ಶ್ರೀ ಮಹಾವೀರ ಸಹಕಾರಿ ಸಂಘ 26ನೇ ವಾರ್ಷಿಕ ಸಭೆ ಜರಗಿತು

ಹುಕ್ಕೇರಿ: ಶ್ರೀ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘ ಕಳೆದ 2025-26 ನೇ ಸಾಲಿನ ವರ್ಷದಲ್ಲಿ ಪ್ರಗತಿ ಪಥದತ್ತ ಸಾಗಿದ್ದು, ₹4.01 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ಶ್ರೀ ಮಹಾವೀರ ನಿಲಜಗಿ ಹೇಳಿದರು.
ಸಹಕಾರಿ ತತ್ವದ ಮೂಲಕ ಬ್ಯಾಂಕ್‌ನ ಸೇವೆಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಆದ್ಯತೆ ನೀಡಲಾಗಿದೆ. ಬ್ಯಾಂಕ್‌ನ ಮುಂದಿನ ಕಾರ್ಯ ಯೋಜನೆ ಗಳು ಎಲ್ಲವೂ ಕ್ರಿಯಾತ್ಮಕ ಹಾಗೂ ಜನೋಪಕಾರಿಯಾಗಿವೆ. ಗ್ರಾಹಕ- ಸದಸ್ಯರ ಏಳಿಗೆಯಲ್ಲಿ ಬ್ಯಾಂಕಿನ ಏಳಿಗೆ ಇದೆಂಬ ಭಾವನೆ ಮತ್ತು ಧೈಯದೊಂದಿಗೆ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದರು.
ಒಟ್ಟು 3042 ಸದಸ್ಯರಿದ್ದು, ಪ್ರಧಾನ ಕಚೇರಿ ಸೇರಿ ಸಹಕಾರಿಯು ಒಟ್ಟು 17 ಶಾಖೆಗಳನ್ನು ಹೊಂದಿದೆ. 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಹಕಾರಿ ಒಟ್ಟು ವಾರ್ಷಿಕ 1333 ಕೋಟಿ 96 ಲಕ್ಷ 73 ಸಾವಿರ ವಹಿವಾಟು ನಡೆಸಿದೆ. 43.28 ಲಕ್ಷಶೇರು ಬಂಡವಾಳವಿದೆ. 11.66 ಕೋಟಿ ಕಾಯ್ದಿಟ್ಟ ಹಾಗೂ 2 2, 351.76 ಕೋಟಿ ದುಡಿಯುವ ಬಂಡವಾಳವಿದೆ. 275 ಕೋಟಿ, 25 ಲಕ್ಷ ಸಾಲ ವಿತರಿಸಲಾಗಿದ್ದು, 312 ಠೇವುಗಳಿವೆ . 48.85 ಕೋಟಿ ಹೂಡಿಕೆಗಳಿದ್ದು, 4.01 ಕೋಟಿ ಲಾಭ ಗಳಿಸಿದ್ದು. ಶೇ.25 ರಷ್ಟು ಲಾಭಾಂಶ ಎಂದು ಮಾಹಿತಿ ನೀಡಿದರು. 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಹುಕ್ಕೇರಿ ನಗರದ ಸಂಕೇಶ್ವರ ರೋಡ ಜಾಬಾಪೂರ್ ಹತ್ತಿರ ನಮ್ಮ ಸಂಸ್ಥೆಯಿಂದ ಶ್ರೀ ಮಹಾವೀರ್ ಸೂಪರ್ ಮಾರ್ಕೆಟ್ ಕಟ್ಟಡ ಪೂರ್ಣಗೊಳ್ಳುತ್ತಿದೆ ಹಾಗೂ ಶ್ರೀ ಮಹಾವೀರ ಸಂಸ್ಥೆಯಿಂದ ಹಲವು ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಾಲು ಮಾಲೆಯೊಂದಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು ಹಾಗೂ ಜನಸೇವೆಯಲ್ಲಿ ಹೆಚ್ಚಿನ ಕಾರ್ಯ ಮಾಡತೊಡಗಿದೆ ನಮ್ಮ ಸಹಕಾರ 2025 – 2026ನೇ ಸಾಲಿನಲ್ಲಿ 4.1 ಕೋಟಿ ಲಾಭ ಆಗಿರುತ್ತದೆ ಶ್ರೀ ಮಹಾವೀರ ಸೌಹಾರ್ದ ಸಂಘ ಹಾಗೂ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆ ಹೀಗೆ ಹುಕ್ಕೇರಿ ನಗರದ ಸುತ್ತಮುತ್ತಲಿನ ಜನತೆಯ ಆಶೀರ್ವಾದ ನಮಗೆ ಶ್ರೀರಕ್ಷೆ ನಮ್ಮ ತಂದೆಯವರ ಮಾರ್ಗದರ್ಶನ ದಂತೆ ನಾವು ಸದಾ ಸಿದ್ಧ ಎಂದ ಶ್ರೀ ಮಹಾವೀರ ನೀಲಜಗಿ ಶ್ರೀ ಸಂಜು ನೀಲಜಗಿ ಶ್ರೀ ಪ್ರಜ್ವಲ್ ನೀಲಜಿಗಿ ವೇದಿಕೆ ಮೇಲಿರುವ ಗಣ್ಯಮಾನ್ಯರು ಮುಖಂಡರು ಈ ಸಂದರ್ಭದಲ್ಲಿ
ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕರಾದ ಸುಕುಮಾರ ಖತಗಲ್ಲಿ, ಬಾಹುಬಲಿ ಸೊಲ್ಲಾಪುರೆ, ಭರಮಪ್ಪ ಲಟ್ಟಿ , ಸುಕುಮಾರ ಪಾಟೀಲ, ಸಂಜಯ ನಿಲಜಗಿ, ಕಿರಣ ಸೊಲ್ಲಾಪುರೆ, ಅಕ್ಕಪ್ಪ ಖತಗಲ್ಲಿ, ಅಶೋಕ ಪಾಟೀಲ
ಪ್ರಜ್ವಲ ನಿಲಜಗಿ, ಪಾರೇಶ ಗದ್ದಿ, ಅನುಪಮಾ ಕಬಾಡಗೆ, ಅಶ್ವಿನಿ ಪಾಟೀಲ, ಸಿದ್ದಪ್ಪ ಕಂಠಿಕಾರ, ಅಶೋಕ ನಾಯಿಕ, ಮುಖ್ಯ ಕಾರ್ಯ ನಿರ್ವಾಹಕ ರಾಜೇಂದ್ರ ಪಾಟೀಲ, ಪ್ರಧಾನ ಕಚೇರಿ ಹುಕ್ಕೇರಿ ಶಾಖೆಗಳಾದ ಬೆಳಗಾವಿ ಧಾರವಾಡ ಚೆನ್ನಮ್ಮನ ಕಿತ್ತೂರ್ ಬಡಸ್ ಕೆ ಎಚ್ ಘಟಪ್ರಭಾ ಕೊಣ್ಣುರು ಪಾಶ್ಚಾಪೂರ ಹಿಡಕಲ್ ಡ್ಯಾಮ್ ಶಿರುಗುಪ್ಪಿ ರಾಯಬಾಗ್ ಸಂಕೇಶ್ವರ್ ಹುಕ್ಕೇರಿ. ಆಡಳಿತ ಮಂಡಳಿ ಸಲಹಾ ಸಮಿತಿ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!