ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ತ ವಾಂತಿ ಮಾಡಿಕೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

ಬೆಂಗಳೂರು : ಸುರಕ್ಷಿತ ನಗರ ರಂದು , 2:16/12/2025 ಗೋವಿಂದರಾಜನಗರದ 2ನೇ ಹಂತದ ಸಮೃದ್ಧಿ ಅಪಾರ್ಟ್‌ ಮೆಂಟ್‌ನಲ್ಲಿ ಸುಮಾರು 55 ವರ್ಷದ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ತ ವಾಂತಿ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು, ಬೆಳಿಗ್ಗೆ 11.49 ಗಂಟೆಗೆ “ನಮ್ಮ-112″ ಗೆ ಕರೆ ಮಾಡಿ ತಿಳಿಸಿರುತ್ತಾರೆ.

ಕೂಡಲೆ ಕಾರ್ಯಪ್ರವೃತ್ತರಾದ “ನಮ್ಮ-112” ಸಿಬ್ಬಂದಿಯವರು, ಹೊಯ್ಸಳ-80 ಕ್ಕೆ ಸ್ವಯಂ ಚಾಲಿತವಾಗಿ ಮಾಹಿತಿಯನ್ನು ರವಾನಿಸಲಾಯಿತು. ನಂತರ ಹೊಯ್ಸಳ-80 ರಲ್ಲಿ ಕರ್ತವ್ಯದಲ್ಲಿದ್ದ ಶಿವಕುಮಾರ್.ಎಂ. ಎಎಸ್‌ಐ ಹಾಗೂ ಶ್ರೀ. ರಾಜೇಶ್, ಹೆಚ್.ಸಿ ರವರುಗಳು ಕೇವಲ 12 ನಿಮಿಷದೊಳಗೆ, ಸ್ಥಳಕ್ಕೆ ಆಗಮಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದ ವ್ಯಕ್ತಿಗೆ ಪ್ರಾಥಮಿಕ ನೆರವು ನೀಡಿ, ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿರುತ್ತಾರೆ.

ಈ ಘಟನೆಯು ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸುವಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣ ನೆರವು ನೀಡುವಲ್ಲಿ ಕಾರ್ಯಕ್ಷಮತೆ ಹಾಗೂ ಬದ್ದತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ. ಬೆಂಗಳೂರು ನಗರ ಪೊಲೀಸರು ತ್ವರಿತ ಹಾಗೂ ಮಾನವೀಯವಾಗಿ ಸ್ಪಂದಿಸಿದ್ದಾರೆ.

ವರದಿ : ಮುಬಾರಕ್

error: Content is protected !!