ಔರಾದ್ : ಅಗ್ನಿ ಅವಘಡದಲ್ಲಿ 11 ಅಂಗಡಿಗಳಿಗೆ ಬೆಂಕಿ ತಗಲಿ ಅಪಾರ ಪ್ರಮಾಣದಲ್ಲಿ ವ್ಯಾಪರಸ್ಥರ ಸಾಮಗ್ರಿಗಳು ಕಳೆದುಕೊಂಡಿದ್ದಾರೆ. ಕುಡಲೇ ಜನಪ್ರತಿನಿಧಿಯಾದವರು ಪಕ್ಷ ಭೇದ ಮರೆತು ಅಂಗಡಿಗಳ ಮಾಲೀಕರಿಗೆ ತಾತ್ಕಾಲಿಕವಾಗಿ ಸರಕಾರದ ನಿವೇಶನದಲ್ಲಿ ಅಂಗಡಿಗಳು ಹಾಕಿಕೊಳ್ಳಲು ತಾಲೂಕು ಸಹಕರಿಸಬೇಕೆಂದು ಲಿಂಗಾಯತ ಸಮಾಜ ಯುವ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈ ಕುರಿತು ತಹಸೀಲ್ದಾರ್ ಮಹೇಶ್ ಪಾಟೀಲ್ ಮಂಗಳವಾರ ಅವರಿಗೆ ಮನವಿಪತ್ರ ಸಲ್ಲಿಸಿದರು. ಬೆಂಕಿಗೆ ಭಸ್ಮವಾಗಿರುವ ಅಂಗಡಿಗಳ ಮಾಲೀಕರಿಗೆ ರಿಂಗ್ ರಸ್ತೆಯಲ್ಲಿರುವ ಸರಕಾರಿ ನಿವೇಶನದಲ್ಲಿ ತಾತ್ಕಾಲಿಕವಾಗಿ ಒಂದು ವರ್ಷ ಶೆಡ್ ನಲ್ಲಿ ಅಂಗಡಿಗಳು ನಡೆಸಿಕೊಳ್ಳಲು ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಉದಗೀರ್ ರಿಂಗ್ ರಸ್ತೆಯಲ್ಲೊರುವ ಬಾಂಡೆ, ಚಪ್ಪಲಿ, ಕಿರಾಣಾ ಅಂಗಡಿಗಳು ಸಂಪೂರ್ಣವಾಗಿ ಸುಟ್ಟಿ ಹೋಗಿವೆ. ಇದರಿಂದ ವ್ಯಾಪಾರಸ್ಥರ ಕುಟುಂಬಗಳು ಬೀದಿಗೆ ಬಂದಿವೆ. ನಿತ್ಯಯೊಬ್ಬರಂತೆ ರಾಜಕೀಯ ಮುಖಂಡರು, ಪ್ರತಿನಿಧಿಗಳು ಸಾಂತ್ವನ ಹೇಳಲು ಅಂಗಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಎಲ್ಲರೂ ಪಕ್ಷ ಭೇದ ಮರೆತು ಸಂಕಷ್ಟ ದಲ್ಲಿರುವ ವ್ಯಾಪಾರಸ್ಥರಿಗೆ ಒಂದು ವರ್ಷಗಳ ಕಾಲ ಅವರಿಗೆ ಶೆಡ್ ಹಾಕಿಕೊಂಡ ವ್ಯಾಪಾರ ಮಾಡಲು ಸಹಕರಿಸಬೇಕು. ಇದಕ್ಕೆ ತಾಲೂಕು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಲಿಂಗಾಯತ ಸಮಾಜ ಯುವ ಸಂಘದ ತಾಲೂಕು ಅಧ್ಯಕ್ಷ ವಿರೇಶ ಅಲಮಾಜೆ, ಪ್ರಮುಖರಾದ ಶಿವು ಗಿರಣೆ, ಸಂದೀಪ ಮೀಸೆ, ಸಂಗಮೇಶ ಗಿರಣೆ, ಅನಿಲ ಕರಂಜೆ, ಸಂಜುಕುಮಾರ ನೌಬಾದೆ, ಅಶೋಕ ಶೆಂಬೆಳ್ಳಿ, ಈಶ್ವರ ಚಿಟಮೇ, ಬಾಲಾಜಿ ದಾಮಾ, ವಿರೇಶ ಮೀಸೆ, ಆನಂದ ದ್ಯಾಡೆ, ಆಕಾಶ ಎಡವೆ ಸೇರಿದಂತೆ ಅನೇಕರಿದ್ದರು.
ವರದಿ : ರಾಚಯ್ಯ ಸ್ವಾಮಿ
