ಚಿಂಚೋಳಿ ತಾಲೂಕಿನಾದ್ಯಂತ ಗ್ರಾಮ ಹಳ್ಳಿಗಳಿಗೆ ಸೇತುವೆ ಸಮಸ್ಯಕ್ಕೆ ಒಂದು ಜೀವ ಬಲಿ..! 

ಹೌದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಗಳಿಲ್ಲ ಸೇತುವೆ ಇದ್ದರು ಅದು ಮಳೆಗಾಲದಲ್ಲಿ ಬಳಕೆಯಾಗದಷ್ಟು ಚಿಕ್ಕದಾಗಿವೆ,

ಸಣ್ಣ ಸೇತುವೆ ಇರುವುದರಿಂದ ದಲಿತ ಓಣಿಯ ಬಾಬು ನೂಲ್ಕರ್ ಎಂಬ ವ್ಯಕ್ತಿ ನೀರಿನ ರಬಸಕ್ಕೆ ಕೊಚ್ಚಿ ಹೋಗಿ ಹಲವು ದಿನಗಳ ನಂತರ ಶವವಾಗಿ ಪತ್ತೆ,

 

ಹೌದು

 

ನೀರಿನ ರಭಸಕ್ಕೆ ಕೊಚ್ಚಿ ಹೋದ ದಲಿತ ಓಣಿಯ ಬಾಬು ತಂದೆ ಗುಂಡಪ್ಪ ನೂಲ್ಕರ್ ಚುಮ್ಮನ್ ಚೋಡ ಹಳ್ಳದ ದಂಡೆಯಲ್ಲಿ ಶವವಾಗಿ ಪತ್ತೆ ಸುಮಾರು 50 ವರ್ಷ ಮೇಲ್ಪಟ್ಟು ಅವರಿಗೆ ಮೂರು ಮಕ್ಕಳು ಒಂದು ಹೆಣ್ಣು ಎರಡು ಗಂಡು ಮಕ್ಕಳು, ದಿನಾಂಕ 31-8-2024 ರಂದು ಸಾಯಂಕಾಲ ಹೋದವರು ಮರಳಿ ಬರಲೇ ಇಲ್ಲ ಅವರ ಹುಡುಕಾಟದಲ್ಲಿ ಕುಟುಂಬಸ್ಥರು ಹರಸಾಹಸ ಪಟ್ಟರು ಆದರೆ ದೈವವಿದೆಯೇ ಬೇರೆಯಾಗಿತ್ತು,

ದಿನಾಂಕ 2.09.2024ರಂದು ಪೊಲೀಸು ಹಾಗೂ ಇತರ ಸಾರ್ವಜನಿಕರ ಹುಡುಕಾಟ ನಡೆಸಿ ಕೊನೆಯದಾಗಿ ಹಳ್ಳದ ದಂಡೆಯಲ್ಲಿ ಅವರ ಕಾಲುಗಳನ್ನು ಕಂಡು ಶವವನ್ನು ಪೊಲೀಸರು ಹಾಗೂ ಸಾರ್ವಜನಿಕರು ಹೊರ ತೆಗೆದರು, ಶವವನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು, ದಲಿತರ ಓಣಿಯಿಂದ ಚುಮ್ಮನಚೋಡ್ ಒಳಗೆ ಬರಲು ಈ ಸಣ್ಣದಾದ ಮೇಲ ಸೇತುವೆ ಇದ್ದು, ಮಳೆಗಾಲದಲ್ಲಿ ದಲಿತರಿಗೆ ಈ ಸಣ್ಣ ಸೇತುವೆ ದಾಟಿ ಬರಲು ಹರಸಾಹಸ ಪಡುತ್ತಾರೆ ಮೊದಲು ಹಲವು ಬಾರಿ ಪತ್ರಿಕಾ ಪ್ರಕಟಣೆಯಲ್ಲಿ ಸುದ್ದಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ, ಈಗ ಒಂದು ಜೀವ ಪ್ರಾಣ ಹೋಗಿದೆ, ಇದಕ್ಕೆ ಹೊಣೆಗಾರರು ಯಾರು? ಜನಪ್ರತಿನಿಧಿಗಳ? ಅಧಿಕಾರಿಗಳ, ದಲಿತರ ಓಣಿ ಎಂದರೆ ಇವರಿಗೆ ನಿರ್ಲಕ್ಷ ನಾ.? ಕಳೆದ ಬಾರಿ ಇದೇ ದಲಿತರ ಓಣಿಯಲ್ಲಿ ಕಾಲರಾ ಡೆಂಗ್ಯೂ ಆಗಿ ಸಾಕಷ್ಟು ಸಮಸ್ಯೆಯನ್ನ ಅನುಭವಿಸಿದ ದಲಿತ ನಿವಾಸಿಗಳು, ಈಗಾಗಲೇ ಹಲವಾರು ಮೂಲಭೂತ ಸೌಕರ್ಯಗಳ ವಂಚಿತ ವಿರುವ ಈ ದಲಿತ ಓಣಿಯ ನಿವಾಸಿಗಳು ಇಂತಹ ಅನಹುತ ದಿಂದ ಶೋಕದಲ್ಲಿ ಒಳಗಾಗಿದ್ದಾರೆ. ಈಗಲಾದರೂ ದಲಿತರ ಓಣಿಗೆ ನ್ಯಾಯ ಸಿಗುತ್ತಾ ಎನ್ನುವುದೇ ಇದೇ ಒಂದು ದೊಡ್ಡ ಯಕ್ಷಪ್ರಶ್ನೆಯಾಗಿದೆ.!?