ಹುಮನಾಬಾದ : ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಆಯೋಜಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ), ಹುಮನಾಬಾದ ತಾಲೂಕು. ಹುಮನಾಬಾದ (ಬಿ) ವಲಯದ ಪರಮಪೂಜ್ಯ ಪದ್ಮವಿಭೂಷಣ ಡಾ|| ಡಿ. ವೀರೇಂದ್ರ ಹೆಗ್ಗಡೆ ಯವರ ಹಾಗೂ ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆ ರವರ ಶುಭಾಶೀರ್ವಾದ ಗಳೊಂದಿಗೆ
ಧಾರ್ಮಿಕ ಸುಭಿಕ್ಷಾ ಕಾರ್ಯಕ್ರಮದಲ್ಲಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನಾ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರು, ಬೀದರ ಜಿಲ್ಲಾ ಸಹಕಾರ ಯೂನಿಯನ ಅಧ್ಯಕ್ಷರು ಹಾಗೂ ಡಿ.ಸಿ.ಸಿ. ಬ್ಯಾಂಕಿನ ಉಪಾಧ್ಯಕ್ಷರು ಯುವ ನಾಯಕರಾದ ಅಭಿಷೇಕ.ಆರ್ ಪಾಟೀಲ್ ರವರು ಉದ್ದೇಶಿಸಿ ಮಾತನಾಡಿ ತಾಯಿಂದಿರಿಗೆ ಶುಭ ಹಾರೖಸಿದರು.
ಈ ಸಂದರ್ಭದಲ್ಲಿ ಶ್ರೀ ಷ.ಬ್ರ. ರೇಣುಕಾ ವೀರ ಗಂಗಾಧರ ಶಿವಾರ್ಚಾಯರು, ಕೆ.ಎಮ್.ಎಫ್ ನಿರ್ದೇಶಕರಾದ ರೇವಣಸಿದ್ದಪ್ಪ.ವಿ ಪಾಟೀಲ್, ಮಲ್ಲಿಕಾರ್ಜುನ ಮಾಳಶೆಟ್ಟಿ, ಮುರುಳಿಧರ ಹೆಚ್.ಎಲ್ ಜಿಲ್ಲಾ ನಿರ್ದೇಶಕರು, ವೀರೇಶ.ಎನ್ ತಾಲೂಕ ಯೋಜನಾಧಿಕಾರಿಗಳು, ಮಲ್ಲಯ್ಯ ಹೀರೆಮಠ್, ಹಾಗೂ ಅನೇಕ ತಾಯಿಂದಿರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
