ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಹೊಸ ಚಿಕೋಡಿ ಜಿಲ್ಲೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಗರ್ ಎಂಬ ನಾಮಕರಣ ಮಾಡಲು ದಸಂಸ ಆಗ್ರಹ

ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಹೊಸ ಚಿಕೋಡಿ ಜಿಲ್ಲೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಗರ್ ಎಂಬ ನಾಮಕರಣ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಭೀಮಾ ಮಾರ್ಗ ಸಂಘಟನೆ ರಾಜ್ಯ ಸಂಘಟನಾ ಸಂಚಾಲಕರು ಸಂಜೀವ್ ಕಾಂಬಳೆ ಒತ್ತಾಯಿಸಿದ್ದಾರೆ.

ಚಿಕ್ಕೋಡಿ ನಗರದಲ್ಲಿ ನಡೆದ ತಹಸಿಲ್ದಾರ್ವರಿಗೆ ಮನವಿ ನೀಡಿ , ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾನಾಡಿದವರು.
ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಆಯಿತು ಅದೇ ರೀತಿ ಚಿಕ್ಕೋಡಿ ಮತ್ತು ಗೋಕಾಕ್ ಜಿಲ್ಲೆ ಮಾಡಬೇಕೆಂದು ಹೋರಾಟ ಇದೆ. ಚಿಕ್ಕೋಡಿ ನ್ಯಾಯಾಲಯದಲ್ಲಿಅಂಬೇಡ್ಕರ್ ಅವರು ವಾದ ಮಂಡನೆ ಮಾಡಿರುತ್ತಾರೆ. ಅದೇ ರೀತಿ ಚಿಕ್ಕೋಡಿಯಿಂದ ಬಾಬಾಸಾಹೇಬರ ಪಕ್ಷದ ಅರ್ಪಿಎದಿಂದ ದತ್ತ ಕಟ್ಟಿ ಚಂಪಾ ಬಾಯಿ ಭೂಗಲೇ ಆಯ್ಕೆಯಾಗಿರುತ್ತಾರೆ. ಹೀಗಾಗಿ ಬಾಬಾ ಸಾಹೇಬರ ನೆನಪಿನಲ್ಲಿ ಚಿಕ್ಕೋಡಿ ಜಿಲ್ಲೆಗೆ ಅವರ ಹೆಸರು ಇಡಬೇಕು ಎಂದು ಅನೇಕ ಬಾರಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಮಾಡಲಾಗಿದೆ.
ಹಾಗಾಗಿ ಚಿಕ್ಕೋಡಿ ನೂತನ ಜಿಲ್ಲೆಗೆ ಡಾಕ್ಟರ್ ಬಿಆರ್ ಅಂಬೇಡ್ಕರ್ ನಗರ್ ಎಂದು ಹೆಸರಿಡಬೇಕು . ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅದೇ ರೀತಿ ಹುಬ್ಬಳ್ಳಿಯಲ್ಲಿ ಗರ್ಭಿಣಿ ಮಗಳ ಹತ್ಯೆ ಮಾಡಿದ್ದು ಕಂಡೆನಿಯ. ಇಂತಹ ಜಾತಿ ವ್ಯವಸ್ಥೆ ವಿರುದ್ಧ ಕಠಿಣ ಕಾನೂನು ತಂದು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯರು ಆನಂದ ಅರಬಳ್ಳಿ ಮಾತನಾಡಿ ಚಿಕ್ಕೋಡಿ ಜಿಲ್ಲೆಯಾಗಬೇಕು ಜೊತೆಗೆ ಅಂಬೇಡ್ಕರ್ ಅವರ ನೆನಪಿನಲ್ಲಿ ಅವರ ಹೆಸರಿಡಬೇಕು ಎಂದು ಹೇಳಿದರು.
ಜಿಲ್ಲಾ ಸಂಚಾಲಕ ಪರಶುರಾಮ್ ಟೋನಪೆ. ರಾಜ್ಯ ಸಂಘಟನಾ ಸಂಚಾಲಕ ರೇಖಾ ಬಂಗಾರಿ ಜಿಲ್ಲಾ ಸಂಚಾಲಕ ಆರ್ತಿ ಕಾಂಬಳೆ, ತಾಲೂಕ ಸಂಗಟನಾ ಸಂಚಾಲಕ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರಾಜು ಗೌರವಗೋಳ, ನಿಪ್ಪಾಣಿ ತಾಲೂಕ ಅಧ್ಯಕ್ಷ ಸದಾಶಿವ ಕಾಂಬಳೆ ಚಿಕ್ಕೋಡಿ ತಾಲೂಕಾಧ್ಯಕ್ಷ ಈರಪ್ಪ ಸಂತವ್ಗೋಳ ಜಿಲ್ಲಾ ಸಂಘಟನಾ ಸಂಚಾಲಕ ನಿಖಿತ ಗದಾಡೇ, ಅಥಣಿ ತಾಲೂಕ ಸಂಚಾಲಕ ಪ್ರಕಾಶ್ ಕಾಂಬಳ್ಳಿ ಕಾಗವಾಡ ತಾಲೂಕ ಸಂಚಾಲಕ್ ರೋಹಿತ್ ಬಸ ನಾಯಕ್ , ಹುಕ್ಕೇರಿ ತಾಲೂಕ ಸಂಚಾಲಕ ಕವಿತಾ ಬೇವಿನ್ ಕಟ್ಟಿ ವೀರಪ್ಪ ಕಾಂಬಳೆ ಅನಿಲ್ ಕಾಂಬಳೆ ಶುಭ ಕಂಬಳಿ ಗೌರಮ್ಮ ಹಂದಿಗೊಂದ್ ಕಾಕಾ ಸಾಹೇಬ್ ಸನ್ವಿಗೊಳ್ ಸಂದೀಪ್ ಶಿಂಗೆ ಭೀಮಪ್ಪ ತಳಕೇರಿ ಅಶೋಕ್ ಸಂತ್ವಗೋಳ ಅಮಿತ್ ಕಾಂಬಳೆ ಅಪ್ಪಣ್ಣ ಗೌರವಗೋಳ ಚಂದ್ರಕಾಂತ್ ಕಾಂಬ್ಳೆ ಶ್ರೀರಂತೆ ಇನ್ನಿತರರು ಭಾಗಿಯಾಗಿದ್ದರು.

ವರದಿ : ಅಮರ ಮಾಳಗೆ ಚಿಕ್ಕೋಡಿ

error: Content is protected !!