“ತಾಜಲಪೂರ ಗ್ರಾಮಸ್ಥರಿಗೆ ಜಲದಿಗ್ಬಂದನ” ತುರ್ತು ಪರಿಸ್ಥಿತಿ ಯಲ್ಲೂ ಗ್ರಾಮ ಬಿಟ್ಟು ಬಾರದ ಪರಿಸ್ಥಿತಿ

ಚಿಂಚೋಳಿ : ತಾಲುಕಿನ ತಾಜಲಪೂರ ಗ್ರಾಮಕ್ಕೆ ಜಲದಿಗ್ಬಂಧನ ಆಗಿದ್ದು, ಕೇಳದಂಡೆ ಮುಲ್ಲಾಮಾರಿ ಯಿಂದ ನೀರು ಬಿಡಿತ್ತಿರುವುದರಿಂದ ತಾಜಲಪೂರ ಗ್ರಾಮಕ್ಕೆ ಹೋಗಲು ಈ ಹಳೆಯ ಮೇಲ ಸೇತುವೆ ದಾರಿಯಾಗಿದ್ದು ಈಗ ಮೇಲ ಸೇತುವೆ ಯಿಂದ ನೀರು ಹರಿಯುತ್ತಿದ್ದು, ತಾಜಲಪೂರ ಗ್ರಾಮಸ್ಥರು ಯಾವುದೇ ಕಾರ್ಯ ವಿರಲಿ, ತುರ್ತು ಪರಿಸ್ಥಿತಿ, ಇದ್ದರೂ ಕೂಡ ಹೋಗುವಂತಿಲ್ಲಾ, ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿ ಗಳಿಗೆ ಮನವಿಯನ್ನು ಸಲ್ಲಿಸಿದರು ಇಲ್ಲಿಯವರೆಗೆ ಹೊಸ ಮೇಲ್ಸೇತುವೆ ಅನುಮೋದನೆ ದೊರಕಿಲ್ಲಾ ಆದಷ್ಟು ಬೇಗ ಈ ಗಂಭೀರ ಸ್ಥಿತಿ ಅರಿತು ರಾಜ್ಯ ಸರಕಾರ, ಕಲಬುರ್ಗಿ ಉಸ್ತುವಾರಿ ಮಂತ್ರಿಗಳು, ಗಮನ ಹರಿಸಿ ತಾಜಲಪೂರ ಗ್ರಾಮಸ್ಥರ ಅನಕೂಲ ಮಾಡಿ ಕೊಡಬೇಕೆಂಬುದೆ ನಮ್ಮ ಜೆ.ಕೆ. ನ್ಯೂಸ್ ಆಶಯ.

ಸತೀಶ ರೆಡ್ಡಿ ತಾಜಲಪೂರ ಪ್ರತಿಕ್ರಿಯಿಸಿ ನಮ್ಮ ಗ್ರಾಮಕ್ಕೆ ಬರಬೇಕೆಂದರೆ ಹಳೆಯ ಮೇಲ ಸೇತುವೆ ಯಿಂದ ಬರಬೇಕು ಮಳೆಗಾಲದಲ್ಲಿ ಗ್ರಾಮಸ್ಥರು ತುರ್ತು ಪರಿಸ್ಥಿತಿ ಪಟ್ಟಣಕ್ಕೆ ಹೋಗಬೇಕೆಂದರೆ ತುಂಬ ಸಮಸ್ಯೆ ಆಗುತ್ತಿದ್ದೆ ಅದಷ್ಟು ಬೇಗ ಹೋಸ ಮೇಲ ಸೇತುವೆ ಹಣದ ಅನುಮೋದನೆ ಯನ್ನು ರಾಜ್ಯ ಸರಕಾರ ಅಧಿಕಾರಿಗಳಿಗೆ ನೀಡಬೇಕು ಎಂದರು.

 

ವರದಿ : ರಾಜೇಂದ್ರ ಪ್ರಸಾದ್

error: Content is protected !!