್ಪ ಹೂಗಾರ್, ಅನಿಲ್ ಜಮಾದಾರ್,ರಟಕಲ್ ಪಿ ಎಸ್ ಐ ಶಿಲಾದೇವಿ, ವಸತಿ ಶಾಲೆಯ ಪ್ರಾಂಶುಪಾಲ ಡಾ. ರಾಜಶೇಖರ್ ಮಾಂಗ್, ವಾರ್ಡನ್ ಶಿವಕುಮಾರ್ ಹಿರೇಮಠ ಶಿವಾನಂದ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ
