ಜೆಸ್ಕಾಂ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆ ತಕ್ಷಣವೇ ಭರ್ತಿ ಮಾಡುವಂತೆ ವೀರಣ್ಣ ಗಂಗಾಣಿ ಮನವಿ

ಚಿಂಚೋಳಿ, ಕಾಳಗಿ, ತಾಲೂಕಿನಲ್ಲಿ ಜೆಸ್ಕಾಂ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಸಂಬಂಧಿತ ಸೇವೆಗಳು ದೊರೆಯುತ್ತಿಲ್ಲ. ಸಿಬ್ಬಂದಿಗಳ ಕೊರತೆಯಿಂದ ವಿದ್ಯುತ್ ದುರಸ್ತಿ ಕಾರ್ಯ, ಹೊಸ ಸಂಪರ್ಕ, ಟ್ರಾನ್ಸ್‌ಫಾರ್ಮರ್ ದುರಸ್ತಿ, ವಿದ್ಯುತ್ ವ್ಯತ್ಯಯಗಳ ಪರಿಹಾರ ಸೇರಿದಂತೆ ಅನೇಕ ಸೇವೆಗಳು ವಿಳಂಬವಾಗುತ್ತಿವೆ.
ವಿಶೇಷವಾಗಿ ರೈತರಿಗೆ ಕೃಷಿ ಚಟುವಟಿಕೆಗಳ ಸಮಯದಲ್ಲಿ ವಿದ್ಯುತ್ ಸಮಸ್ಯೆಗಳು ಉಂಟಾದಾಗ ಸಿಬ್ಬಂದಿಗಳ ಕೊರತೆಯಿಂದ ತಕ್ಷಣ ಸ್ಪಂದನೆ ಸಿಗದೆ ಕೃಷಿ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ. ಸಾರ್ವಜನಿಕರಿಗೂ ಅನಗತ್ಯವಾಗಿ ಕಚೇರಿಗೆ ಪದೇ ಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಕಾಳಗಿ ತಾಲೂಕಿನಲ್ಲಿ ಜೆಸ್ಕಾಂ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಉತ್ತಮ ಮತ್ತು ತ್ವರಿತ ಸೇವೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಪತ್ರವನ್ನ ವ್ಯವಸ್ಥಾಪಕ ನಿರ್ದೇಶಕರು ಜೆಸ್ಕಾಂ ಕಲಬುರ್ಗಿ ರವರಿಗೆ.
ವೀರಣ್ಣ ಗಂಗಾಣಿ ಅಧ್ಯಕ್ಷರು,
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ
ಕಾಳಗಿ ತಾಲೂಕು ಘಟಕ, ಕಾಳಗಿ ತಾಲುಕಿನ ರೈತರು,ಇತರರು ಸಲ್ಲಿಸಿದರು.ಶ್ರೀ ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ಘಟಕ.ಮಲ್ಲು ಪಾಟೀಲ್ ಉಪಾಧ್ಯಕ್ಷರು ತಾಲೂಕ ಘಟಕ.ನಾಗಬಸ್ಸು ಚಿದರಿ ಅಧ್ಯಕ್ಷರು ಗ್ರಾಮ ಘಟಕ.ಮಂಜು ಪಾಟೀಲ್‌ ರೈತ ಮುಖಂಡರು.ರಮೇಶ್ ಹೆಬ್ಬಾಳ ಕಾರ್ಯದರ್ಶಿ ತಾಲೂಕು ಘಟಕ.ಚಂದ್ರು ಪಾಟೀಲ್ ನಿಪ್ಪಾಣಿ ರೈತ ಮುಖಂಡರು. ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.

error: Content is protected !!